ಶಾಲೆಗಳಲಿಲ್ಲ ಡಿಜಿಟಲ್ ವಾಚ್​ಗೆ ಎಂಟ್ರಿ: ಶಾಲಾ ಮಕ್ಕಳಿಗೆ ಡಿಜಿಟಲ್ ವಾಚ್ ನಿರ್ಬಂಧ

ಇತ್ತೀಚೆಗೆ ಶಾಲೆಗಳಲ್ಲಿ ಮಕ್ಕಳ ಮೊಬೈಲ್ ಕ್ರೇಜ್ ವ್ಯಾಪಕವಾಗಿದೆ. ಹೀಗಾಗಿಯೇ ಶಾಲಾ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆಗೆ ಕಡಿವಾಣ ಕೂಡಾ ಹಾಕಿತ್ತು. ಆದ್ರೆ ಕಿಲಾಡಿ ಶಾಲಾ ಮಕ್ಕಳು ಈಗ ಮೊಬೈಲ್ ಬಿಟ್ಟು ಮತ್ತೊಂದು ತಂತ್ರಜ್ಞಾನ ಮೊರೆ ಹೋಗಿದ್ದು ಈಗ ಇದಕ್ಕೂ ಬ್ಯಾನ್ ಭೀತಿ ಎದುರಾಗಿದೆ. ಏನಿದು ತಂತ್ರಜ್ಞಾನ ಯಾಕೆ ಈ ನಿರ್ಬಂಧ ಈ ಸ್ಟೋರಿ ಓದಿ.

ಶಾಲೆಗಳಲಿಲ್ಲ ಡಿಜಿಟಲ್ ವಾಚ್​ಗೆ ಎಂಟ್ರಿ: ಶಾಲಾ ಮಕ್ಕಳಿಗೆ ಡಿಜಿಟಲ್ ವಾಚ್ ನಿರ್ಬಂಧ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Aug 15, 2024 | 2:59 PM

ಬೆಂಗಳೂರು, ಆಗಸ್ಟ್​.15: ಶಾಲೆಗಳಲ್ಲಿ ಪುಟಾಣಿ ಮಕ್ಕಳು ಡಿಜಿಟಲ್ ವಾಚ್ ಮೂಲಕವೇ ಮೊಬೈಲ್ ಇಲ್ಲದೆ ಎಲ್ಲ ಕುತಂತ್ರ ಮಾಡ್ತಿದ್ದಾರೆ. ಶಾಲಾ ತರಗತಿಗಳಲ್ಲಿ ಶಿಕ್ಷಕರು ನೀಡುವ ಗಣಿತ ಲೆಕ್ಕಗಳನ್ನು ಮಕ್ಕಳು ಈ ಡಿಜಿಟಲ್ ವಾಚ್ ಮೂಲಕ ಉತ್ತರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಏನೇ ಉತ್ತರ ಬೇಕು ಅಂದ್ರೂ ಡಿಜಿಟಲ್ ವಾಚ್ ನಲ್ಲಿ ಗೂಗಲ್ ಮಾಡ್ತಾರೆ. ಚಾಟ್ ಮಾಡ್ತಾರೆ ಎಂದು ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ವಿರೋಧ ಕೇಳಿ ಬಂದಿದೆ.

ಶಾಲೆಗಳಲ್ಲಿ ಡಿಜಿಟಲ್ ವಾಚ್ ಬ್ಯಾನ್​ಗೆ ಮನವಿ

ಸ್ಮಾರ್ಟ್ ವಾಚ್ ವಿರುದ್ಧ ನಗರದ ಖಾಸಗಿ ಶಾಲೆಗಳ ಒಕ್ಕೂಟ ಸಿಡಿಮಿಡಿ ಅಂತಿವೆ. ಈಗಾಗಲೇ ಹಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಡಿಜಿಟಲ್ ವಾಚ್ ಬಳಕೆಗೆ ನಿಷೇಧ ಹೇರಿವೆ. ಖಾಸಗಿ ಶಾಲೆಗಳ ನಿರ್ಧಾರಕ್ಕೆ ಶಿಕ್ಷಕರು ಹಾಗೂ ಪೋಷಕರ ಮಿಶ್ರ ಪ್ರತಿಕ್ರಿಯೆ ಕೇಳಿ ಬರ್ತಿದೆ. ಡಿಜಿಟಲ್ ವಾಚ್ ಮಕ್ಕಳ ಡಿಸ್ಟ್ರ್ಯಾಕ್ಟ್ ಮಾಡುತ್ತೆ. ಮಕ್ಕಳು ಮೊಬೈಲ್​ನಲ್ಲಿ ಮಾಡುವ ಎಲ್ಲ ಕೆಲಸ ಈ ಮೊಬೈಲ್ ವಾಚ್ ಮೂಲಕ ಮಾಡ್ತಾರೆ ಅಂತ ವಿರೋಧ ಹೊರ ಹಾಕ್ತಿದ್ದಾರೆ. ಹೀಗಾಗಿ ಶಾಲೆಗಳ ಪ್ರವೇಶಕ್ಕೆ ಈ ಡಿಜಿಟಲ್ ವಾಚ್ ಬ್ಯಾನ್ ಮಾಡಬೇಕು ಅಂತಾ ರೂಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.

