ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾಹಿತಿ

ಕರ್ನಾಟಕದಲ್ಲಿ ಪ್ರಸ್ತುತ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಇಂದಿನಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಈಗಾಗಲೇ ಉಚಿತ ಪ್ರಯಾಣ ಇರುವುದರಿಂದ, ಈ ಬಸ್ ಪಾಸ್ ಸೌಲಭ್ಯವು ಕೇವಲ ಗಂಡು ಮಕ್ಕಳಿಗೆ ಮಾತ್ರ ಅನ್ವಯಿಸಲಿದೆ. ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಪಾಸ್ ಪಡೆಯುವ ಹಂತ-ಹಂತದ ಮಾಹಿತಿ ಇಲ್ಲಿದೆ.

ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾಹಿತಿ
ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗಾಗಿ ಅರ್ಜಿ ಸಲ್ಲಿಸಿ
Image Credit source: Deccan herald

Updated on: Jun 12, 2026 | 2:18 PM

ಬೆಂಗಳೂರು, ಜೂನ್ 12: ಪ್ರಸ್ತುತ ಶೈಕ್ಷಣಿಕ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಾಗಿ (Student Bus Pass) ಇಂದಿನಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಕುರಿತು ಸಾರಿಗೆ ಇಲಾಖೆಯು ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಈಗಾಗಲೇ ಹೆಣ್ಣುಮಕ್ಕಳು ಉಚಿತ ಬಸ್ ಪ್ರಯಾಣದ ಲಾಭ ಪಡೆಯುತ್ತಿದ್ದು, ಈ ಹೊಸ ಉಚಿತ ಬಸ್ ಪಾಸ್ ಸೌಲಭ್ಯವು ಕೇವಲ ಗಂಡು ಮಕ್ಕಳಿಗೆ ಅನ್ವಯಿಸಲಿದೆ. ಸೇವಾ ಸಿಂಧುವಿನಲ್ಲಿ ಉಚಿತ ಪಾಸ್​ಗೆ ಅರ್ಜಿ ಹೇಗೆ ಸಲ್ಲಿಸಬೇಕೆಂಬ ಹಂತ ಹಂತದ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು

  • ಪ್ರಸಕ್ತ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭವಾಗಿದೆ.
  • ಶಕ್ತಿ ಯೋಜನೆ ಇರುವುದರಿಂದ ಈ ಬಸ್ ಪಾಸ್ ಸೌಲಭ್ಯ ಗಂಡುಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.
  • ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

1. ಪೋರ್ಟಲ್‌ಗೆ ಭೇಟಿ ನೀಡಿ

ಮೊದಲಿಗೆ ಸೇವಾಸಿಂಧು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ.

2. ಲಾಗಿನ್ ಅಥವಾ ನೋಂದಣಿ

ನೀವು ಈಗಾಗಲೇ ಖಾತೆ ಹೊಂದಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಮತ್ತು ಒಟಿಪಿ (OTP) ಬಳಸಿ ಲಾಗಿನ್ ಆಗಿ. ಒಂದು ವೇಳೆ ನೀವು ಹೊಸ ಬಳಕೆದಾರರಾಗಿದ್ದರೆ, ನ್ಯೂ ಯೂಸರ್? ರಿಜಿಸ್ಟರ್ ಹಿಯರ್ (New User? register here) ಕ್ಲಿಕ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ ನೀಡಿ ಹೊಸ ಖಾತೆ ತೆರೆಯಿರಿ.

3. ಅಪ್ಲೈ ಫಾರ್ ಸರ್ವಿಸಸ್

ಲಾಗಿನ್ ಆದ ನಂತರ ಹೋಮ್ ಪೇಜ್‌ನಲ್ಲಿ ಅಪ್ಲೈ ಫಾರ್ ಸರ್ವಿಸಸ್ (Apply for Services) ಮೇಲೆ ಕ್ಲಿಕ್ ಮಾಡಿ, ನಂತರ ವ್ಯೂ ಆಲ್ ಅವೈಲೆಬಲ್ ಸರ್ವಿಸಸ್ (View all available services)ಆಯ್ಕೆಮಾಡಿ. ಸರ್ಚ್ ಬಾಕ್ಸ್‌ನಲ್ಲಿ ಸ್ಟೂಡೆಂಟ್ ಬಸ್ ಪಾಸ್ ಅಥವಾ ನಿಮ್ಮ ಭಾಗದ ಸಾರಿಗೆ ಸಂಸ್ಥೆ ಹೆಸರನ್ನು (KSRTC, BMTC, NWKRTC, KKRTC) ಟೈಪ್ ಮಾಡಿ ಹುಡುಕಿ.

