ಪ್ರಧಾನಿ ಮೋದಿ ಕರ್ನಾಟಕ ಭೇಟಿ: ಬೆಂಗಳೂರಲ್ಲಿ ಇಂದು ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ನಿರ್ಬಂಧ, ಪರ್ಯಾಯ ಮಾರ್ಗಗಳು ಯಾವವು?

ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇಂದಿನಿಂದ ಎರಡು ದಿನ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸದಲ್ಲಿದ್ದು, ಬೆಂಗಳೂರಲ್ಲಿ ಇಂದು ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಪ್ರಧಾನಿ ಮೋದಿ ಕರ್ನಾಟಕ ಭೇಟಿ: ಬೆಂಗಳೂರಲ್ಲಿ ಇಂದು ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ನಿರ್ಬಂಧ, ಪರ್ಯಾಯ ಮಾರ್ಗಗಳು ಯಾವವು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 20, 2022 | 8:13 AM

ಬೆಂಗಳೂರು: ಇಂದಿನಿಂದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರ್ನಾಟಕ ಪ್ರವಾಸದಲ್ಲಿದ್ದು, ಬೆಂಗಳೂರಲ್ಲಿ ಇಂದು ಪ್ರಧಾನಿ ಸಂಚರಿಸುವ (travel) ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಚಾರ ನಿಷೇಧಿಸಲಾಗಿದ್ದು, ನಾಗರಬಾವಿ ರಿಂಗ್‌ ರಸ್ತೆಯ ಚೌಡೇಶ್ವರಿ ಬಸ್ ನಿಲ್ದಾಣದಿಂದ, ನಾಗರಬಾವಿ ಜಂಕ್ಷನ್‌ವರೆಗೆ ಎರಡೂ ಕಡೆಗಳಲ್ಲಿ ಸಂಚಾರ ನಿಷೇಧ. ಜ್ಞಾನಭಾರತಿ ಜಂಕ್ಷನ್‌ನಿಂದ ಜೈರಾಮ್ ದಾಸ್ ಜಂಕ್ಷನ್‌ವರೆಗೆ, ಹಳೇ ರಿಂಗ್‌ ರಸ್ತೆ ಕೆಂಗುಂಟೆ ಜಂಕ್ಷನ್‌ನಿಂದ ಶಿರ್ಕೆ ಜಂಕ್ಷನ್‌ವರೆಗೆ, ಜ್ಞಾನಭಾರತಿ ಆವರಣದಲ್ಲಿರುವ ಎಲ್ಲಾ ರಸ್ತೆಗಳಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧವಿದೆ. ಮೈಸೂರು ರಸ್ತೆಯ ನೈಸ್ ರೋಡ್ ಬಳಿಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಗಡಿ ಮುಖ್ಯರಸ್ತೆ ಮೂಲಕ ನೈಸ್ ರಸ್ತೆಯ ಮುಖಾಂತರ, ಉತ್ತರಹಳ್ಳಿ ಮುಖ್ಯರಸ್ತೆ, ಹೊಸಕೋಟೆ ಟೋಲ್‌ನಿಂದ ಬೂದಿಗೆರೆ ಕ್ರಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಅವಕಾಶವಿದೆ. ನೈಸ್ ರಸ್ತೆ ಮೂಲಕ ತುಮಕೂರು ರಸ್ತೆ, ಮೈಸೂರು ರಸ್ತೆ ಕಡೆಯೂ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾಯಿತು ಮೈಸೂರು ಸಾಂಪ್ರದಾಯಿಕ ಶೈಲಿಯ ಆಕರ್ಷಕ ಪೇಟ

