ಪೊಲೀಸ್ ಅಪ್ಪನ ಭಯಕ್ಕೆ ಕಿಡ್ನಾಪ್ ಕಥೆ ಕಟ್ಟಿದ ಮಗ; ಶೇವಿಂಗ್ ಬ್ಲೇಡ್​ನಲ್ಲಿ ಕೈ ಕೊಯ್ದುಕೊಂಡು ನಾಟಕ

ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವ ಸಲುವಾಗಿ ತಂದೆ-ತಾಯಿಗಳು ಬಯ್ದು ಕೊಂಚ ಮಟ್ಟಿನ ಭಯವನ್ನು ಇಟ್ಟಿರುತ್ತಾರೆ. ಆದರೆ, ಇದು ಕೆಲವೊಂದು ಬಾರಿ ಎಂತಹ ಎಡವಟ್ಟು ಮಾಡುತ್ತದೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಬ್ಯಾಟರಾಯನಪುರ (Byataryanapura) ಎಎಸ್ಐ ಸುರೇಶ್ ಎಂಬುವವರ ಮಗ ಅಪ್ಪನ ಮೇಲಿನ ಭಯದಿಂದ ತಾನು ಕಿಡ್ಯಾಪ್​ ಆಗಿದ್ದಾಗಿ ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾನೆ. ಯಾಕೆ ನಾಟಕವಾಡಿದ ಗೊತ್ತಾ? ಈ ಸ್ಟೋರಿ ಓದಿ.

ಪೊಲೀಸ್ ಅಪ್ಪನ ಭಯಕ್ಕೆ ಕಿಡ್ನಾಪ್ ಕಥೆ ಕಟ್ಟಿದ ಮಗ; ಶೇವಿಂಗ್ ಬ್ಲೇಡ್​ನಲ್ಲಿ ಕೈ ಕೊಯ್ದುಕೊಂಡು ನಾಟಕ
ಸಾಂದರ್ಭಿಕ ಚಿತ್ರ
Edited By:

Updated on: May 24, 2024 | 9:43 PM

ಬೆಂಗಳೂರು, ಮೇ.24: ಪೊಲೀಸ್ ಅಪ್ಪನ ಭಯಕ್ಕೆ ಶೇವಿಂಗ್ ಬ್ಲೇಡ್​ನಲ್ಲಿ ಕೈ ಕೊಯ್ದುಕೊಂಡು ಕಿಡ್ನಾಪ್ ಕಥೆ ಕಟ್ಟಿದ ಮಗನ ಬಂಡವಾಳ ವಿಚಾರಣೆ ವೇಳೆ ಬಯಲಾಗಿದೆ. ಬ್ಯಾಟರಾಯನಪುರ(Byataryanapura) ಎಎಸ್ಐ ಸುರೇಶ್ ಎಂಬುವವರ ಮಗ ಗೌತಮ್‌, ಮೇ. 21 ರಂದು ಸ್ನೇಹಿತರನ್ನ ಭೇಟಿಯಾಗಿ ಕೆಂಗೇರಿಯಿಂದ ಜ್ಞಾನಭಾರತಿ ಮಂಗನಹಳ್ಳಿ ಕಡೆಗೆ ಬರುತ್ತಿದ್ದ. ಈ ವೇಳೆ ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ ಗೌತಮ್‌, ತುಂತುರು ಮಳೆಯಿಂದಾಗಿ ಬೈಕ್​ನಿಂದ ಆಯಾ ತಪ್ಪಿ ಬಿದ್ದಿದ್ದ. ಈ ಹಿನ್ನಲೆ ಬೈಕ್ ಹಾಗೂ ಮೊಬೈಲ್ ಫೋನ್ ಡ್ಯಾಮೇಜ್ ಆಗಿತ್ತು.

ಪೊಲೀಸ್ ಅಪ್ಪನ ಭಯಕ್ಕೆ ಕಿಡ್ನಾಪ್ ಕಥೆ ಕಟ್ಟಿದ ಮಗ

ಬೈಕ್ ಹಾಗೂ ಫೋನ್ ಹಾನಿಯಾಗಿದ್ದರಿಂದ ತಂದೆ ಬೈಯುತ್ತಾರೆ ಎಂದು ಭಯಗೊಂಡಿದ್ದ ಗೌತಮ್​, ನಂತರ ತಾನೇ ಹೊಸ ಕಥೆ ರೆಡಿ ಮಾಡಿ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದ. ‘ಬೈಕ್​ನಲ್ಲಿ ಬರುವಾಗ ಮೂರು ಬೈಕ್​ಗಳಲ್ಲಿ ಬಂದಿದ್ದ ಆರು ಜನ ಅಪರಿಚಿತರು. ನನ್ನನ್ನು ತಡೆದು, ನೀನು ಎಎಸ್ಐ ಸುರೇಶ್ ಅವರ ಮಗನ ಎಂದು ಕೇಳಿದರು. ಬಳಿಕ ನಿಮ್ಮ ತಂದೆ ಕಾಮಾಕ್ಷಿಪಾಳ್ಯ ಟ್ರಾಫಿಕ್​ನಲ್ಲಿದ್ದಾಗ ನಮಗೆ ತುಂಬಾ ಕಿರುಕುಳ ನೀಡಿದ್ದಾರೆ ಎಂದು ಗಲಾಟೆ ಮಾಡಿ, ನಂತರ ನನ್ನನ್ನು ಬೈಕ್ ಸಮೇತ ಕಿಡ್ನಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಎಡಗೈ, ಎಡಭುಜ, ಮೊಣಕೈಗೆ ಗಾಯ‌ ಮಾಡಿದರು. ನಂತರ ಮನೆ ಮಂದಿಯನ್ನ ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು ಎಂದು ದೂರು ನೀಡಿದ್ದ.

ಇದನ್ನೂ ಓದಿ:ಬೆಂಗಳೂರಿನ ಪ್ರಭುದ್ಧ ಕೊಲೆಯಾಗಿರುವುದು ಧೃಡ, ಓರ್ವ ಅಪ್ರಾಪ್ತ ಪೊಲೀಸ್ ವಶಕ್ಕೆ

ವಿಚಾರಣೆ ವೇಳೆ ಅಸಲಿ ಕಥೆ ಬಯಲು

ದೂರು ಪಡೆದ ಕೂಡಲೇ ತನಿಖೆ ನಡೆಸಿದ ಜ್ಞಾನಭಾರತಿ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಿಡ್ನಾಪ್ ಸಂಬಂಧ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಬಳಿಕ ಗೌತಮ್​ನನ್ನ ವಿಚಾರಣೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ. ಅಪ್ಪನ ಭಯಕ್ಕೆ ತಾನೇ ಕಥೆ ಕಟ್ಟಿ ದೂರು ನೀಡಿದ್ದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ. ಸಧ್ಯ ಗೌತಮ್‌ಗೆ ಜ್ಞಾನಭಾರತಿ ಪೊಲೀಸರು ಬುದ್ದಿ ಹೇಳಿ ಕಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us