Karnataka News Highlights: ಯುಪಿಎಸ್ಸಿ ಎನ್ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಶಿವಮೊಗ್ಗದ ಯುವತಿ ದೇಶಕ್ಕೆ ಫಸ್ಟ್
Breaking News Today Live Updates: ಫ್ರೀಡಂ ಪಾರ್ಕ್ನಲ್ಲಿ ಇಂದು ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ ನಡೆಯಲಿದ್ದು, ಸಾಲಮನ್ನಾ ಹಾಗೂ ಸೂಕ್ತ ಬೆಲೆಗೆ ಆಗ್ರಹಿಸಲಾಗಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕರಾವಳಿ ಮತ್ತು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಸಿಕ್ಕಿದೆ.

LIVE NEWS & UPDATES
-
ತುಮಕೂರು-ಬೆಂಗಳೂರು ಇನ್ನೊಂದು ಲೈನ್ ರಸ್ತೆ ಆಗ್ಬೇಕು
ತುಮಕೂರು, ಬೆಂಗಳೂರು ಹೈವೇನಲ್ಲಿ ಟ್ರಾಫಿಕ್ ಸಮಸ್ಯೆ ವಿಚಾರವಾಗಿ ಸಚಿವ ಹೆಚ್ಸಿ ಬಾಲಕೃಷ್ಣ ಮಾತನಾಡಿದ್ದು, ದುರಸ್ತಿ ಕಾರ್ಯ, ವೀಕೆಂಡ್, ಸರಣಿ ರಜೆ ಹಿನ್ನೆಲೆ ವಾಹನ ದಟ್ಟಣೆಯಾಗಿದೆ.ತುಮಕೂರು, ಬೆಂಗಳೂರು ಹೈವೇ 18 ಜಿಲ್ಲೆಗಳಿಗೆ ಸಂಪರ್ಕಿಸುತ್ತದೆ. ಒಂದು ಲೈನ್ ಹೆಚ್ಚು ಮಾಡುವಂತೆ ಸಿಎಂ ಅವರ ಗಮನಕ್ಕೆ ತರುತ್ತೇನೆ. ಟ್ರಾಫಿಕ್ ಸಮಸ್ಯೆಯಿಂದ ಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಮತ್ತೊಂದು ಲೈನ್ ಮಾಡಬೇಕು. ಇಲ್ಲ ಮುಂದೆ ಬಹಳ ಸಮಸ್ಯೆ ಆಗುತ್ತೆ ಎಂದರು.
-
ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಡಿಸಿಯಾಗಿದ್ದ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತಯಾಗಿ ವರ್ಗಾವಣೆ ಮಾಡಲಾಗಿದ್ದರೆ, ಕೆ.ಲಕ್ಷ್ಮೀಪ್ರಿಯ ಅವರನ್ನು ಜಿಬಿಎ ವಿಶೇಷ ಆಯುಕ್ತೆಯಾಗಿ ವರ್ಗಾಯಿಸಲಾಗಿದೆ. ಇನ್ನು ಬೋಯರ್ ಹರ್ಷಲ್ ನಾರಾಯಣರಾವ್ ಉತ್ತರ ಕನ್ನಡ ಡಿಸಿಯಾಗಿದ್ದರೆ, ಪ್ರಕಾಶ್ ಜಿ.ಟಿ.ನಿಟ್ಟಳ್ಳಿ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
-
-
ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. CBSE ಬೋರ್ಡ್ ಇಂದು (ನವೆಂಬರ್ 06) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2027ರ ಫೆ.16ರಿಂದ ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ.
-
ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆ ದರ್ಶನ ಪಡೆದರು. ಇದಕ್ಕೂ ಮುನ್ನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಸನ ಜಿಲ್ಲಾಧಿಕಾರಿ, ಎಸಿ ಸೇರಿದಂತೆ ಹಲವು ರಾಜಕೀಯ ನಾಯಕರು ಸಿದ್ದರಾಮಯ್ಯನವರನ್ನು ಬರ ಮಾಡಿಕೊಂಡರು.