ಕೊಮ್ಮಘಟ್ಟ ಸಾರ್ವಜನಿಕ ಕಾರ್ಯಕ್ರಮ

ವೇದಿಕೆಯಲ್ಲಿ ಸಂಸದ ಪಿ.ಸಿ. ಮೋಹನ್, ಸಚಿವ ವಿ.‌ ಸೋಮಣ್ಣ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಡಿ.ವಿ. ಸದಾನಂದ ಗೌಡ ಮತ್ತು ಸಂಸದ ತೇಜಸ್ವಿ ಸೂರ್ಯ ಇರಲಿದ್ದಾರೆ. 2.45ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಆಗಮನ 2.55ಕ್ಕೆ ಕಾರ್ಯಕ್ರಮ ವೇದಿಕೆಗೆ ಆಗಮನ 2.59ಕ್ಕೆ ವೇದಿಕೆಯಲ್ಲಿ ಪ್ರಧಾನಿಗೆ ಗೌರವ ಸಮರ್ಪಣೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ವಾಗತ ಭಾಷಣ ನಂತರ ಸಿಎಂ ಬೊಮ್ಮಾಯಿ ಭಾಷಣ

ಪ್ರಧಾನಿಯಿಂದ ಲೋಕಾರ್ಪಣೆ

1.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ 2.ಯಲಹಂಕ-ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ರೈಲ್ವೇ ಲೈನ್ ಡಬ್ಲಿಂಗ್ 3. ಕೊಂಕಣ್ ರೈಲ್ವೇ ಶೇ.100 ವಿದ್ಯುದೀಕರಣ

ಪ್ರಧಾನಿ ಹಸಿರು ನಿಶಾನೆ ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನಿ ತೋರಲಿದ್ದಾರೆ.

ಶಂಕುಸ್ಥಾಪನೆ 1.ಬೆಂಗಳೂರು ಸಬ್ ಅರ್ಬನ್ ರೈಲು 2. ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೇ ನಿಲ್ದಾಣ ಮರು ಅಭಿವೃದ್ಧಿ ಯೋಜನೆ 3. ಬೆಂಗಳೂರು ರಿಂಗ್ ರೋಡ್( 2 ಪ್ಯಾಕೇಜ್) 4.ನೆಲಮಂಗಲ-ತುಮಕೂರು ಸೆಕ್ಷನ್ 6 ಪಥ 5. ಪುಂಜಾಲಕಟ್ಟೆಯಿಂದ ಚಾರ್ಮಾಡಿ ಎನ್ ಹೆಚ್ 73 ಅಗಲೀಕರಣ 6.ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ಎನ್ ಹೆಚ್ 69 ಮೇಲ್ದರ್ಜೆಗೆ 7. ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್, ನಂತರ ಸಬ್ ಅರ್ಬನ್ ರೈಲು ಯೋಜನೆ ಕುರಿತಂತೆ ಪೋಸ್ಟಲ್ ಕವರ್ ಬಿಡುಗಡೆ ಮಾಡಿ, 3.30. ರಿಂದ 4 ಗಂಟೆಯವರೆಗೆ ಅರ್ಧ ಗಂಟೆ ಕಾಲ ಮೋದಿ ಭಾಷಣ ಮಾಡಲಿದ್ದಾ. ನಂತರ 4 ಗಂಟೆಗೆ ವೇದಿಕೆಯಿಂದ ನಿರ್ಗಮಿಸಲಿದ್ದಾರೆ.

