ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಹಿನ್ನೆಲೆ ಮಂಕಿಪಾಕ್ಸ್ ನಿರ್ವಹಣೆಗೆ ಆರೋಗ್ಯ ಇಲಾಖೆಯಿಂದ ಗೈಡ್ಲೈನ್ಸ್ ಬಿಡುಗಡೆ

| Updated By: ಆಯೇಷಾ ಬಾನು

Updated on: Aug 01, 2022 | 7:04 PM

ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ಹಿನ್ನೆಲೆ ಮಂಕಿಪಾಕ್ಸ್ ತಡೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಕಳಿಸಿದ್ದಾರೆ.

ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಹಿನ್ನೆಲೆ ಮಂಕಿಪಾಕ್ಸ್ ನಿರ್ವಹಣೆಗೆ ಆರೋಗ್ಯ ಇಲಾಖೆಯಿಂದ ಗೈಡ್ಲೈನ್ಸ್ ಬಿಡುಗಡೆ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಬೆಂಗಳೂರು: ಇತ್ತೀಚೆಗೆ ದೇಶದಲ್ಲಿ ಮಂಕಿಪಾಕ್ಸ್(Monkeypox) ಆತಂಕ ಹೆಚ್ಚಾಗುತ್ತಿದೆ. ಕೇರಳ ಮತ್ತು ದೆಹಲಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಜುಲೈ 31ರಂದು ಮಂಕಿಪಾಕ್ಸ್ಗೆ ದೇಶದಲ್ಲಿ ಮೊದಲ ಬಲಿಯಾಗಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಶಂಕಿತ ವ್ಯಕ್ತಿಗೆ ಇರುವುದು ಚಿಕನ್ ಪಾಕ್ಸ್(Chicken pox) ಹೆದರುವ ಅವಶ್ಯಕತೆ ಇಲ್ಲ. ರಾಜ್ಯಕ್ಕೆ ಮಂಕಿಪಾಕ್ಸ್ ಬಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr K Sudhakar) ತಿಳಿಸಿದ್ದಾರೆ. ಇವುಗಳ ನಡುವೆ ಈಗ ಮಂಕಿಪಾಕ್ಸ್ ನಿರ್ವಹಣೆಗೆ ಆರೋಗ್ಯ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ಹಿನ್ನೆಲೆ ಮಂಕಿಪಾಕ್ಸ್ ತಡೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಕಳಿಸಿದ್ದಾರೆ. ಏರ್ಪೋರ್ಟ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಟೀಮ್ ನೇಮಕ ಮಾಡಲು ಸೂಚಿಸಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಮಂಕಿಪಾಕ್ಸ್ ಲಕ್ಷಣವಿದ್ದರೆ ತಪಾಸಣೆ ಕೈಗೊಳ್ಳಬೇಕು. ಮಂಕಿಪಾಕ್ಸ್ ಸೋಂಕು ದೃಢಪಟ್ಟರೆ 21 ದಿನಗಳ ಕಾಲ ಐಸೋಲೇಷನ್ ಮಾಡಬೇಕು. ಸಂಪೂರ್ಣ ಗುಣವಾಗುವವರೆಗೆ ತಜ್ಞರ ಮೇಲ್ವಿಚಾರಣೆಯಲ್ಲಿರಬೇಕು. ಯುಪಿಹೆಚ್ಸಿಗಳಲ್ಲಿ ಮಂಕಿಪಾಕ್ಸ್ ಬಗ್ಗೆ ಜನರಿಗೆ ಮಾಹಿತಿ ತಿಳಿಸಬೇಕು. ಮಂಕಿಪಾಕ್ಸ್ ದೃಢವಾಗದಿದ್ದರೂ ವರದಿ ಬರುವವರೆಗೆ ಆರೈಕೆಮಾಡಬೇಕು. ಸೋಂಕು ಹರಡದಂತೆ ತಡೆಯುವ ನಿಯಮದಂತೆ ಆರೈಕೆ ಮಾಡಬೇಕು. ಚರ್ಮ, ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಒಪಿಡಿಯಲ್ಲಿ ಹೆಚ್ಚಿನ ನಿಗಾವಹಿಸಿ ವಹಿಸಿ ಎಂದು ಮಂಕಿಪಾಕ್ಸ್ ತಡೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

Published On - 6:57 pm, Mon, 1 August 22