4. ಅರ್ಜಿ ನಮೂನೆ ಭರ್ತಿ ಮಾಡಿ

ಸ್ಕ್ರೀನ್ ಮೇಲೆ ಕಾಣಿಸುವ ಬಸ್ ಪಾಸ್ ಲಿಂಕ್ ಕ್ಲಿಕ್ ಮಾಡಿದಾಗ ಅರ್ಜಿ ತೆರೆದುಕೊಳ್ಳುತ್ತದೆ. ಅದರಲ್ಲಿ ಈ ಕೆಳಗಿನ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ:

ವಿದ್ಯಾರ್ಥಿಯ ವೈಯಕ್ತಿಕ ವಿವರಗಳು: ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಮತ್ತು ಆಧಾರ್ ಸಂಖ್ಯೆ.
ಶೈಕ್ಷಣಿಕ ವಿವರಗಳು: ಶಾಲಾ/ಕಾಲೇಜಿನ ಹೆಸರು, ತರಗತಿ, ಮತ್ತು ಪ್ರಸ್ತುತ ವರ್ಷದ ದಾಖಲಾತಿ ಸಂಖ್ಯೆ (Admission Number).
ಪ್ರಯಾಣದ ವಿವರಗಳು: ನೀವು ಬಸ್ ಹತ್ತುವ ನಿಲ್ದಾಣ (From) ಮತ್ತು ಇಳಿಯುವ ನಿಲ್ದಾಣದ (To) ಹೆಸರು.

5: ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಕೇಳಲಾಗಿರುವ ಜಾಗದಲ್ಲಿ ನಿಮ್ಮ ಫೋಟೋ, ಕಾಲೇಜು ರಶೀದಿ/ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ (JPEG ಅಥವಾ PDF ಫಾರ್ಮ್ಯಾಟ್‌ನಲ್ಲಿ) ಅಪ್‌ಲೋಡ್ ಮಾಡಿ.

6. ಪರಿಶೀಲನೆ ಮತ್ತು ಸಲ್ಲಿಕೆ

ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ. ತಪ್ಪುಗಳಿಲ್ಲದಿದ್ದರೆ ಕ್ಯಾಪ್ಚಾ (Captcha) ಕೋಡ್ ನಮೂದಿಸಿ ಸಬ್ಮಿಟ್ (Submit) ಬಟನ್ ಕ್ಲಿಕ್ ಮಾಡಿ.

7. ಸ್ವೀಕೃತಿ ಪತ್ರ ಡೌನ್‌ಲೋಡ್ ಮಾಡಿ

ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ, ಸ್ಕ್ರೀನ್ ಮೇಲೆ ಒಂದು ಅರ್ಜಿ ಸಂಖ್ಯೆ (Application Reference Number) ಇರುವ ಸ್ವೀಕೃತಿ ಪತ್ರ ಕಾಣಿಸುತ್ತದೆ. ಅದನ್ನು ಪ್ರಿಂಟ್ ಅಥವಾ ಪಿಡಿಎಫ್ ರೂಪದಲ್ಲಿ ಸೇವ್ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ ವಿದ್ಯಾರ್ಥಿಗಳ ಫ್ರೀ ಬಸ್ ಪಾಸ್​ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರು: ಈ ದಾಖಲೆಗಳು ಕಡ್ಡಾಯ

ನಿಮ್ಮ ಅರ್ಜಿಯನ್ನು ಕೃಷಿ/ಸಾರಿಗೆ ಇಲಾಖೆ ಮತ್ತು ನಿಮ್ಮ ಕಾಲೇಜಿನವರು ಆನ್‌ಲೈನ್‌ನಲ್ಲೇ ಪರಿಶೀಲಿಸುತ್ತಾರೆ. ಅರ್ಜಿ ಅನುಮೋದನೆಯಾದ (Approve) ನಂತರ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಬರಲಿದ್ದು, ನಿಗದಿತ ಸಾರಿಗೆ ಕೌಂಟರ್ ಅಥವಾ ಬೆಂಗಳೂರಾಗಿದ್ದರೆ ಒನ್ ಕರ್ನಾಟಕ/ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಪಾಸ್ ಪಡೆದುಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Fri, 12 June 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us