-
ಯುಪಿಎಸ್ಸಿ ಎನ್ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಪ್ರಥಮ ರ್ಯಾಂಕ್
ಯುಪಿಎಸ್ಸಿ ಎನ್ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಶಿವಮೊಗ್ಗದ ಯುವತಿ ದೇಶಕ್ಕೆ ಪ್ರಥಮ ರ್ಯಾಂಕ್ ಬಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿ ಶ್ರೇಯಾ ಗೌಡ, ಯುಪಿಎಸ್ಸಿ ಎನ್ಡಿಎ ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್ ಬಂದಿದ್ದಾರೆ. ಇದರೊಂದಿಗೆ ಮೊದಲ ಅವಕಾಶದಲ್ಲೇ ಯಶಸ್ವಿಯಾಗಿದ್ದಾರೆ. 1-10ನೇ ತರಗತಿವರೆಗೆ ಭದ್ರಾವತಿಯ ಬಿಜಿಎಸ್ ಕಾರೇಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಶ್ರೇಯಾ ಗೌಡ, ಬೆಂಗಳೂರಿನ ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಪೂರ್ಣ. ಮಂಗಳೂರಿನ ಸುರತ್ಕಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡಿದ್ದು, ಸೈನಿಕಳಾಗಬೇಕೆಂಬ ಗಟ್ಟಿಯಾದ ಗುರಿ ಮತ್ತು ಅಪಾರ ಒಲವು ಹೊಂದಿದ್ದರು.
-
-
ಊರುಗಳಿಗೆ ತೆರಳ್ತಿರುವ ಜನ, ಮೆಜೆಸ್ಟಿಕ್ ನಲ್ಲಿ ಜನಜಂಗುಳಿ
ದೀಪಾವಳಿ ಹಬ್ಬ ಹಾಗೂ ವೀಕೆಂಡ್ ಸಾಲು ಸಾಲು ರಜೆ ಹಿನ್ನೆಲೆ ಜನ ಊರುಗಳತ್ತ ಮುಖಮಾಡಿದ್ದಾರೆ. ಇದರಿಂದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿಯಾಗಿದೆ. ಬೆಂಗಳೂರಿನಿಂದ ತಮ್ಮತಮ್ಮ ಊರುಗಳತ್ತ ಹೊರಟ್ಟಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಟಿ, 2,600 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.
-
ಅಂಗನವಾಡಿಯಲ್ಲಿ ಮೊಟ್ಟೆ ಸೇವಿಸಿದ ನಂತರ 8 ಪುಟ್ಟ ಮಕ್ಕಳು ಅಸ್ವಸ್ಥ
ಅಂಗನವಾಡಿ ಕೇಂದ್ರದಲ್ಲಿ ಊಟ ಮಾಡಿದ ಬಳಿಕ ಎಂಟು ಪುಟ್ಟ ಮಕ್ಕಳು ಅಸ್ವಸ್ಥಗೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಾನಂದ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಊಟದ ಜೊತೆಗೆ ಮೊಟ್ಟೆ ನೀಡಲಾಗಿತ್ತು. ಮೊಟ್ಟೆ ಸೇವಿಸಿದ ಬಳಿಕ ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದು, ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೆಟ್ಟು ಹೋದ ಮೊಟ್ಟೆ ನೀಡಿದ್ದರಿಂದಲೇ ಮಕ್ಕಳಿಗೆ ಫುಡ್ ಪಾಯಿಸನ್ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೋಷಕರು ಬಸವನಬಾಗೇವಾಡಿ ಸಿಡಿಪಿಒ ಶಿಲ್ಪಾ ಹಿರೇಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥಗೊಂಡ ಎಂಟು ಮಕ್ಕಳನ್ನು ತಕ್ಷಣ ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
