Viral Post: ಕೆಲಸದಿಂದ ವಜಾಗೊಂಡ ನಂತರ ಜೀವನೋಪಾಯಕ್ಕಾಗಿ ರ‍್ಯಾಪಿಡೋ ಚಾಲಕನಾದ ಬೆಂಗಳೂರಿನ ಟೆಕ್ಕಿ

ಬೆಂಗಳೂರಿನ ಟೆಕ್ ಉದ್ಯೋಗಿಯು ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಓಡಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Post: ಕೆಲಸದಿಂದ ವಜಾಗೊಂಡ ನಂತರ ಜೀವನೋಪಾಯಕ್ಕಾಗಿ ರ‍್ಯಾಪಿಡೋ ಚಾಲಕನಾದ ಬೆಂಗಳೂರಿನ ಟೆಕ್ಕಿ
ವೈರಲ್​ ಫೋಟೊ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 26, 2023 | 1:03 PM

ಬೆಂಗಳೂರು: ಹಲವು ದೈತ್ಯ ಟೆಕ್ ಕಂಪನಿಗಳಿಂದ ಈಗಾಗಲೇ ಅನೇಕರನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ. ಇನ್ನೂ ಕೆಲವರು ಈ ಒತ್ತಡವೇ ಬೇಡ ಎಂದು ಬೇರೆ ಬೇರೆ ಕೆಲಸಗಳತ್ತ ಹೋಗುತ್ತಿದ್ದಾರೆ. ಇತ್ತೀಚೆಗೆ ಅದೆಷ್ಟೋ ಟೆಕ್​​ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡಿತ್ತು, ಇನ್ನೂ ಕೆಲವರು ಕೆಲಸಕ್ಕೆ ರಾಜೀನಾಮೆ ನೀಡಿದರು. ಆದರೆ ಅವರು ಯಾರು ಧೈರ್ಯ ಕೆಳೆದುಕೊಳ್ಳದೇ, ಎಲ್ಲವೂ ಮುಗಿತ್ತು ಎಂದುಕೊಳ್ಳದೇ, ತಮ್ಮಲ್ಲಿಯೇ ಹೊಸ ಹೊಸ ವಿಚಾರಗಳಲ್ಲಿ ತೋಡಗಿಸಿಕೊಂಡು, ಟೆಕ್ಕಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಅನೇಕ ಟೆಕ್​​ ಉದ್ಯೋಗಿಗಳು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ, ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲೂ ​ ಆಗ್ಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದೇ ಒಂದು ವೀಡಿಯೊ ವೈರಲ್ ಆಗಿದೆ, ಬೆಂಗಳೂರಿನ ಟೆಕ್ ಉದ್ಯೋಗಿಯು ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಓಡಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL) ನಲ್ಲಿ ಉದ್ಯೋಗಿಯಾಗಿದ್ದ ಬೆಂಗಳೂರಿನ ಮಾಜಿ ಟೆಕ್ಕಿಯೊಬ್ಬರು ಜಾವಾ ಡೆವಲಪರ್ ಆಗಿ ಹೊಸ ಉದ್ಯೋಗವನ್ನು ಪಡೆಯಲು ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಓಡಿಸುತ್ತಿರುವುದು ಕಂಡುಬಂದಿದೆ. HCL ಕಂಪನಿಯಿಂದ ವಜಾಗೊಳಿಸಲಾಗಿತ್ತು. ಕೆಲಸ ಕಳೆದುಕೊಂಡ ನಂತರ ಜೀವನಕ್ಕಾಗಿ ಒಂದು ಕೆಲಸಬೇಕು ಎಂದು ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ.

ಇದನ್ನೂ ಓದಿ:Viral Post : ಊಬರ್​ ಇಂಡಿಯಾ ಹೆಚ್ಚುವರಿ ಹಣವನ್ನು ಮರುಪಾವತಿಸುವುದೆ?

ಲೊವ್ನೀಶ್ ಧೀರ್ ಎಂಬ ವ್ಯಕ್ತಿ ಇತ್ತೀಚೆಗೆ ರ‍್ಯಾಪಿಡೋ ಚಾಲಕನ ಕಥೆಯನ್ನು ಹಂಚಿಕೊಂಡಿದ್ದು ಇದರ ಜತೆಗೆ ಅವರ ಸಿವಿಯನ್ನು ಕೂಡ ಟ್ವಿಟರ್​ನಲ್ಲಿ ಟ್ವೀಟ್​​ ಮಾಡಿದ್ದಾರೆ, ನಾನು Rapido ಡ್ರೈವರ್​​ ಆಗಿ ಕೆಲಸ ಮಾಡುತ್ತಿದ್ದು, ಇತ್ತಿಚೇಗೆ ನನ್ನನ್ನೂ HCL ಕಂಪನಿಯಿಂದ ವಜಾ ಮಾಡಲಾಗಿತ್ತು. ಅನೇಕ ಟಿಕ್ಕಿಗಳು ಇಂತಹ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಸಿವಿ ನನ್ನ ಬಳಿ ಇದೆ. ಅವರು ಕೂಡ Rapido ಆಯ್ಕೆ ಮಾಡಿಕೊಳ್ಳುತ್ತಾರೆ. ಐಟಿ ರಾಜಧಾನಿಯಲ್ಲಿ ಇಂತಹ ನಿದರ್ಶನಗಳು ತುಂಬಾ ಸಾಮಾನ್ಯವಲ್ಲ ಏಕೆಂದರೆ ನಗರದಲ್ಲಿ ಲಕ್ಷಗಟ್ಟಲೆ ಟೆಕ್ಕಿಗಳು ನೆಲೆಯಾಗಿದ್ದಾರೆ. ಈ ಟ್ವಿಟ್​​ ಅನೇಕ ವಜಾಗೊಂಡಿರುವ ಟಿಕ್ಕಿ ಉದ್ಯೋಗಿಗೆ ಸಹಾಯ ಮಾಡಬಹುದು. ಈಗಾಗಲೇ ಅನೇಕರನ್ನು ವಜಾ ಮಾಡಲು HRಗಳು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯೊಂದು ಹೇಳಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಕಮೆಂಟ್​ ಮಾಡಿದ್ದಾರೆ, ನನ್ನ ವಜಾದ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಸೋಮವಾರದ ವೇಳೆಗೆ ಅವರಿಗೆ HR ನಿಂದ ಕರೆ ಬರಬಹುದು ಎಂದು ಹೇಳಿದ್ದಾರೆ. ವ್ಯಕ್ತಿಯ CV ಪ್ರಕಾರ, ಅವರು ಸೆಪ್ಟೆಂಬರ್ 2020ರಿಂದ ಜೂನ್ 2023 ರವರೆಗೆ HCL ನಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Mon, 26 June 23