ಇದನ್ನೂ ಓದಿ: ರಾಜ್ಯದ ಉಪ ಮುಖ್ಯಮಂತ್ರಿಯ ಧ್ಯಾನವೆಲ್ಲ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಮೇಲಿರುವಂತಿದೆ!

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ವಾಚ್ ಕ್ರೇಜ್ ಜಾಸ್ತಿಯೇ ಇದೆ. ಹುಡುಗರು ಹುಡುಗಿಯರು ಅನ್ನೋ ಲಿಂಗ ಭೇದವಿಲ್ಲದೇ, ದೊಡ್ಡವರು ಚಿಕ್ಕವರು ಅನ್ನೋ ವಯಸ್ಸಿನ ಭೇದವು ಇಲ್ಲದೆ ಸ್ಮಾರ್ಟ್ ವಾಚ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ಸದ್ಯ ಇದೇ ವಿಚಾರ ಖಾಸಗಿ ಶಾಲೆಗಳ ಕೆಂಗಣ್ಣಿಗೆ ಕಾರಣವಾಗಿದ್ದು ಡಿಜಿಟಲ್ ವಾಚ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬಂದ್ರೆ dont come ಅಂತಿದ್ದಾರೆ.

ಶಾಲೆಗಳಲ್ಲಿ ಸ್ಮಾರ್ಟ್ ವಾಚ್ ನಿಷೇಧ ಅನಿವಾರ್ಯ. ಶಾಲೆಯ ವಾತಾವರಣದಲ್ಲಿ ಮಕ್ಕಳ ಮಧ್ಯೆ ಆರೋಗ್ಯಕರ ವ್ಯವಸ್ಥೆ ಇಲ್ಲ. ಇದ್ರಿಂದ ಮಕ್ಕಳ ಮನಸ್ಸು ಕಳಿಕೆಯತ್ತ ವಾಲದೇ ವಾಚ್ ಮೇಲೆ ಕಾನ್ಸಂಟ್ರೇಷನ್ ಹೋಗುವ ಸಾಧ್ಯತೆ ಇದೆ. ಜೊತೆಗೆ ಅತಿಯಾದ ಆಧುನಿಕ ಫೀಚರ್ ಇರೋದ್ರಿಂದ ಮಕ್ಕಳು ದಾರಿ ತಪುವ ಸಾಧ್ಯತೆ ಇದೆ ಎಂದು ಕೆಲ ಶಿಕ್ಷಕಿಯರು ಕಿಡಿಕಾರಿದ್ದಾರೆ. ಇನ್ನು ಕೆಲ ಪೋಷಕರು ಡಿಜಿಟಲ್ ವಾಚ್ ಮಕ್ಕಳು ಡಿಸಿಪ್ಲಿನ್ ಆಗಿ ಟೈಮ್ ಮೆಂಟೇನ್ ಮಾಡಲು ಸಹಕಾರಿ ಅಂತಿದ್ದಾರೆ. ಮಕ್ಕಳಿಗೆ ಅಲಾರ್ಮ್, ಶೆಡ್ಯೂಲ್, ಟ್ರ್ಯಾಕಿಂಗ್ ವಾಚ್ ಸಹಕಾರಿ ಎಂದಿದ್ದಾರೆ.

ಒಟ್ಟಿನಲ್ಲಿ ನಗರದಲ್ಲಿ ಈಗ ಡಿಜಿಟಲ್ ವಾಚ್ ಬಳಕೆ ಮಾಡಬೇಕಾ? ಬೇಡ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದ್ದು ಈಗಾಗಲೇ ಹಲವು ಶಾಲೆಗಳು ಡಿಜಿಟಲ್ ವಾಚ್ ಬ್ಯಾನ್ ಕೂಡ ಮಾಡಿದ್ದು ಶಾಲೆಯ ನಿರ್ಧಾರಕ್ಕೆ ಪೋಷಕರು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಮುಕ್ತವಾಗಿ ಸ್ವಾಗತಿಸುತ್ತಾ ಇವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