AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಬಿಬಿಎಸ್ ವೈದ್ಯರ ಕಳ್ಳಾಟಕ್ಕೆ ಆರೋಗ್ಯ ಇಲಾಖೆ ಬ್ರೇಕ್: ಕಡ್ಡಾಯ ಸೇವೆ ತಪ್ಪಿಸಿದ 450 ವೈದ್ಯರಿಗೆ 15 ಲಕ್ಷ ರೂ. ದಂಡ!

ಕರ್ನಾಟಕದಲ್ಲಿ ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ ಆರೋಗ್ಯ ಇಲಾಖೆ ತಲಾ 15 ಲಕ್ಷ ರೂಪಾಯಿ ದಂಡ ವಿಧಿಸಿ ಲೀಗಲ್ ನೋಟಿಸ್ ನೀಡಿದೆ. ನಿಯಮ ಉಲ್ಲಂಘಿಸುವ ವೈದ್ಯರ ಪದವಿ ಸರ್ಟಿಫಿಕೇಟ್‌ಗಳನ್ನು ತಡೆಹಿಡಿಯುವ ಕಠಿಣ ಷರತ್ತು ಜಾರಿಗೆ ತರಲು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಜೊತೆ ಚರ್ಚೆ ನಡೆಸಲಾಗುತ್ತಿದ್ದು, ಕರ್ತವ್ಯಕ್ಕೆ ಬಾರದವರ ವಿರುದ್ಧ ದಂಡದ ಜೊತೆಗೆ ಕೇಸ್ ದಾಖಲಿಸಲು ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.

ಎಂಬಿಬಿಎಸ್ ವೈದ್ಯರ ಕಳ್ಳಾಟಕ್ಕೆ ಆರೋಗ್ಯ ಇಲಾಖೆ ಬ್ರೇಕ್: ಕಡ್ಡಾಯ ಸೇವೆ ತಪ್ಪಿಸಿದ 450 ವೈದ್ಯರಿಗೆ 15 ಲಕ್ಷ ರೂ. ದಂಡ!
ಸಾಂದರ್ಭಿಕ ಚಿತ್ರImage Credit source: gettyimages.com
Vinay Kashappanavar
| Edited By: |

Updated on: Jun 12, 2026 | 11:36 AM

Share

ಬೆಂಗಳೂರು, ಜೂನ್ 12: ಸರ್ಕಾರಿ ಕೋಟಾದಡಿ ಸೀಟು ಪಡೆದು ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ಆ ಬಳಿಕ ನಿಯಮದಂತೆ ಗ್ರಾಮೀಣ ಸೇವೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದ 450ಕ್ಕೂ ಹೆಚ್ಚು ಎಂಬಿಬಿಎಸ್ (MBBS) ವೈದ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭರ್ಜರಿ ಶಾಕ್ ನೀಡಿದೆ. ಈ ಎಲ್ಲಾ ವೈದ್ಯರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಇಲಾಖೆಯು, ಪ್ರತಿಯೊಬ್ಬರಿಗೂ ತಲಾ 15 ಲಕ್ಷ ರೂಪಾಯಿ ದಂಡ ವಿಧಿಸಿ ಲೀಗಲ್ ನೋಟಿಸ್ ಜಾರಿಗೊಳಿಸಿದೆ.

ಮುಖ್ಯಾಂಶಗಳು

  • ಕಡ್ಡಾಯ ಗ್ರಾಮೀಣ ಸೇವೆ ತಪ್ಪಿಸಿದ ನಾನೂರೈವತ್ತು ವೈದ್ಯರಿಗೆ ಭಾರಿ ದಂಡ ವಿಧಿಸಲಾಗಿದೆ.
  • ಕರ್ತವ್ಯಕ್ಕೆ ಹಾಜರಾಗದ ವೈದ್ಯರ ಪದವಿ ಪ್ರಮಾಣಪತ್ರ ತಡೆಹಿಡಿಯಲು ಸರ್ಕಾರ ಪ್ಲಾನ್ ಮಾಡಿದೆ.
  • ನಿಯಮ ಉಲ್ಲಂಘಿಸುವವರ ವಿರುದ್ಧ ದಂಡದ ಜೊತೆ ಕೇಸ್ ದಾಖಲಿಸಲು ಇಲಾಖೆ ನಿರ್ಧರಿಸಿದೆ.