-
-
ಬೆಂಗಳೂರಿನಲ್ಲಿ ಒಂದೇ ಕುಟುಂಬ 7 ಜನರ ಹತ್ಯೆ:ಆರೋಪಿ ಪೊಲೀಸ್ ಕಸ್ಟಡಿಗೆ
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ ನನ್ನು ಕೋರ್ಟ್, 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣ ಸಂಬಂಧ ರಾಜಾಜಿನಗರ ಠಾಣೆ ಪೊಲೀಸರು, ಎಸ್.ಇಂದುಶೇಖರ್ ಅಲಿಯಾಸ್ ಅರ್ಜುನ್ ನನ್ನು ಬಂಧಿಸಿ ಬೆಂಗಳೂರಿನ 32ನೇ ಎಸಿಜೆಎಂ ಕೋರ್ಟ್ಗೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್, ಆರೋಪಿಯನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
-
ಡಿ. 2ರಿಂದ ಡಿಸೆಂಬರ್ 12ರವರೆಗೆ ಚಳಿಗಾಲದ ಅಧಿವೇಶನ
ವಿಧಾನಮಂಡಲದ ಚಳಿಗಾಲದ ಅಧಿವೇಶನ ಇದೇ ಡಿ. 2ರಿಂದ ಡಿಸೆಂಬರ್ 12ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಈ ಬಗ್ಗೆ ರಾಜ್ಯಪಾಲ ಡಾ ಸುಧಾ ಯಾದವ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಸುವರ್ಣಸೌಧದಲ್ಲಿ ಒಟ್ಟು 9 ದಿನಗಳ ಕಾಲ ಈ ಬಾರಿ ಶನಿವಾರವೂ ಸಹ ವಿಧಾನಮಂಡಲ ಕಲಾಪ ನಡೆಯಲಿದೆ.
-
ಬೆಂಗಳೂರಿನ ಹಲವೆಡೆ ಸಾಧಾರಣ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವರುಣನ ಸಿಂಚನವಾಗಿದೆ. ಬೆಳಗ್ಗೆಯಿಂದಲೇ ಮೊಡಕವಿದ ವಾತಾವರಣವಿದ್ದು, ಸಂಜೆ ವೇಳೆ ಮೆಜೆಸ್ಟಿಕ್, ಮಲ್ಲೇಶ್ವರಂ, ಜಾಜಿನಗರ, ಸದಾಶಿವನಗರ, ಶೇಷಾದ್ರೀಪುರಂ ಗಾಂಧಿನಗರ, ಮೈಸೂರ್ ಬ್ಯಾಂಕ್ ಸರ್ಕಲ್ ಸೇರಿದಂತೆ ಹಲವೆಡೆ ಸುತ್ತಮುತ್ತ ತುಂತುರು ಮಳೆಯಾಗುತ್ತಿದೆ.
-
ಶಿವಮೊಗ್ಗ ದಸರಾ ಜಂಬೂಸವಾರಿ ಅವಘಡ ಬೆನ್ನಲ್ಲೇ DCFಗೆ ವರ್ಗಾವಣೆ ಶಿಕ್ಷೆ
ದಸರಾ ಜಂಬೂಸವಾರಿ ವೇಳೆ ಆನೆ ರಂಪಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ವನ್ಯಜೀವಿ ವಿಭಾಗದ DCF ಪ್ರಸನ್ನ ಕೃಷ್ಣ ಪಾಟ್ಗಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜಂಬೂಸವಾರಿ ವಿಘ್ನಕ್ಕೆ DCF ನಿರ್ಧಾರವೇ ಕಾರಣ ಎಂದು DCF ಪ್ರಸನ್ನ ಕೃಷ್ಣ ಪಾಟ್ಗಾರ್ ಅವರನ್ನು ಮಡಿಕೇರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸನ್ನಕೃಷ್ಣ ಪಟ್ಗಾರ್ ಅವರು ಜಂಬೂಸವಾರಿಯ ಕೊನೆ ಕ್ಷಣದಲ್ಲಿ ‘ಸೋಮಣ್ಣ’ ಆನೆಗೆ ಜವಾಬ್ದಾರಿ ನೀಡಿದ್ದರು. ಸೂಕ್ತ ಅನುಭವವಿಲ್ಲದಿದ್ದರೂ ಸೋಮಣ್ಣ ಆನೆಯನ್ನೇ ಆಯ್ಕೆ ಮಾಡಿದ್ದರು. ಹೀಗಾಗಿ ಪ್ರಸನ್ನ ಕೃಷ್ಣ ಪಾಟ್ಗಾರ್ ಅವರಿಂದಲೇ ಈ ಅವಘಡ ನಡೆದಿದೆ ಎಂದು ರಾಜ್ಯ ಸರ್ಕಾರ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿದೆ.
