ನಾಳೆ ಮೋಹನ್​​ದಾಸ್ ಪೈ ಮನೆ ಅಥವಾ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ: ನಾರಾಯಣಗೌಡ

ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಹಿನ್ನೆಲೆ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಶೇಷ ಅಭಿಯಾನ ಮುಂದುವರೆದಿದೆ. ಈ ಕುರಿತಾಗಿ ನಗರದಲ್ಲಿ ಪ್ರತಿಕ್ರಿಯಿಸಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ನಾಳೆ ನಮ್ಮ ಕಾರ್ಯಕರ್ತರು ಮೋಹನ್​​ದಾಸ್ ಪೈ ಮನೆ ಅಥವಾ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಎಂದಿದ್ದಾರೆ.

ನಾಳೆ ಮೋಹನ್​​ದಾಸ್ ಪೈ ಮನೆ ಅಥವಾ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ: ನಾರಾಯಣಗೌಡ
ನಾರಾಯಣಗೌಡ, ಮೋಹನ್​​ದಾಸ್ ಪೈ
Edited By:

Updated on: Nov 04, 2026 | 8:07 PM

ಮುಖ್ಯಾಂಶಗಳು

  • ನಾಳೆ ಮೋಹನ್​​ದಾಸ್ ಪೈ ಮನೆ ಅಥವಾ ಕಚೇರಿಗೆ ಮುತ್ತಿಗೆ
  • ಅದನ್ನು ನಾನು ತಡೆಯಲು ಆಗೋದಿಲ್ಲ ಎಂದ ನಾರಾಯಣಗೌಡ
  • ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆಲ್ಲ ಹೆದರಬಾರದು

ಬೆಂಗಳೂರು, ನವೆಂಬರ್​​ 04: ‘ಉದ್ಯಮಿ ಮೋಹನ್​ದಾಸ್ ಪೈ ಒಬ್ಬ ಶಕುನಿ, ಒಬ್ಬ ಮೀರ್​​ ಸಾಧಕ. ನಾಳೆ ಮೋಹನ್​​ದಾಸ್ ಪೈ ಮನೆ ಅಥವಾ ಕಚೇರಿಗೆ ಮುತ್ತಿಗೆ ನಮ್ಮ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ. ಅದನ್ನು ನಾನು ತಡೆಯಲು ಆಗೋದಿಲ್ಲ. ಮುಂದಿನ ದಿನಗಳಲ್ಲಿ ಆತನನ್ನ ಗಡಿಪಾರಿಗಾಗಿ ಅಭಿಯಾನ ಮಾಡುತ್ತೇವೆ’ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಇದಕ್ಕೆಲ್ಲ ಹೆದರಬಾರದು: ನಾರಾಯಣಗೌಡ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾರಾಯಣಗೌಡ, ‘ಮೋಹನ್​ದಾಸ್ ಪೈ ಕನ್ನಡಿಗರ ಜೊತೆಗಿದ್ದುಕೊಂಡು ಕನ್ನಡಿಗರನ್ನ ಮುಗಿಸುವ ವ್ಯಕ್ತಿ. ಕನ್ನಡಿಗರು ತೆರಿಗೆ ಕಟ್ಟುತ್ತಾರೆ. ಉದ್ಯಮಿಗಳಿಗೆ ನೆಲ-ನೀರು ಕೊಟ್ಟಿದ್ದೇವೆ. ನಮಗೆ ಪ್ರಶ್ನೆ ಮಾಡುವ ಹಕ್ಕು ಇಲ್ವಾ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆಲ್ಲ ಹೆದರಬಾರದು’ ಎಂದಿದ್ದಾರೆ.

Loading...

ಇದನ್ನೂ ಓದಿ: ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ: ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಹೇಳಿಕೆ ಬಗ್ಗೆಯೂ ಕಿಡಿ

‘ಮೋಹನ್ ದಾಸ್ ಪೈ ಒಬ್ಬ ಕಲಿಯುಗದ ಶಕುನಿ. ನಾಡಿನ ಮಕ್ಕಳಿಗೆ ವಿಷವುಣಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಆತ ಕನ್ನಡಿಗರ ಋಣದಲ್ಲಿ ಬಿದ್ದಿದ್ದಾನೆ. ಪ್ರತಿಬಾರಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಾನೆ. ಕರವೇ ವಿರುದ್ಧ ಸರ್ಕಾರವನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಾನೆ’ ಎಂದು ನಾರಾಯಣಗೌಡ ಕಿಡಿಕಾರಿದರು.

