AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಕಾರಿ ದರ ದಿಢೀರ್ ಏರಿಕೆ: 100ರ ಗಡಿ ದಾಟಿದ ಬೀನ್ಸ್, ಕಂಗಾಲಾದ ಗ್ರಾಹಕ! ಯಾವ ತರಿಕಾರಿಗೆ ಎಷ್ಟು? ಇಲ್ಲಿದೆ ಲಿಸ್ಟ್

Vegetable Price Hike: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತರಕಾರಿ ದರಗಳು ಭಾರಿ ಏರಿಕೆ ಕಂಡಿವೆ. ಬೀನ್ಸ್ ಕೆಜಿಗೆ 100 ರೂಪಾಯಿ ತಲುಪಿದ್ದರೆ, ಕ್ಯಾರೆಟ್ ಮತ್ತು ಟೊಮೆಟೊ ದರಗಳು ಬಹುತೇಕ ದುಪ್ಪಟ್ಟಾಗಿವೆ. ಬಿಸಿಲಿನ ಬೇಗೆಯಿಂದ ಇಳುವರಿ ಕುಂಠಿತವಾಗಿರುವುದು ಮತ್ತು ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ತರಕಾರಿ ದರ ದಿಢೀರ್ ಏರಿಕೆ: 100ರ ಗಡಿ ದಾಟಿದ ಬೀನ್ಸ್, ಕಂಗಾಲಾದ ಗ್ರಾಹಕ! ಯಾವ ತರಿಕಾರಿಗೆ ಎಷ್ಟು? ಇಲ್ಲಿದೆ ಲಿಸ್ಟ್
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on: Apr 21, 2026 | 10:15 AM

Share

ಬೆಂಗಳೂರು, ಏಪ್ರಿಲ್ 21: ಒಂದು ಕಡೆ ಸುಡುತ್ತಿರುವ ಬಿಸಿಲು ಹಾಗೂ ತಾಪಮಾನ ಏರಿಕೆ ಜನರನ್ನು ಹೈರಾಣಾಗಿಸುತ್ತಿದ್ದರೆ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ತರಕಾರಿ ದರಗಳು (Vegetable Price) ಗಗನಕ್ಕೇರುತ್ತಿವೆ. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಪ್ರತಿ ಕೆಜಿ ತರಕಾರಿ ದರದಲ್ಲಿ 10 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗಿರುವುದರಿಂದ ತರಕಾರಿ ಇಳುವರಿ ಕುಸಿದಿದೆ. ಮಾರುಕಟ್ಟೆಗೆ ಬರುತ್ತಿರುವ ತರಕಾರಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಹೋಟೆಲ್ ಮತ್ತು ಸಮಾರಂಭಗಳಿಗೆ ಬೇಡಿಕೆ ಹೆಚ್ಚಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಪಲಾವ್ ಮತ್ತು ಸಾಂಬಾರ್‌ಗೆ ಬಳಸುವ ಬೀನ್ಸ್ ದರ ಈಗ ಕೆಜಿಗೆ 100 ರೂಪಾಯಿ ತಲುಪಿದ್ದು, ಸಾಮಾನ್ಯರ ಕೈಗೆ ಎಟುಕದಂತಾಗಿದೆ.

ಮಾರುಕಟ್ಟೆ ದರ ಪಟ್ಟಿ (ಪ್ರತಿ ಕೆಜಿಗೆ ರೂ.ಗಳಲ್ಲಿ)

ಪ್ರಸ್ತುತ ಮಾರುಕಟ್ಟೆಯಲ್ಲಿನ ದರಗಳು ಮತ್ತು ಕಳೆದ ವಾರದ ದರಗಳ ವ್ಯತ್ಯಾಸ ಹೀಗಿದೆ:

ತರಕಾರಿಗಳು – ಪ್ರಸ್ತುತ ದರ – ಒಂದು ವಾರದ ಹಿಂದಿನ ದರ

  • ಟೊಮೆಟೊ – 35 – 20
  • ಕ್ಯಾರೆಟ್ – 80 – 40 ಹೂಕೋಸು 1ಕ್ಕೆ – 20 – 10
  • ಗೆಡ್ಡೆಕೋಸು – 60 – 30
  • ಮೂಲಂಗಿ – 60 – 40
  • ಬೀನ್ಸ್ – 100 – 50
  • ಬದನೆಕಾಯಿ – 50 – 40
  • ಆಲೂಗಡ್ಡೆ – 50 – 30
  • ಹಾಗಲಕಾಯಿ – 60 – 40
  • ಹೀರೆಕಾಯಿ – 50 – 30
  • ದಪ್ಪಮೆಣಸಿನಕಾಯಿ – 60 – 40
  • ಬೀಟ್ರೂಟ್ – 60 – 40

ವ್ಯಾಪಾರಿಗಳ ಕಳವಳ

ದರ ಏರಿಕೆಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕ್ಷೀಣಿಸುತ್ತಿದೆ. ಬೆಲೆ ಹೆಚ್ಚಾದಂತೆ ಜನರು ತರಕಾರಿ ಖರೀದಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ, ಇದರಿಂದ ನಮಗೆ ವ್ಯಾಪಾರ ಮಾಡುವುದೇ ಕಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಉಷ್ಣ ಅಲೆ ಇನ್ನೂ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ
ತಿಲಕ್ ವರ್ಮಾ ಶತಕ ಬಾರಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಹಾರ್ದಿಕ್
ತಿಲಕ್ ವರ್ಮಾ ಶತಕ ಬಾರಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಹಾರ್ದಿಕ್