-
ಶಾಸಕ ಕೆ.ವೈ.ನಂಜೇಗೌಡ ವಿರುದ್ಧದ ಇಡಿ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಿರುದ್ಧದ ಇಡಿ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅಕ್ರಮ ಭೂ ಮಂಜೂರಾತಿ ಸಂಬಂಧ ಪೊಲೀಸ್ ಕೇಸ್ ದಾಖಲಾಗಿತ್ತು. ಇದನ್ನೇ ಆಧರಿಸಿ ಇಡಿ ದಾಳಿ ನಡೆಸಿತ್ತು. ಈ ವೇಳೆ ಕೊಮುಲ್ ನೇಮಕಾತಿ ಹಗರಣದ ಬಗ್ಗೆಯೂ ಇಡಿ ತನಿಖೆ ನಡೆಸಿ ಖಾಸಗಿ ದೂರು ದಾಖಲಿಸಿತ್ತು.ಆದರೆ ಮೂಲ ಪ್ರಕರಣದಲ್ಲಿ ಪೊಲೀಸರ ಬಿ ರಿಪೋರ್ಟ್ ಕೋರ್ಟ್ ಅಂಗೀಕರಿಸಿತ್ತು. ಹೀಗಾಗಿ ಇಡಿಗೆ ಪ್ರತ್ಯೇಕ ತನಿಖೆ ವ್ಯಾಪ್ತಿ ಇಲ್ಲವೆಂದು ಕೆ.ವೈ.ನಂಜೇಗೌಡ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿದ್ದಾರೆ. ಇದನ್ನು ಆಲಿಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ, ಇಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
-
ಬಿಜೆಪಿ ಪಾದಯಾತ್ರೆ ವೇಳೆ ಎಡವಿಬಿದ್ದ ಮಾಜಿ ಶಾಸಕ L.ನಾಗೇಂದ್ರ
ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಅಭಿಯಾನ ಪಾದಯಾತ್ರೆ ವೇಳೆ ಮೈಸೂರು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಎಲ್.ನಾಗೇಂದ್ರ ಎಡವಿಬಿದ್ದಿರುವ ಘಟನೆ ನಡೆದಿದೆ. ಮೈಸೂರಿನ ಟೌನ್ಹಾಲ್ನಿಂದ ಶುರುವಾದ ಬಿಜೆಪಿ ಪಾದಯಾತ್ರೆ, ಇರ್ವಿನ್ ರಸ್ತೆಯಲ್ಲಿ ಸಾಗುವಾಗ ಎಲ್.ನಾಗೇಂದ್ರ ಬಿದ್ದಿದ್ದಾರೆ.
-
ನವೆಂಬರ್ 16ರಂದು ವಿಧಾನಪರಿಷತ್ಗೆ ನೂತನ ಎಂಎಲ್ಸಿಗಳ ಪ್ರಮಾಣವಚನ ಸ್ವೀಕಾರ!
ವಿಧಾನಪರಿಷತ್ನ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಶಶೀಲ್ ನಮೋಶಿ, ಎಸ್.ವಿ. ಸಂಕನೂರು, ಕೆ.ಎಂ. ಸುರೇಶ್ ಹಾಗೂ ಎ.ಪಿ. ರಂಗನಾಥ್ ಅವರು ನವೆಂಬರ್ 16ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಕಾಸಸೌಧದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಇತ್ತೀಚೆಗೆ ನಡೆದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಜಯಗಳಿಸಿದ ನಾಲ್ವರು ನೂತನ ಎಂಎಲ್ಸಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
-
2 ಕೋಟಿ ರೂ. ಬೇಡಿಕೆಯಿಟ್ಟು ಹಾವೇರಿ ರಾಜಕೀಯ ಮುಖಂಡನಿಗೆ ಹನಿಟ್ರ್ಯಾಪ್: ಆರೋಪಿ ಮಹಿಳೆಯ ಬಂಧನ!
