ಮೆಟ್ರೋ ರೈಲು ಬರುತ್ತಿರುವಾಗಲೇ ಟ್ರ್ಯಾಕ್​ಗೆ ಇಳಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ

ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದ ನೇರಳೆ ಮಾರ್ಗದಲ್ಲಿ ಮಂಗಳವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಮೆಟ್ರೋ ರೈಲು ಬರುವಾಗ ಓರ್ವ ವ್ಯಕ್ತಿ ಟ್ರ್ಯಾಕ್​ಗೆ ಇಳಿದಿದ್ದಾರೆ. ಇದರಿಂದ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬವಾಗಿದೆ. ಸದ್ಯ ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕೆ ಬಿಎಂಆರ್​ಸಿಎಲ್​​ ವಿಷಾದ ವ್ಯಕ್ತಪಡಿಸಿದೆ.

ಮೆಟ್ರೋ ರೈಲು ಬರುತ್ತಿರುವಾಗಲೇ ಟ್ರ್ಯಾಕ್​ಗೆ ಇಳಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ
ನಮ್ಮ ಮೆಟ್ರೋ
Edited By:

Updated on: Nov 10, 2026 | 3:22 PM

ಮುಖ್ಯಾಂಶಗಳು

  • ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಟ್ರ್ಯಾಕ್​ಗೆ ಇಳಿದ ವ್ಯಕ್ತಿ
  • ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಟ್ರ್ಯಾಕ್​ಗೆ ಇಳಿದ ವ್ಯಕ್ತಿ
  • ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ

ಬೆಂಗಳೂರು, ನವೆಂಬರ್​​ 10: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ವ್ಯಕ್ತಿ ಓರ್ವ ಟ್ರ್ಯಾಕ್​ಗೆ ಇಳಿದ ಘಟನೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮಧ್ಯಾಹ್ನ 1.41ರ ಸುಮಾರಿಗೆ ಮೆಟ್ರೋ ರೈಲು ಬರುವಾಗ ವ್ಯಕ್ತಿ ಟ್ರ್ಯಾಕ್​ಗೆ ಇಳಿದಿದ್ದಾನೆ. ಇದರಿಂದ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವಿಳಂಬವಾಗಿದೆ. ಘಟನೆ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೆಟ್ರೋ ಟ್ರ್ಯಾಕ್​ಗೆ ಇಳಿದ ವ್ಯಕ್ತಿ 

ಈ ಕುರಿತಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಟ್ವೀಟ್​ ಮೂಲಕ ಮಾಹಿತಿ ನೀಡಿದೆ. ‘ಇಂದು ಮಧ್ಯಾಹ್ನ ಸುಮಾರು 13:31 ಗಂಟೆಗೆ, ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಅಪ್ ಟ್ರ್ಯಾಕ್‌ಗೆ ಹಾರಿದ್ದಾರೆ. ತಕ್ಷಣವೇ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದೆ.

Loading...

ನಮ್ಮ ಮೆಟ್ರೋ ಟ್ವೀಟ್​ 

‘ಸುರಕ್ಷತೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನೇರಳೆ ಮಾರ್ಗದ ಬಾಧಿತವಲ್ಲದ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ) ನಡುವೆ; ಹಾಗೂ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ ರೈಲು ಸೇವೆಗಳನ್ನು ನಿರ್ವಹಿಸಲಾಯಿತು.’

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮಾನವನ ಅಂಗಾಂಗ ಸಾಗಣೆ: ಕೇವಲ 37 ನಿಮಿಷದಲ್ಲಿ ಕಿಡ್ನಿ ಟ್ರಾನ್ಸ್‌ಪೋರ್ಟ್! ಇಲ್ಲಿವೆ ಫೋಟೋಸ್​​

‘ನೇರಳೆ ಮಾರ್ಗದ ರೈಲು ಸಂಚಾರವನ್ನು 1:58 ಗಂಟೆಯಿಂದ ಯಥಾಸ್ಥಿತಿಗೆ ತರಲಾಯಿತು. ಹಸಿರು ಮಾರ್ಗ ಮತ್ತು ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಬಿಎಂಆರ್‌ಸಿಎಲ್, ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡಿದ ಸಹಕಾರ ಮತ್ತು ಸಹನೆಗಾಗಿ ಧನ್ಯವಾದ ಕೂಡ ತಿಳಿಸಿದೆ’.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:08 pm, Tue, 10 November 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us