ಬಹುರೂಪಿಯ ಹೊಸ ಕೃತಿ ‘ಪತ್ರಿಕೋದ್ಯಮದ ಪಲ್ಲಟಗಳು’ ಬಿಡುಗಡೆ
ಮಾಧ್ಯಮ ಶಿಕ್ಷಣದ ಮಹತ್ವದ ಹೆಸರಾದ ಪ್ರೊ. ಎ ಎಸ್ ಬಾಲಸುಬ್ರಹ್ಮಣ್ಯ ಅವರ ‘ಪತ್ರಿಕೋದ್ಯಮದ ಪಲ್ಲಟಗಳು’ ಎಂಬಂತಹ ಹೊಸ ಕೃತಿಯೊಂದು ಬಿಡುಗಡೆಗೊಂಡಿದ್ದು, ಇದು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿದ್ಯಾರ್ಥಿಗಳಿಗೆ, ಮಾಧ್ಯಮ ವಿಶ್ಲೇಷಕರಿಗೆ, ಪ್ರಾಧ್ಯಾಪಕರಿಗೆ ಸೂಕ್ತ ಮಾರ್ಗದರ್ಶಿಯಾಗಲಿದೆ.
ಪತ್ರಿಕೋದ್ಯಮದ ಬಗ್ಗೆ ಮಹತ್ವದ ಕೃತಿಯೊಂದನ್ನು ‘ಬಹುರೂಪಿ‘ ಪ್ರಕಟಿಸಿದೆ. ಮಾಧ್ಯಮ ಶಿಕ್ಷಣದ ಮಹತ್ವದ ಹೆಸರಾದ ಪ್ರೊ. ಎ ಎಸ್ ಬಾಲಸುಬ್ರಹ್ಮಣ್ಯ ಅವರು ಈ ಕೃತಿಯ ಲೇಖಕರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿದ್ಯಾರ್ಥಿಗಳಿಗೆ, ಮಾಧ್ಯಮ ವಿಶ್ಲೇಷಕರಿಗೆ, ಪ್ರಾಧ್ಯಾಪಕರಿಗೆ, ಮಾಧ್ಯಮ ಆಸಕ್ತರಿಗೆ ಇದು ಸೂಕ್ತ ಮಾರ್ಗದರ್ಶಿಯಾಗಲಿದೆ.
ಈ ಕೃತಿಯಲ್ಲಿ ಈ ಹಿಂದಿನ ಮಾಧ್ಯಮಗಳ ಪಲ್ಲಟಗಳನ್ನು ಗುರುತಿಸುವುದರ ಜೊತೆಗೆ ಓಟಿಟಿ, ಯು ಟ್ಯೂಬ್, ಪಾಡ್ ಕಾಸ್ಟ್, gpt -3, ಕೃತಕ ಬುದ್ಧಿಮತ್ತೆಯನ್ನು ಸಹ ಚರ್ಚಿಸಲಾಗಿದೆ.
ಇದನ್ನೂ ಓದಿ:ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ
ಈ ಪುಸ್ತಕದ ಮಹತ್ವದ ಬಗ್ಗೆ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಡಾ ಓಂಕಾರ ಕಾಕಡೆ ಅವರು, ‘ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದಾಗಿ ವಿಶಾಲವಾದ ಜಗತ್ತು ಇಂದು ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಯಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನು ಸಂಭವಿಸಿದರೂ ಕ್ಷಣಾರ್ಧದಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಮುದ್ರಣ ಮಾಧ್ಯಮ ಮೊದಲ ಬಾರಿಗೆ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಈ ಎಲ್ಲವನ್ನೂ ಪ್ರೊ ಬಾಲಸುಬ್ರಹ್ಮಣ್ಯ ಅವರ ಪತ್ರಿಕೋದ್ಯಮದ ಪಲ್ಲಟಗಳು ಪುಸ್ತಕ ತೆರೆದಿಡುತ್ತದೆ ಎಂದರು.
ಕೃತಿ: ಪತ್ರಿಕೋದ್ಯಮದ ಪಲ್ಲಟಗಳು
ಲೇಖಕರು: ಪ್ರೊ ಎ ಎಸ್ ಬಾಲಸುಬ್ರಹ್ಮಣ್ಯ
ಪ್ರಕಾಶಕರು : ಬಹುರೂಪಿ
ಪುಟ: 208
ಬೆಲೆ: ರೂ 270
ಖರೀದಿಗೆ ಈಗ ಪುಸ್ತಕ ಲಭ್ಯವಿದ್ದು, ಪ್ರತಿಗಳಿಗಾಗಿ ಸಂಪರ್ಕಿಸಿ: 70191 82729
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Wed, 18 September 24