ಸಿಸಿಟಿವಿ ಉದ್ಯಮದಲ್ಲಿ ₹25 ಲಕ್ಷ ಹೂಡಿಕೆ ಮಾಡುವುದಾಗಿ ನಂಬಿಸಿ ಹಾವೇರಿಯ ರಾಜಕೀಯ ಮುಖಂಡನನ್ನು ಬೆಂಗಳೂರಿಗೆ ಕರೆಸಿಕೊಂಡ ಮಹಿಳೆಯೊಬ್ಬಳು ಆರ್.ಆರ್.ನಗರದಲ್ಲಿ ಹನಿಟ್ರ್ಯಾಪ್ ಮಾಡಿದ್ದಾಳೆ. ₹2 ಕೋಟಿಗೆ ಬೆದರಿಕೆಯೊಡ್ಡಿದ್ದ ಆರೋಪಿ ಮಹಿಳೆಯನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದು, ಉಳಿದ ಏಳು ಮಂದಿ ಸಹಚರರಿಗಾಗಿ ಶೋಧ ನಡೆಸುತ್ತಿದ್ದಾರೆ.
-
ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು!
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ದೆಹಲಿಯಲ್ಲಿ ನಡೆದ CWRC ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಈಗಾಗಲೇ ಕುಡಿಯುವ ನೀರಿಗೆ ಅಭಾವ ಎದುರಾಗಿರುವಾಗ ಈ ಶಿಫಾರಸು ತೀವ್ರ ಕಳವಳಕ್ಕೆ ಕಾರಣವಾಗಿದೆ.
-
ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರು ಕಾರ್ಮಿಕರು ದಾರುಣ ಸಾವು, ನಾಲ್ವರಿಗೆ ಗಂಭೀರ ಗಾಯ!
ಆನೇಕಲ್ ಗಡಿಭಾಗ ತಮಿಳುನಾಡಿನ ಹೊಸೂರು ಸಿಪ್ಕಾಟ್ ಬಳಿಯ ಬಾಲಾಜಿ ಗೇರ್ಸ್ ಖಾಸಗಿ ಕಾರ್ಖಾನೆಯಲ್ಲಿ ನಿರ್ಮಾಣ ಹಂತದ ಕಾಂಕ್ರೀಟ್ ಸೆಂಟ್ರಿಂಗ್ ಏಕಾಏಕಿ ಕುಸಿದು ಭೀಕರ ದುರಂತ ಸಂಭವಿಸಿದೆ. ಕಾಂಕ್ರೀಟ್ ಮೋಲ್ಡಿಂಗ್ ಕಾಮಗಾರಿ ವೇಳೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕುಮರೇಶನ್ (39), ಮೈಕೆಲ್ (26) ಹಾಗೂ ಶ್ರೀನಿವಾಸನ್ (26) ಎಂಬ ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮತ್ತೂ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುರಕ್ಷತಾ ಮುನ್ನೆಚ್ಚರಿಕೆ ವಹಿಸದ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್ ಹಾಗೂ ಎಸ್ಪಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕ್ರೇನ್ಗಳ ಮೂಲಕ ಮೃತದೇಹಗಳನ್ನು ಹೊರತೆಗೆದಿದ್ದಾರೆ.
-
7 ಜನರ ಹತ್ಯಾಕಾಂಡ: 2.5 ಕೋಟಿ ರೂ. ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಹಂತಕ!
ಶ್ರೀರಾಮಪುರದಲ್ಲಿರುವ ಸುನೀತಾ ತಾಯಿಯ 2.5 ಕೋಟಿ ಮೌಲ್ಯದ ಜಾಗದ ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನಾಲ್ಕು ಪಾಲಾಗುವ ಬದಲು ಇಡೀ ಆಸ್ತಿ ತನಗೇ ಸಿಗಬೇಕೆಂದು ಇಂದುಶೇಖರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆದರೆ, ತಾನು ಮಾನಸಿಕ ಹಿಂಸೆಗೆ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.
-
ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಒರಳಕಲ್ಲಿನಿಂದ ಕೊಲೆ ಮಾಡಿದ್ದ ಶಂಕೆ!
ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದ ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಂದಿದೆ. ಆರೋಪಿ ಇಂದುಶೇಖರ್ ಬಾಡೂಟದ ಆಮಿಷವಡ್ಡಿ ಕುಟುಂಬದ ಸದಸ್ಯರನ್ನು ಮನೆಗೆ ಕರೆಸಿಕೊಂಡಿದ್ದು, ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ನಿದ್ರಾವಸ್ಥೆಯಲ್ಲಿದ್ದವರನ್ನು ಒರಳಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ಕೃತ್ಯದಲ್ಲಿ ಅಪ್ರಾಪ್ತ ಮಗಳು ಸಾತು ನೀಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
-
7 ಜನರ ಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ!
ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ,ಇದು ಅತ್ಯಂತ ಪೂರ್ವಯೋಜಿತ ಕೃತ್ಯವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಮೃತದೇಹಗಳನ್ನು ವಿಲೇವಾರಿ ಮಾಡಲಾಗಿದೆ. ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದಿದ್ದಾರೆ.
-
ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು
ಆಸ್ತಿ ವಿವಾದ ಹಾಗೂ ಪತ್ನಿ ಮೇಲಿನ ಕೋಪದಿಂದ ಆರೋಪಿ ಇಂದುಶೇಖರ್ 15-20 ದಿನಗಳಲ್ಲಿ ಕುಟುಂಬದ ಏಳು ಮಂದಿಯನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ. ಮೃತದೇಹಗಳನ್ನು ನಂದಿಬೆಟ್ಟ ಹಾಗೂ ಚಾರ್ಮಾಡಿ ಘಾಟ್ನಲ್ಲಿ ಎಸೆದಿದ್ದು, ಈ ಹಿಂದೆ ಸರಗಳ್ಳತನದಲ್ಲೂ ಭಾಗಿಯಾಗಿದ್ದ ಆರೋಪಿಗೆ ಮರಣದಂಡನೆ ನೀಡುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.
-
7 ಜನರ ಕೊಲೆ ಪ್ರಕರಣ: ರಾಜಾಜಿನಗರ ಠಾಣೆಗೆ ನಗರ ಪೊಲೀಸ್ ಆಯುಕ್ತ ಭೇಟಿ!
ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ತನಿಖೆಯ ಪ್ರಗತಿಯ ಪರಿಶೀಲನೆ ನಡೆಸಿದ ಅವರು, ಘಟನೆಯ ಹಿನ್ನೆಲೆ ಹಾಗೂ ಹಿರಿಯ ಅಧಿಕಾರಿಗಳಿಂದ ಮಹಜರು ಪ್ರಕ್ರಿಯೆಯ ಮಾಹಿತಿಯನ್ನು ಪಡೆದುಕೊಂಡರು.
-
7 ಜನರ ಕೊಲೆ ಪ್ರಕರಣ: ಆರೋಪಿಯನ್ನು ನಂದಿ ಬೆಟ್ಟಕ್ಕೆ ಕರೆತಂದು ಸ್ಥಳ ಮಹಜರು!
ಬೆಂಗಳೂರಿನ ಸಾಮೂಹಿಕ ಹತ್ಯೆ ಪ್ರಕರಣದ ಆರೋಪಿಯನ್ನು ರಾಜಾಜಿನಗರ ಪಿಐ ಕೃಷ್ಣ ಎಸ್.ಕೆ ನೇತೃತ್ವದ ಪೊಲೀಸರು ನಂದಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು. ಬಾಲಕ ಪುನೀತ್ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೃತದೇಹ ಸಾಗಿಸಿದ ರೀತಿಯನ್ನು ಪೊಲೀಸರು ಮರುಸೃಷ್ಟಿಸಿ ತನಿಖೆ ನಡೆಸಿದರು. ಮತ್ತಷ್ಟು ಓದಿ
-
ಬಂಡೀಪುರದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೈವೋಲ್ಟೇಜ್ ಸಭೆ!
ಬಂಡೀಪುರದ ಮೇಲುಕಾಮನಹಳ್ಳಿ ಬಳಿಯ ಡಿಸಿಎಫ್ ಕಚೇರಿಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಭಿವೃದ್ಧಿ ಹಾಗೂ ವನ್ಯಜೀವಿ-ಮಾನವ ಸಂಘರ್ಷ ತಡೆಯುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಪಿಸಿಸಿಎಫ್, ಸಿಸಿಎಫ್ ಹಾಗೂ ವನ್ಯಜೀವಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.
