
ಬೆಂಗಳೂರು, ಮೇ 31: ಐಪಿಎಲ್ನ (IPL) ಮಹಾಯುದ್ಧ ಫೈನಲ್ ಹಂತ ತಲುಪಿದೆ. ಇಂದು ಗುಜರಾತ್ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ 2ನೇ ಟ್ರೋಫಿಗಾಗಿ ಜಿದ್ದಾಜಿದ್ದಿನ ಕಾದಾಟ ನಡೆಯಲಿದೆ. ಸದ್ಯ ನಗರದಲ್ಲಿ ಜನರ ಕ್ರೇಜ್ ಜೋರಾಗಿದೆ. ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಫೈನಲ್ ಪಂದ್ಯಾವಳಿ ಹಿನ್ನೆಲೆ ಸಂಭ್ರಮಾಚರಣೆ ಮಾಡುವ ಸಾಧ್ಯತೆ ಇರುವುದರಿಂದ ಬೆಂಗಳೂರು ಸಂಚಾರ ಪೊಲೀಸರು ನಗರದ ಕೆಲ ಫ್ಲೈಓವರ್‌ಗಳಲ್ಲಿ ವಾಹನ ಸಂಚಾರ (Traffic advisory) ನಿರ್ಬಂಧಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ಇಂದು ನಡೆಯಲಿರುವ ಐಪಿಎಲ್ 19ನೇ ಆವೃತ್ತಿಯ ಫೈನಲ್ ಪಂದ್ಯದ ಸಮಯದಲ್ಲಿ ಹಾಗೂ ಪಂದ್ಯದ ನಂತರ ಬೆಂಗಳೂರು ನಗರದೆಲ್ಲೆಡೆ ವಿಜಯೋತ್ಸವ ಆಚರಣೆ ಮಾಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಎಲಿವೇಟೆಡ್ ಫ್ಲೈಓವರ್ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ಇಂದು ರಾತ್ರಿ 11 ಗಂಟೆಯಿಂದ ಜೂನ್ 01ರ ಬೆಳಿಗ್ಗೆ 5 ಗಂಟೆವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಎಲಿವೇಟೆಡ್ ಫ್ಲೈಓವರ್: ರೂಪೇನ ಆಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ರೂಪೇನ ಅಗ್ರಹಾರವರೆಗೆ ಎರಡೂ ಕಡೆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.
“ಸಂಚಾರ ಸಲಹೆ / Traffic advisory” pic.twitter.com/dkcuEvJOfr
— DCP SOUTH TRAFFIC (@DCPSouthTrBCP) May 31, 2026
ಡಬಲ್ ಡೆಕ್ಕರ್ ಫ್ಲೈಓವರ್: ರಾಗಿಗುಡ್ಡ ಕಡೆಯಿಂದ 5ನೇ ಮೈನ್ ಹೊರವರ್ತುಲ ರಸ್ತೆ ಹಾಗೂ ಹೊಸೂರು ರಸ್ತೆ ಕಡೆಗೆ ತೆರಳುವ ಮತ್ತು 5ನೇ ಮೈನ್ ಹೊರವರ್ತುಲ ರಸ್ತೆಯಿಂದ ರಾಗಿಗುಡ್ಡ ಕಡೆಗೆ ಹೋಗುವ ಎರಡೂ ಕಡೆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.
ಇದನ್ನೂ ಓದಿ: IPL Final 2026: ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್, ಅಭಿಮಾನಿಗಳಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ
ಇನ್ನು ಫ್ಲೈಓವರ್ ಕೆಳಗಿನ ಮುಖ್ಯರಸ್ತೆಗಳು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು, ಉಪಯೋಗಿಸಿಕೊಳ್ಳುವಂತೆ ಕೊರಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:28 pm, Sun, 31 May 26