2 ಬಾರಿ ನೋಟಿಸ್ ನೀಡಿದ್ರೂ ಕ್ಯಾರೇ ಎನ್ನದ ವೈದ್ಯರು!

ಕರ್ನಾಟಕದ ನಿಯಮಾವಳಿಗಳ ಪ್ರಕಾರ, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿ ಮುಗಿದ ನಂತರ ಕಡ್ಡಾಯವಾಗಿ ಒಂದು ವರ್ಷ ಕಾಲ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆ ಸಲ್ಲಿಸಬೇಕಾಗುತ್ತದೆ. ಆದರೆ, 2018-19ನೇ ಬ್ಯಾಚ್‌ನ 450ಕ್ಕೂ ಹೆಚ್ಚು ವೈದ್ಯರು ಈ ನಿಯಮವನ್ನು ಗಾಳಿಗೆ ತೂರಿ ಕರ್ತವ್ಯದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಈಗ ದಂಡದ ಜೊತೆಗೆ ಕಠಿಣ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗಿದೆ. ಸದ್ಯ ಕಡ್ಡಾಯ ಸೇವೆಗೆ ಹಾಜರಾಗದ ಇತರ ವಿದ್ಯಾರ್ಥಿಗಳಿಗೆ ಕೊನೆಯ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವರ್ಷದಿಂದ ಈ ದಂಡದ ಮೊತ್ತವನ್ನು ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಇನ್ಮುಂದೆ ಸಿಗಲ್ಲ ಪದವಿ ಸರ್ಟಿಫಿಕೇಟ್: ಸಚಿವ ಯು.ಟಿ. ಖಾದರ್ ಕಡಕ್ ಸೂಚನೆ

ದಂಡ ವಿಧಿಸಿದರೂ ವೈದ್ಯರು ಕಡ್ಡಾಯ ಸೇವೆಗೆ ಬರದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರಿಗೆ ಇನ್ಮುಂದೆ ಪದವಿ ಪ್ರಮಾಣಪತ್ರ (Degree Certificate) ನೀಡದಂತೆ ತಡೆಹಿಡಿಯುವ ಹೊಸ ಷರತ್ತನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈ ಬಗ್ಗೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (RGUHS) ಉಪಕುಲಪತಿಗಳ (VC) ಜೊತೆ ಈಗಾಗಲೇ ಮಹತ್ವದ ಚರ್ಚೆ ನಡೆಸಲಾಗಿದ್ದು, ಕಾನೂನು ಅಭಿಪ್ರಾಯ ಪಡೆದು ಈ ನಿಯಮವನ್ನು ಜಾರಿಗೆ ತರಲು ಇಲಾಖೆ ಸಜ್ಜಾಗಿದೆ.

ಇದನ್ನೂ ಓದಿ MBBS Course: NMC ಹೊಸ ಪ್ರಸ್ತಾಪ; MBBS ಪೂರ್ಣಗೊಳಿಸಲು ಇನ್ಮುಂದೆ 10 ವರ್ಷಗಳ ಕಾಲಾವಕಾಶ!

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್, ಯಾರು ಕಡ್ಡಾಯ ಸೇವೆಗೆ ಹಾಜರಾಗುವುದಿಲ್ಲವೋ ಅವರಿಗೆ ಸರ್ಟಿಫಿಕೇಟ್ ನೀಡದಂತೆ ಕಂಡಿಷನ್ ಹಾಕಬೇಕು. ಸರ್ಕಾರಿ ನೇಮಕಾತಿಯಾಗಿಯೂ ಕರ್ತವ್ಯಕ್ಕೆ ಬಾರದವರಿಗೆ ದಂಡದ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ. ಸರ್ಕಾರದ ಈ ಹೈವೋಲ್ಟೇಜ್ ನಿರ್ಧಾರದಿಂದಾಗಿ ಸರ್ಕಾರಿ ಸೇವೆಯಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡುತ್ತಿದ್ದ ವೈದ್ಯರ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