-
ಬೆಂಗಳೂರಿನಲ್ಲಿ ಕೌಟುಂಬಿಕ ದ್ವೇಷಕ್ಕೆ ಒಂದೇ ಕುಟುಂಬದ 7 ಮಂದಿಯ ಭೀಕರ ಹತ್ಯೆ!
ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ, ಅತ್ತೆ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂದಿಬೆಟ್ಟದ ಬಳಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಉಳಿದ ಶವಗಳಿಗಾಗಿ ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ; ಪತ್ನಿ ಮೇಲಿನ ದ್ವೇಷಕ್ಕೆ ಇಡೀ ಕುಟುಂಬವನ್ನೇ ಮುಗಿಸಿದ ಪತಿ! https://t.co/Px3vukcj1D #bengaluru #CrimeNews https://t.co/FojExriiWN
— TV9 Kannada (@tv9kannada) November 6, 2026
-
ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ತೂಕ ಇಳಿಸುವ ಚಿಕಿತ್ಸೆ: ಆರೋಗ್ಯ ಇಲಾಖೆ ದಾಳಿ!
ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ನಲ್ಲಿ ಅನಧಿಕೃತವಾಗಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ನೀಡುತ್ತಿದ್ದ ಆರೋಪದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಪರಿಶೀಲನೆ ವೇಳೆ ಅಲ್ಲಿ ಸಂಗ್ರಹಿಸಿಡಲಾಗಿದ್ದ ಕೊರಿಯಾ ದೇಶದ ಇಂಜೆಕ್ಷನ್ಗಳು, ವಿವಿಧ ಔಷಧಗಳು ಹಾಗೂ ತೂಕ ಇಳಿಸುವ ಪೌಡರ್ ಬಾಕ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತಷ್ಟು ಓದಿ
-
‘ರಾಮಾಯಣ’ ಚಿತ್ರಕ್ಕಾಗಿ 1 ಕೋಟಿ ರೂ. ರಾವಣನ ಭವ್ಯ ಸಿಂಹಾಸನ!
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾಗಾಗಿ ಮುಂಬೈನಲ್ಲಿ 150ಕ್ಕೂ ಹೆಚ್ಚು ಭವ್ಯ ಸೆಟ್ಗಳನ್ನು ನಿರ್ಮಿಸಲಾಗಿದೆ. ರಾವಣನಿಗೆ 1 ಕೋಟಿ ರೂಪಾಯಿ ವೆಚ್ಚದ ಸಿಂಹಾಸನ ಹಾಗೂ ಶೂರ್ಪಣಖಿಗೆ 1.5 ಕೋಟಿ ರೂಪಾಯಿ ಬೆಲೆಯ ರಥ ತಯಾರಿಸಲಾಗಿದ್ದು, ಸಣ್ಣ ಬಜೆಟ್ ಸಿನಿಮಾವನ್ನೇ ನಿರ್ಮಿಸುವಷ್ಟು ಹಣ ವ್ಯಯಿಸಲಾಗಿದೆ.
ರಾವಣನ ಸಿಂಹಾಸನ ಎಷ್ಟು ದುಬಾರಿ ನೋಡಿ; ಈ ಹಣದಲ್ಲಿ ಸಣ್ಣ ಬಜೆಟ್ ಚಿತ್ರ ನಿರ್ಮಿಸಬಹುದು
#RamayanaMovie #Yash
https://t.co/LbodDIl573
— TV9 Kannada (@tv9kannada) November 6, 2026
-
ಮೇಖ್ರಿ ಸರ್ಕಲ್ – ಹೆಬ್ಬಾಳ ರಸ್ತೆ 18 ತಿಂಗಳು ಬಂದ್: ಸಂಚಾರ ಮಾರ್ಗ ಬದಲಾವಣೆ!
ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಹಿನ್ನೆಲೆಯಲ್ಲಿ ಮೇಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗಿನ ರಸ್ತೆಯನ್ನು 18 ತಿಂಗಳು ಸಂಪೂರ್ಣ ನಿರ್ಬಂಧಿಸಲಾಗಿದೆ. ಬಸ್, ಲಾರಿ ಸೇರಿದಂತೆ ಭಾರಿ ವಾಹನಗಳಿಗೆ ಪ್ರವೇಶವಿಲ್ಲ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸಲು ಹಾಗೂ ಮುಂಚಿತವಾಗಿ ಪ್ರಯಾಣ ಬೆಳೆಸಲು ಸೂಚಿಸಲಾಗಿದೆ. ಮತ್ತಷ್ಟು ಓದಿ
-
ನಟ ಸಾಯಿ ದುರ್ಗಾ ತೇಜ್ ಅದ್ಧೂರಿ ನಿಶ್ಚಿತಾರ್ಥ!
ಟಾಲಿವುಡ್ ನಟ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅವರ ನಿಶ್ಚಿತಾರ್ಥ ಹೈದರಾಬಾದ್ನ ಹಿಲ್ಟನ್ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಚಿರಂಜೀವಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಸೇರಿದಂತೆ ಮೆಗಾ ಕುಟುಂಬದ ಸದಸ್ಯರು ಶುಭ ಹಾರೈಸಿದ್ದು, ಡಿಸೆಂಬರ್ 10ಕ್ಕೆ ಮದುವೆ ನಿಗದಿಯಾಗಿದೆ.
-
ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರಿಗೆ ಮಳೆ ಕಾಟ
ಹಾಸನ ಜಿಲ್ಲಾದ್ಯಂತ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾಸನಾಂಬೆ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನರೇಟರ್ ವ್ಯವಸ್ಥೆಯೂ ಇಲ್ಲದೆ ಭಕ್ತರು ಕತ್ತಲಲ್ಲೇ ಸರತಿ ಸಾಲಿನಲ್ಲಿ ನಿಂತು ಪರದಾಡಿದರು. ಕೆಲವರು ಮೊಬೈಲ್ ಟಾರ್ಚ್ ಬೆಳಗಿದರೆ, ಇನ್ನು ಕೆಲವರು ಧರ್ಮ ದರ್ಶನದ ಸಾಲಿನಲ್ಲೇ ನಿದ್ರೆಗೆ ಜಾರಿದರು.
Breaking News Today Live Updates in Kannada: ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಸಾವಿರಾರು ರೈತರು ಇಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ನಿಗದಿಪಡಿಸಿದ ಕಬ್ಬಿನ ದರವನ್ನು ವಿರೋಧಿಸಿರುವ ರೈತರು, ರಾಜ್ಯ ಸರ್ಕಾರ ಕಬ್ಬಿಗೆ ನ್ಯಾಯಯುತ ಎಸ್ಎಪಿ ದರ ಹಾಗೂ ಕೇಂದ್ರ ಸರ್ಕಾರ ಎಫ್ಆರ್ಪಿ ದರ ಹೆಚ್ಚಿಸಬೇಕು, ಸಂಪೂರ್ಣ ಸಾಲಮನ್ನಾ ಮಾಡಬೇಕು ಮತ್ತು ಎಕರೆಗೆ ₹25,000 ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಕೌಟುಂಬಿಕ ದ್ವೇಷಕ್ಕೆ ರಾಜಾಜಿನಗರದ ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಸುನೀತಾ ಹಾಗೂ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಹತ್ಯೆಗೈದ ಭೀಕರ ಘಟನೆ ಬೆಳಕಿಗೆ ಬಂದಿದೆ. ಶ್ರೀರಾಮಪುರ ಠಾಣೆಯಲ್ಲಿ ದಾಖಲಾದ ನಾಪತ್ತೆ ದೂರಿನ ತನಿಖೆ ವೇಳೆ ಈ ಘಟನೆ ಬಯಲಾಗಿದ್ದು, ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂದಿಬೆಟ್ಟದ ಬಳಿ ಬಾಲಕ ಪುನೀತ್ನ ಶವ ಸಿಕ್ಕಿದ್ದು, ಉಳಿದ ಶವಗಳಿಗಾಗಿ ಶೋಧ ಮುಂದುವರಿದಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬೆಂಗಳೂರು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
Published On - Nov 06,2026 8:20 AM