ನಾಳೆ ಬೆಳಗ್ಗೆ ಮೈಸೂರು ಅರಮನೆ ಮುಂಭಾಗ ಯೋಗ ದಿನಾಚರಣೆ ಕಾರ್ಯಕ್ರಮ

ವೇದಿಕೆಯಲ್ಲಿ ಸಂಸದ ಶ್ರೀನಿವಾಸ ಪ್ರಸಾದ್, ಸಚಿವ ಡಾ. ಸುಧಾಕರ್, ಕೇಂದ್ರ ಸಚಿವ ಸರ್ಬಾನಂದ ಸೋನವಾಲ್, ಯದುವೀರ ಕೃಷ್ಣದತ್ತ ಒಡೆಯರ್, ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಪ್ರಮೋದಾ ದೇವಿ ಒಡೆಯರ್, ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಸಂಸದ ಪ್ರತಾಪಸಿಂಹ ಇರಲಿದ್ದಾರೆ. 6.30 ಕ್ಕೆ ಯೋಗ ಕಾರ್ಯಕ್ರಮ ವೇದಿಕೆಗೆ ಮೋದಿ ಆಗಮನ 6.33 ಕ್ಕೆ ಕೇಂದ್ರ ಸಚಿವ ಸರ್ಬಾನಂದ ಸೋನವಾಲ್ ಸ್ವಾಗತ ಭಾಷಣ 6.38 ರಿಂದ 6.43 ರವರೆಗೆ ಸಿಎಂ ಬೊಮ್ಮಾಯಿ‌ ಭಾಷಣ 6.43 ರಿಂದ 7 ಗಂಟೆಯವರೆಗೆ ಪ್ರಧಾನಿ ಮೋದಿ ಭಾಷಣ 7 ಗಂಟೆಯಿಂದ 7.45 ವರೆಗೆ ಯೋಗ ಸೆಷನ್ 7.45ಕ್ಕೆ ವೇದಿಕೆಯಿಂದ ಪ್ರಧಾನಿ ನಿರ್ಗಮನ

ಮೈಸೂರಿನಲ್ಲಿ‌ ಸುತ್ತೂರು ಮಠದ ಕಾರ್ಯಕ್ರಮ

ವೇದಿಕೆಯಲ್ಲಿ ಸಂಸದ ಪ್ರತಾಪಸಿಂಹ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಪಾಲ ಗೆಹ್ಲೋಟ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಸಿಎಂ ಬೊಮ್ಮಾಯಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತು ಶಾಸಕ ಎಸ್.ಎ. ರಾಮದಾಸ್ ಉಪಸ್ಥಿತರಿರಲಿದ್ದಾರೆ. 7 ಗಂಟೆಗೆ ವೇದಿಕೆಗೆ ಪ್ರಧಾನಿ ಆಗಮನ 7.04 ರಿಂದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಷಣ 7.07 ರಿಂದ ಸಿದ್ದೇಶ್ವರ ಸ್ವಾಮೀಜಿ ಭಾಷಣ 7.10 ಕ್ಕೆ ಪಾಠಶಾಲಾ ಮತ್ತು ಹಾಸ್ಟೆಲ್ ಹೊಸ ಕಟ್ಟಡ ಉದ್ಘಾಟನೆ, ಪುಸ್ತಕ ಬಿಡುಗಡೆ 7.12 ರಿಂದ 7.30 ರವರೆಗೆ ಪ್ರಧಾನಿ ಭಾಷಣ 7.30 ಕ್ಕೆ ಸುತ್ತೂರು ಮಠದಿಂದ ಪ್ರಧಾನಿ ನಿರ್ಗಮನ

ಪ್ರಧಾನಿ ಪ್ರಯಾಣದ ವೇಳೆ ಒಟ್ಟು ಮೂರು ಹೆಲಿಕಾಫ್ಟರ್ ಇರಲಿದ್ದು, ಪ್ರಧಾನಿ ಜೊತೆ ಹೆಲಿಕಾಫ್ಟರ್​ನಲ್ಲಿ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಮತ್ತು 5 ಅಧಿಕಾರಿಗಳು ತೆರಳಲಿದ್ದು, ಎರಡನೇ ಹೆಲಿಕಾಪ್ಟರ್​ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಿಎಂ ಓಎಸ್ ಡಿ ಸಂಜಯ್ ಭವ್ಸರ್, 5 ಅಧಿಕಾರಿಗಳು, 2 ತಜ್ಞ ವೈದ್ಯರು ಇರಲಿದ್ದಾರೆ. ಮೂರನೇ ಹೆಲಿಕಾಪ್ಟರ್​ನಲ್ಲಿ 15 ಪ್ರಧಾನಿ ಕಚೇರಿ ಸಿಬ್ಬಂದಿ ತಂಡ ಇರಲಿದೆ. ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ ದೆಹಲಿಯಿಂದ ಪ್ರಧಾನಿ ಜೊತೆ 31 ಜನರ ತಂಡದಲ್ಲಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿಗಳು ಬರಲಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:10 am, Mon, 20 June 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