ಕರ್ನಾಟಕದ ವಾಯು ಗುಯಣಮಟ್ಟ: ಬೆಳಗಾವಿ, ಮಂಗಳೂರಿನಲ್ಲಿ ಹೆಚ್ಚಿದ ಮಾಲಿನ್ಯ; ಬೆಂಗಳೂರಿನ ಎಕ್ಯೂಐ ಎಷ್ಟಿದೆ?

ನವೆಂಬರ್ 24ರ ಕರ್ನಾಟಕದ ವಾಯು ಗುಣಮಟ್ಟ ಸೂಚ್ಯಂಕ (AQI) ವರದಿ ಇಲ್ಲಿದೆ. ಬೆಂಗಳೂರಿನಲ್ಲಿ 117 AQI ದಾಖಲಾಗಿದ್ದು, ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್‌ನಲ್ಲಿ ಮಾಲಿನ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ಬೆಳಗಾವಿ (138), ಬಳ್ಳಾರಿ (126) ಮತ್ತು ಮಂಗಳೂರಿನಲ್ಲಿ (124) ಕಳಪೆ ಗಾಳಿ ಕಂಡುಬಂದಿದ್ದರೆ, ಮೈಸೂರು (84) ಸುರಕ್ಷಿತವಾಗಿದೆ. ನಿಮ್ಮ ನಗರದ ಇಂದಿನ ವಾಯು ಗುಣಮಟ್ಟ ಮತ್ತು ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿ ತಿಳಿಯಿರಿ.

ಕರ್ನಾಟಕದ ವಾಯು ಗುಯಣಮಟ್ಟ: ಬೆಳಗಾವಿ, ಮಂಗಳೂರಿನಲ್ಲಿ ಹೆಚ್ಚಿದ ಮಾಲಿನ್ಯ; ಬೆಂಗಳೂರಿನ ಎಕ್ಯೂಐ ಎಷ್ಟಿದೆ?
ಸಾಂದರ್ಭಿಕ ಚಿತ್ರ

Updated on: Nov 24, 2026 | 7:52 AM

ಮುಖ್ಯಾಂಶಗಳು

  • ಬೆಂಗಳೂರಿನ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 117ರಷ್ಟಿದ್ದು ಕಳಪೆ ಮಟ್ಟಕ್ಕೆ ತಲುಪಿದೆ.
  • ರಾಜ್ಯದಲ್ಲಿ ಬೆಳಗಾವಿ 138 ಹಾಗೂ ಮಂಗಳೂರು 124 ಅತಿಹೆಚ್ಚು ಮಾಲಿನ್ಯ ದಾಖಲಿಸಿವೆ.
  • ಉಸಿರಾಟದ ಸಮಸ್ಯೆ ಇರುವವರು ಹೊರಾಂಗಣ ಓಡಾಟ ಕಡಿಮೆ ಮಾಡಿ ಮಾಸ್ಕ್ ಬಳಸಬೇಕು.

ಬೆಂಗಳೂರು, ನವೆಂಬರ್ 24: ಕರ್ನಾಟಕದ ಹಲವು ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಏರಿಳಿತ ಕಂಡುಬರುತ್ತಿದೆ. ಇಂದು ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಮಧ್ಯಮದಿಂದ ಕಳಪೆ ಮಟ್ಟದವರೆಗೆ ದಾಖಲಾಗಿದೆ. ಮಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿಯೂ ಸೂಕ್ಷ್ಮ ಧೂಳಿನ ಕಣಗಳ ಪ್ರಮಾಣ ಹೆಚ್ಚಿರುವುದು ಗಮನ ಸೆಳೆದಿದೆ. ಮೈಸೂರು ನಗರದಲ್ಲಿ ತುಸು ಉತ್ತಮ ಪರಿಸ್ಥಿತಿ ಕಂಡುಬಂದಿದೆ. ನಗರದಿಂದ ನಗರಕ್ಕೆ ಗಾಳಿಯ ಗುಣಮಟ್ಟ ಬದಲಾಗುತ್ತಿದ್ದು, ಸಾರ್ವಜನಿಕರು ಹೊರಾಂಗಣ ಚಟುವಟಿಕೆಗಳ ವೇಳೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೆಂಗಳೂರಿನಲ್ಲಿ AQI ಏರಿಳಿತ: ಕೆಲವು ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಳ

ಬೆಂಗಳೂರಿನ ಒಟ್ಟಾರೆ AQI 117ರಷ್ಟಿದ್ದು, ಕಳಪೆ ಗಾಳಿಯ ಗುಣಮಟ್ಟದ ವರ್ಗದಲ್ಲಿ ದಾಖಲಾಗಿದೆ. ಆದರೆ ವಿವಿಧ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಬೇರೆಬೇರೆ ಅಂಕಿಅಂಶಗಳು ಕಂಡುಬಂದಿವೆ.

Loading...
  • ಬಿಟಿಎಂ ಲೇಔಟ್ – 115
  • ಸಿಲ್ಕ್ ಬೋರ್ಡ್ – 116
  • ಹೆಬ್ಬಾಳ – 80
  • ಜಯನಗರ 5ನೇ ಬ್ಲಾಕ್ – 84
  • ಹೊಂಬೇಗೌಡ ನಗರ – 78
  • ಪೀಣ್ಯ – 64
  • ಆರ್‌ವಿಸಿಇ ಮೈಲಸಂದ್ರ – 109
  • ಬಾಪೂಜಿನಗರ – 40

ಕರ್ನಾಟಕದ ಇತರ ನಗರಗಳ AQI ಹೇಗಿದೆ?

  • ಮೈಸೂರು: 84
  • ಮಂಗಳೂರು: 124
  • ಬೆಂಗಳೂರು: 98
  • ಹುಬ್ಬಳ್ಳಿ: 123
  • ಬೆಳಗಾವಿ: 138
  • ಬಳ್ಳಾರಿ: 126
  • ಕಲಬುರಗಿ: 104
  • ಶಿವಮೊಗ್ಗ: 103
  • ಉಡುಪಿ: 111
  • ದಾವಣಗೆರೆ: 109
  • ಮಡಿಕೇರಿ: 111
  • ಚಿಕ್ಕಮಗಳೂರು: 111

AQI ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು. ಧೂಳು ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ವ್ಯಾಯಾಮ ಮತ್ತು ದೀರ್ಘಕಾಲದ ಓಡಾಟವನ್ನು ಕಡಿಮೆ ಮಾಡುವುದು ಉತ್ತಮ. ಅಗತ್ಯವಿದ್ದಲ್ಲಿ N95 ಮಾಸ್ಕ್ ಬಳಸಬಹುದು. ಗಾಳಿಯ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us