ಸಿನಿಮಾ ನಟರ ವಿರುದ್ಧವೂ ನಾರಾಯಣಗೌಡ ಆಕ್ರೋಶ 

‘ಇನ್ನು ಐಟಿ ಕಂಪನಿಗಳಿಗೆ ಭೇಟಿ ವೇಳೆ ಯಾವುದೇ ಗಲಾಟೆ ಮಾಡಿಲ್ಲ. ನಾವು ಶಾಂತಿಯುತವಾಗಿ ನಮ್ಮ ಅಭಿಯಾನ ಮಾಡುತ್ತಿದ್ದೇವೆ. ರಾಜ್ಯದ ಮಠಾಧೀಶರು ಈ ಅಭಿಯಾನಕ್ಕೆ ಬೆಂಬಲ ನೀಡಬೇಕು. ಕನ್ನಡ ಸಿನಿಮಾ ನಟರು ಏಕೆ ಕನ್ನಡಿಗರ ಹೋರಾಟ ಬೆಂಬಲಿಸಲ್ಲ, ಸಿನಿಮಾ ಕಲಾವಿದರು ಏನು ಮಾಡ್ತಿದ್ದೀರಾ’ ಎಂದು ಸಿನಿಮಾ ನಟರ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ದ್ರೋಹಿ ನೀನು: ಪೈ ವಿರುದ್ಧ ರೂಪೇಶ್ ರಾಜಣ್ಣ ಆಕ್ರೋಶ

ಉದ್ಯಮಿ ಮೋಹನ್​ದಾಸ್ ಪೈ ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ರೊಚ್ಚಿಗೆದಿದ್ದು, ‘ನಿನಗೆ ಮಾನ, ಮರ್ಯಾದೆ, ಸ್ವಾಭಿಮಾನ ಇದ್ದರೆ ನಿನಗೆ ಕೊಟ್ಟಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ
ಕೂಡಲೇ ಸರ್ಕಾರಕ್ಕೆ ವಾಪಸ್​​ ನೀಡು. ಕನ್ನಡಿಗರ ಭಿಕ್ಷೆ ತಿಂದು ಬದುಕುತ್ತಿರುವ ಕನ್ನಡ ದ್ರೋಹಿ ನೀನು. ಕನ್ನಡಿಗರ ಆಶಯಗಳ ವಿರುದ್ಧ ಸದಾ ವಿಷಕಾರುವ ನೀನು ಕನ್ನಡದ ಅನ್ನು ತಿನ್ನಲು ಯೋಗ್ಯನಲ್ಲ, ತತ್’ ಎಂದು ಆಕ್ರೋಶ ಹೊರಹಾಕಿದ್ದಾರೆ.

3ನೇ ದಿನವೂ ಮುಂದುವರಿದ ಕರವೇ ಆಗ್ರಹ ಅಭಿಯಾನ

ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಹಿನ್ನೆಲೆ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಶೇಷ ಅಭಿಯಾನ ಕೈಗೊಂಡಿದ್ದು, 3ನೇ ದಿನವೂ ಕರವೇ ಅಭಿಯಾನ ಮುಂದುವರೆಯಿತು. ಇಂದು 120ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡಲಾಗಿದೆ. ನ.30ರವರೆಗೆ ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಮನವಿ ಸಲ್ಲಿಲಿದೆ. ಜೊತೆಗೆ ಐಟಿ ಕಂಪನಿಗಳಲ್ಲಿ ಎಷ್ಟು ಕನ್ನಡಿಗರಿದ್ದಾರೆಂದು ಮಾಹಿತಿ ಸಂಗ್ರಹಿಸಿ ಡಿಸೆಂಬರ್ ತಿಂಗಳಲ್ಲಿ ಸಿಎಂಗೆ ಸಲ್ಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us