Namma Metro Blue Line: ನಮ್ಮ ಮೆಟ್ರೋ ಬ್ಲೂ ಲೈನ್ ಉದ್ಘಾಟನೆ ಯಾವಾಗ? ಡೆಡ್​ಲೈನ್ ನಿಗದಿಪಡಿಸಿದ ಬಿಎಂಆರ್​ಸಿಎಲ್

ನಮ್ಮ ಮೆಟ್ರೋ ಬ್ಲೂ ಲೈನ್: ಇದು ರಾಜಧಾನಿ ಬೆಂಗಳೂರಿನ ಅತಿ ಉದ್ದದ ಮೆಟ್ರೋ ಮಾರ್ಗ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಲೈನ್ ಕೂಡ ಹೌದು. ಈ ಮೆಟ್ರೋ ಮಾರ್ಗದ ಕಾಮಗಾರಿ ಮುಗಿಸಲು ಬಿಎಂಆರ್ಸಿಎಲ್, ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದೆ. ಇದರಿಂದ ಪ್ರಯಾಣಿಕರು ಖುಷಿಯಾಗಿದ್ದಾರೆ.

Namma Metro Blue Line: ನಮ್ಮ ಮೆಟ್ರೋ ಬ್ಲೂ ಲೈನ್ ಉದ್ಘಾಟನೆ ಯಾವಾಗ? ಡೆಡ್​ಲೈನ್ ನಿಗದಿಪಡಿಸಿದ ಬಿಎಂಆರ್​ಸಿಎಲ್
ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ
Updated By: Ganapathi Sharma

Updated on: Sep 03, 2025 | 9:27 AM

ಬೆಂಗಳೂರು, ಸೆಪ್ಟೆಂಬರ್ 3: ನಮ್ಮ ಮೆಟ್ರೋ ಯೆಲ್ಲೋ ಲೈನ್​ (ಆರ್​ವಿ ರಸ್ತೆಯಿಂದ ಬೊಮ್ಮಸಂದ್​ರ ಸಂಪರ್ಕಿಸುವ) ಆಗಸ್ಟ್ 10 ರಂದು ಕೊನೆಗೂ ಲೋಕಾರ್ಪಣೆಯಾಗಿದೆ. ಇದರೊಂದಿಗೆ ನಗರದ ಎಲ್ಲಾ ಮೆಟ್ರೋ (Namma Metro) ಕಾಮಗಾರಿಗಳಿಗೂ ವೇಗ ಸಿಕ್ಕಂತಾಗಿದೆ. ಇದೀಗ ಸೆಂಟ್ರಲ್ ಸಿಲ್ಕ್ ಬೋರ್ಡ್​​ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಮುಗಿಸಿ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಬಿಎಂಆರ್ಸಿಎಲ್ (BMRCL) ಡೆಡ್ಲೈನ್ ನೀಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ 2-A ಕಾಮಗಾರಿ ಮುಗಿಸಲು 2026 ಸೆಪ್ಟೆಂಬರ್, ಕೆ.ಆರ್ ಪುರ ಟು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್ 2-B ಕಾಮಗಾರಿ ಮುಗಿಸಿ ಮೆಟ್ರೋ ರೈಲು ಸಂಚಾರ ಮಾಡಲು 2027 ರ ಜೂನ್ ಅಥವಾ ಜುಲೈ ಗೆ ಡೆಡ್ಲೈನ್ ನೀಡಲಾಗಿದೆ.

ಈಗಾಗಲೇ ಬ್ಲೂ ಲೈನ್ ಮಾರ್ಗದಲ್ಲಿ ಸಿವಿಲ್ ವರ್ಕ್ ಮುಗಿಯುವ ಹಂತದಲ್ಲಿದ್ದು ಟ್ರ್ಯಾಕ್ ಕೆಲಸ ಆರಂಭವಾಗಿದೆ. ಸಿಲ್ಕ್ ಬೋರ್ಡ್ ಟು ಏರ್ ಪೋರ್ಟ್ (58 ಕಿಮೀ) ಎಲ್ಲವೂ ಎಲಿವೇಟೆಡ್ ಸ್ಟೇಷನ್​ಗಳಾಗಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ (19.75 ಕಿಮಿ) 13 ಸ್ಟೇಷನ್​ಗಳು.ಕೆಆರ್. ಪುರ ಟು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (38.44) 17 ಸ್ಟೇಷನ್​ಗಳು.

38 ಚಾಲಕರಹಿತ ರೈಲುಗಳಿಗೆ ಆರ್ಡರ್

ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಅಂದಾಜು 38 ಡ್ರೈವರ್ಲೆಸ್​ ಟ್ರೈನ್​ಗಳಿಗೆ ಈಗಾಗಲೇ ಆರ್ಡರ್ ನೀಡಲಾಗಿದೆ. 3 ನೇ ಹಂತದ ಆರೆಂಜ್ ಲೈನ್ ಮತ್ತು 2A-2B ಬ್ಲೂ ಲೈನ್ ಮೆಟ್ರೋ ಪ್ರಯಾಣಿಕರಿಗಾಗಿ ಕೆಂಪಾಪುರದಲ್ಲಿ ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್ ಓಪನ್ ಆಗಲಿದೆ.

ಇದನ್ನೂ ಓದಿ
ಕೆಆರ್​ ಮಾರುಕಟ್ಟೆಯಿಂದ ಹೆಬ್ಬಾಳಕ್ಕೆ ಹೂವಿನ ಮಂಡಿ ಸ್ಥಳಾಂತರ?
ಮಾಡೆಲ್, ಫಿಟ್ನೆಸ್ ಟ್ರೈನರ್ ಕೋಲಾರದ ಸುರೇಶ್ ಫ್ಲೊರಿಡಾದಲ್ಲಿ ಸಾವು
ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ಮೇಲೆತ್ತುವಾಗ ಶಾಕ್: ಯುವಕ ಸಾವು
ಗ್ರೇಟರ್ ಬೆಂಗಳೂರು: ಐದು ಪಾಲಿಕೆಗೆ ಆಯುಕ್ತರ ನೇಮಕ, ಆಡಳಿತ ಹೇಗಿರಲಿದೆ?

ಇದನ್ನೂ ಓದಿ: ಮುಂದಿನ ವಾರದಿಂದ ಟ್ರ್ಯಾಕಿಗಿಳಿಯಲಿದೆ ನಮ್ಮ ಮೆಟ್ರೋ ಯೆಲ್ಲೋ ಲೈನ್ ನಾಲ್ಕನೇ ರೈಲು

ಒಟ್ಟಿನಲ್ಲಿ ಸಾವಿರಾರು ಐಟಿ ಪಾರ್ಕ್​ಗಳಿಗೆ ಈ ಬ್ಲೂಲೈನ್ ಸಂಪರ್ಕ ಕಲ್ಪಿಸಲಿದ್ದು, ಇದರಿಂದ ಲಕ್ಷಾಂತರ ಜನರಿಗೆ ಸಹಾಯವಾಗುವುದರ ಜೊತೆಗೆ, ನಗರದಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