ಮುಂಗಾರು ಮಳೆ ಮತ್ತೆ ದುರ್ಬಲ: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಹೇಗಿದೆ?

ಕರ್ನಾಟಕದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಜಲಾಶಯಗಳ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ದಿನನಿತ್ಯದ ವರದಿಯಂತೆ ಮಲೆನಾಡು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದ್ದರೆ, ಬಹುತೇಕ ಭಾಗಗಳಲ್ಲಿ ಮಳೆಯ ಅಭಾವ ಮುಂದುವರಿದಿದೆ.

ಮುಂಗಾರು ಮಳೆ ಮತ್ತೆ ದುರ್ಬಲ: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಹೇಗಿದೆ?
ಸಾಂದರ್ಭಿಕ ಚಿತ್ರ
Image Credit source: PTI

Updated on: Aug 13, 2026 | 9:17 AM

ಬೆಂಗಳೂರು, ಆಗಸ್ಟ್​ 13: ಕರ್ನಾಟಕದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂಗಾರು ಮಳೆ ದುರ್ಬಲವಾಗಿದ್ದು, ಬುಧವಾರವೂ ರಾಜ್ಯದ ಕೇವಲ ಶೇ.5ರಷ್ಟು ಪ್ರದೇಶದಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ಇನ್ನು ರಾಜ್ಯದ ಭೌಗೋಳಿಕ ಪ್ರದೇಶದ ಶೇ.44ರಷ್ಟು ಭಾಗದಲ್ಲಿ ಯಾವುದೇ ಮಳೆಯಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ದೈನಂದಿನ ವರದಿ ಪ್ರಕಾರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ.

ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ಸ್ಥಿತಿಗತಿ

ಕೆಆರ್​​ಎಸ್​​ ಜಲಾಶಯ

ಮಂಡ್ಯದ ಕೆಆರ್​​ಎಸ್ಗ್​ ಜಲಾಶಯದ ಒಳಹರಿವಲ್ಲಿ ಇಳಿಕೆಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ 8 ಸಾವಿರ ಕ್ಯೂಸೆಕ್‌ ಇದ್ದಿದ್ದೀಗ 4,875 ಕ್ಯೂಸೆಕ್​​ಗೆ ಕುಸಿತ ಕಂಡಿದೆ. ಡ್ಯಾಂ ಭರ್ತಿಯಾಗಬಹುದೆಂಬ ನಿರೀಕ್ಷರಯ ನಡುವೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಕಮುಖವಾಗಿರುವ ಕಾರಣ ಒಳಹರಿವಲ್ಲಿ ಭಾರಿ ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟವಿರುವ ಡ್ಯಾಂನಲ್ಲಿ ಸದ್ಯ 109.74 ಅಡಿ ಮಾತ್ರ ನೀರಿದೆ. 2,310 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಹೊಂದಿದೆ.

ಇದನ್ನೂ ಓದಿ: ಕರಾವಳಿ-ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹಾರಂಗಿ ಡ್ಯಾಂ

2859 ಅಡಿ ಗರಿಷ್ಠ ಮಟ್ಟವಿರುವ ಕೊಡಗು ಜಿಲ್ಲೆ ಕುಶಾಲನಗರದ ಹಾರಂಗಿ ಜಲಾಶಯದಲ್ಲಿ ಇಂದು 2858.22 ಅಡಿ ನೀರಿದ್ದು, 4060 ಕ್ಯೂಸೆಕ್ ಒಳಹರಿವು ಮತ್ತು 5000 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಕಬಿನಿ ಅಣೆಕಟ್ಟೆ

ಕಬಿನಿ ಜಲಾಶಯದ ನೀರಿನ ಮಟ್ಟ 82.36 ಅಡಿಗೆ ಇಳಿಕೆ ಕಂಡಿದ್ದು, ಡ್ಯಾಂನ ಗರಿಷ್ಠ ಮಟ್ಟ 84 ಅಡಿಗಳಾಗಿವೆ. ಕಬಿನಿಗೆ 8,448 ಕ್ಯೂಸೆಕ್ ಒಳಹರಿವಿದ್ದರೆ, 10,000 ಕ್ಯೂಸೆಕ್ ನೀರು ಹೊರಹರಿವಿದೆ.

ಆಲಮಟ್ಟಿ ಡ್ಯಾಂ

519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ 519.42 ಮೀಟರ್ ನೀರಿನ ಸಂಗ್ರಹವಿದೆ. 27,979 ಕ್ಯೂಸೆಕ್ ಒಳಹರಿವು ಮತ್ತು 20,155 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ

ಬಸವಸಾಗರ ಜಲಾಶಯ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ 492.23 ಮೀಟರ್ ನೀರಿದ್ದು, ಇದರ ಗರಿಷ್ಠ ಮಟ್ಟ 492.25 ಮೀಟರ್. ಒಳ ಹರಿವು 20 ಸಾವಿರ ಕ್ಯೂಸೆಕ್ ಇದ್ದರೆ ಹೊರ ಹರಿವು 13 ಸಾವಿರ ಕ್ಯೂಸೆಕ್​​ನಷ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us