ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳಿಂದ ಮೆಟ್ರೋ ಹಳದಿ‌ ಮಾರ್ಗ ತಪಾಸಣೆ, 14 ದಿನ ಟೆಸ್ಟಿಂಗ್

ಶೀಘ್ರದಲ್ಲೇ ಹಳದಿ ಮಾರ್ಗದ ಆರ್ವಿ ರೋಡ್ ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲು ವಾಣಿಜ್ಯ ಸಂಚಾರ ಮಾಡಲಿದೆ. ನಿನ್ನೆಯಿಂದ ಕೇಂದ್ರ ರೈಲ್ವೆ ಅಧಿಕಾರಿಗಳು ಚೀನಾದ ಡ್ರೈವರ್ಲೆಸ್ ರೈಲಿನ ತಪಾಸಣೆ ನಡೆಸಲಿದ್ದು, ಹದಿನೈದು ದಿನಗಳ ಕಾಲ ಈ ಟೆಸ್ಟಿಂಗ್ ನಡೆಯಲಿದೆ. ನಂತರ ಚೀನಾದ ರೈಲಿನ ಭವಿಷ್ಯ ನಿರ್ಧಾರವಾಗಲಿದೆ.

ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳಿಂದ ಮೆಟ್ರೋ ಹಳದಿ‌ ಮಾರ್ಗ ತಪಾಸಣೆ, 14 ದಿನ ಟೆಸ್ಟಿಂಗ್
ಮೆಟ್ರೋ ಹಳದಿ‌ ಮಾರ್ಗ ತಪಾಸಣೆ
Follow us
Kiran Surya
| Updated By: ಆಯೇಷಾ ಬಾನು

Updated on: Sep 10, 2024 | 6:55 AM

ಬೆಂಗಳೂರು, ಸೆ.10: ಆರ್ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಹಳದಿ ಮಾರ್ಗದಲ್ಲಿ (Metro Yellow Line) ಹದಿನೈದು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರ ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಧಿಕಾರಿಗಳಿಂದ ಆಸಿಲೇಷನ್ ಮತ್ತು ಇಬಿಡಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಅಂದರೆ ಈ ರೈಲಿನಲ್ಲಿ ಎಷ್ಟು ಪ್ರಯಾಣಿಕರು ಸಂಚಾರ ಮಾಡಬಹುದು, ಎಷ್ಟು ವೇಗದಲ್ಲಿ ಈ ರೈಲು ಸಂಚಾರ ಮಾಡುತ್ತದೆ, ಸಿಗ್ನಲ್ ಟೆಸ್ಟ್, ಬ್ರೇಕ್ ಕ್ಯಾಪಾಸಿಟಿ ಟೆಸ್ಟ್ ಹೀಗೆ ನಾನಾ ರೀತಿಯಲ್ಲಿ ಚೀನಾದ ಡ್ರೈವರ್ಲೆಸ್ ರೈಲಿನ ಪರಿಶೀಲನೆ ಮಾಡಲಾಗುತ್ತಿದೆ.

ಹಳದಿ ಮೆಟ್ರೋ ರೈಲು ಮಾರ್ಗದ ವಿಶೇಷತೆಗಳು

  • ಚಾಲಕ ರಹಿತ ಮೆಟ್ರೋ ಮಾರ್ಗವು 19.15 ಕಿಮೀ ಹೊಂದಿದೆ
  • ಆರ್ ರಸ್ತೆ – ಬೊಮ್ಮಸಂದ್ರದ ನಡುವೆ ಕನೆಕ್ಟ್‌ ಮಾಡಲಿದೆ
  • ಇದು ಒಟ್ಟು ಬರೋಬ್ಬರಿ 16 ನಿಲ್ದಾಣಗಳನ್ನ ಹೊಂದಿದೆ
  • ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ
  • ಬೋಗಿಗಳಲ್ಲಿ 24 ಸಿಸಿ ಟಿವಿ‌ ಇದ್ರೆ, ಮುಂಭಾಗದಲ್ಲಿ 2 ಸಿಸಿಟಿವಿ ಇರಲಿದೆ. ಪ್ರಯಾಣದ ದೃಶ್ಯವನ್ನ ಸೆರೆ ಹಿಡಿಯಲಿದೆ.

ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿವೆ. ರಸ್ತೆ,ಮೇಲ್ಸೇತುವೆ,ಅದರ ಮೇಲ್ಭಾಗದಲ್ಲಿ ಈ ಮೆಟ್ರೋ ಸಂಚರಿಸುವ ನಿಲ್ದಾಣ ಇರಲಿದ್ದು, ಇದರ ಮತ್ತೊಂದು ವಿಶೇಷತೆಯಾಗಿದೆ.

ಇದನ್ನೂ ಓದಿ: ಬೆಂಗಳೂರು: ಬೆಮಲ್​ನಲ್ಲಿ ಸಿದ್ಧವಾಗ್ತಿದೆ ನಮ್ಮ ಮೆಟ್ರೋ ಚಾಲಕರಹಿತ ರೈಲು!

ಇನ್ನೂ ನಿನ್ನೆಯಿಂದ 12 ರಿಂದ 15 ದಿನಗಳ ವರೆಗೆ ಈ ಪರೀಕ್ಷೆಗಳು ನಡೆಯಲಿದೆ. 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗ ಹದಿನಾರು ಮೆಟ್ರೋ ಸ್ಟೇಷನ್ ಗಳು ಬರಲಿದ್ದು,ಈಗಾಗಲೇ ಹಳದಿ ಮಾರ್ಗದಲ್ಲಿ ಟ್ರಯಲ್ ಕಾರ್ಯ ಪೂರ್ಣಗೊಂಡಿದೆ. ಚೀನಾದ ಡ್ರೈವರ್ಲೆಸ್ ರೈಲುಗಳಿಂದ ಟ್ರ್ಯಾಕ್ ಮೇಲೆ ಟ್ರಯಲ್ ರನ್ ನಡೆಸುತ್ತಿದ್ದಾರೆ. ಆರ್ಡಿಎಸ್ಓ ಅಧಿಕಾರಿಗಳ ಟೆಸ್ಟಿಂಗ್ ರಿಪೋರ್ಟ್ ಸಲ್ಲಿಸಿದ ನಂತರ ಕೇಂದ್ರದ ರೈಲ್ವೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಳದಿ ಮಾರ್ಗದ ಮೆಟ್ರೋ ರೈಲು ವಾಣಿಜ್ಯ ‌ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ.

ಒಟ್ಟಿನಲ್ಲಿ ಹಲವು ರೀತಿಯ ವಿಶೇಷತೆಗಳನ್ನ‌ ಹೊಂದಿರುವ ಡ್ರೈವರ್ ಲೆಸ್ ಮೆಟ್ರೋ 37 ಬಗೆಯ ಅಗ್ನಿ ಪರೀಕ್ಷೆಗೆ ಒಳಗಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲನೆಯ ವಾರದಲ್ಲಿ ಡ್ರೈವರ್ ಲೆಸ್ ಮೆಟ್ರೋದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆ ದಿನಕ್ಕಾಗಿ ಮೆಟ್ರೋ ಪ್ರಯಾಣಿಕರು ಕಾಯುತ್ತಿರೋದಂತು ಸತ್ಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು