ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನ ಸಭೆಯಲ್ಲಿ ಅಪಾರ್ಟ್‌ಮೆಂಟ್‌ ವಿಧೇಯಕ-2026 ಅಂಗೀಕಾರ

Apartment Bill 2026: ಅಪಾರ್ಟ್‌ಮೆಂಟ್‌ಗಳ ಆಡಳಿತಕ್ಕೆ ಸಂಬಂಧಿಸಿ ನಿರ್ದಿಷ್ಟ ಕಾರ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬುಧಾವರ ವಿಧಾನ ಸಭೆಯಲ್ಲಿ ಮಂಡಿಸಿದ್ದ ಅಪಾರ್ಟ್‌ಮೆಂಟ್‌(ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ಇಂದು ಅಂಗೀಕಾರಗೊಂಡಿದೆ. ಅಪಾರ್ಟ್‌ಮೆಂಟ್‌ ಸಂಘಗಳ ನೋಂದಣಿ ಕಡ್ಡಾಯದ ಜೊತೆಗೆ ಹಲವು ಪ್ರಮುಖ ವಿಚಾರಗಳನ್ನು ವಿಧೇಯಕ ಒಳಗೊಂಡಿದೆ.

ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನ ಸಭೆಯಲ್ಲಿ ಅಪಾರ್ಟ್‌ಮೆಂಟ್‌ ವಿಧೇಯಕ-2026 ಅಂಗೀಕಾರ
ವಿಧಾನಸಭೆ
Image Credit source: webcast.gov.in
Edited By:

Updated on: Aug 21, 2026 | 3:54 PM

ಬೆಂಗಳೂರು, ಆಗಸ್ಟ್​​ 21: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನ ಸಭೆಯಲ್ಲಿ ಅಪಾರ್ಟ್‌ಮೆಂಟ್‌(ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ಅಂಗೀಕಾರವಾಗಿದೆ. ರಾಜ್ಯದ ಅಪಾರ್ಟ್‌ಮೆಂಟ್‌ಗಳ ಆಡಳಿತಕ್ಕೆ ಸಂಬಂಧಿಸಿ ನಿರ್ದಿಷ್ಟ ಕಾರ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿತ್ತು.

ವಿಧೇಯಕ ಹೇಳೋದೇನು?

Apartment Ownership Bill Passed In Karnataka Assembly Amid Uproar By Opposition

  • ಅಪಾರ್ಟ್‌ಮೆಂಟ್‌ ಸಂಘಗಳ ನೋಂದಣಿ ಕಡ್ಡಾಯ
  • ಒಸಿ ಪಡೆದ 60 ದಿನಗಳೊಳಗೆ ಸಂಘಕ್ಕೆ ದಾಖಲೆ ಹಸ್ತಾಂತರಿಸಬೇಕು
  • ಮಾರಾಟವಾಗದ ಫ್ಲ್ಯಾಟ್‌ ನಿರ್ವಹಣಾ ಶುಲ್ಕ ಬಿಲ್ಡರ್‌ಗಳೇ ಪಾವತಿಸಬೇಕು
  • ಪ್ರಮುಖ ಪುನರ್‌ ನಿರ್ಮಾಣಕ್ಕೆ ಕನಿಷ್ಠ 75% ಮಾಲೀಕರ ಒಪ್ಪಿಗೆ ಕಡ್ಡಾಯ
  • ಸಂಘದ ಕಾರ್ಯಕಾರಿ ಸಮಿತಿ ಅವಧಿ ಗರಿಷ್ಠ 2 ವರ್ಷ
  • ನಿಯಮ ಉಲ್ಲಂಘನೆಗೆ ಗರಿಷ್ಠ 1 ಲಕ್ಷ ರೂಪಾಯಿ ದಂಡ
  • ಮುಂದುವರಿದರೆ ದಿನಕ್ಕೆ ₹1,000 ಹೆಚ್ಚುವರಿ ದಂಡ ವಿಧಿಸಲು ಅವಕಾಶ
  • ಅಪಾರ್ಟ್‌ಮೆಂಟ್‌ ಮಾಲೀಕರ ಸಮಸ್ಯೆಗಳ ಪರಿಹಾರಕ್ಕೆ ಸಮಿತಿ ರಚನೆ
  • ಸಮಸ್ಯೆಗಳ ಪರಿಹಾರಕ್ಕೆ ರಾಜ್ಯಮಟ್ಟದ ಸಲಹಾ ಸಮಿತಿ ರಚನೆಗೆ ಅವಕಾಶ

ಇದನ್ನೂ ಓದಿ:  ರಾಜ್ಯದಲ್ಲಿ 911 ಅಕ್ರಮ ನುಸುಳುಕೋರರ ಪತ್ತೆ: ಪರಿಷತ್‌ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ರ(1963ರ ಕರ್ನಾಟಕ ಅಧಿನಿಯಮ 11) ಅಡಿಯಲ್ಲಿ ಮಂಜೂರಾದ ಏಕ ಫ್ಲ್ಯಾಟ್‌ ಅನುಮೋದನೆಗಳು/ಅಭಿವೃದ್ಧಿ ಯೋಜನೆ ಅನುಮೋದನೆಗಳ ಭಾಗವಾಗಿರುವ ವಿಲ್ಲಾಗಳನ್ನು ಒಳಗೊಂಡಂತೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ 8ಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಯೋಜನೆಗಳಿಗೆ ಮತ್ತು ಅನುಮೋದಿತ ಬಡಾವಣೆಗಳಲ್ಲಿ ರೂಪುಗೊಂಡಿರುವ ಕಟ್ಟಡ ಸ್ಥಳಗಳಲ್ಲಿ ಅಭಿವೃದ್ಧಿ ಪಡಿಸಲಾದ 8ಕ್ಕಿಂತ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಯೋಜನೆಗಳಿಗೆ ಈ ವಿಧೇಯಕ ಅನ್ವಯವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 2:06 pm, Fri, 21 August 26

Loading...
Unable to load recommendations.
Follow Us