ಬಾಲಕಿ ಹೇಳಿದ ಸುಳ್ಳಿಗೆ ಹಿಗ್ಗಾಮುಗ್ಗಾ ಹೊಡೆತ ತಿಂದ ಡೆಲೆವರಿ ಬಾಯ್, ತನಿಖೆಯಲ್ಲಿ ಸತ್ಯಾಂಶ ಬಯಲು
ಬಾಲಕಿ ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಡೆಲವರಿ ಬಾಯ್ಗೆ ಅಪಾರ್ಟ್ಮೆಂಟ್ ನಿವಾಸಿಗಳು ಧರ್ಮದೇಟು ನೀಡಿದ್ದ ಘಟನೆ ಇದೇ ಜೂ.12 ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ನಡೆದಿದ್ದು, ಬಳಿಕ ವಿಚಾರಣೆಯಲ್ಲಿ ಬಾಲಕಿ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಬಾಲಕಿ ಕಿಡ್ನ್ಯಾಪ್(Kidnap) ಮಾಡಿದ ಆರೋಪದ ಮೇಲೆ ಡೆಲವರಿ ಬಾಯ್ಗೆ ಅಪಾರ್ಟ್ಮೆಂಟ್ ನಿವಾಸಿಗಳು ಧರ್ಮದೇಟು ನೀಡಿದ್ದ ಘಟನೆ ಇದೇ ಜೂ.12 ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೌದು 8 ವರ್ಷದ ಬಾಲಕಿಯನ್ನ ಟೆರಸ್ ಮೇಲೆ ಎಳೆದೊಯ್ದ ಆರೋಪ ಕೇಳಿಬಂದಿತ್ತು. ಅಪಾರ್ಟ್ಮೆಂಟ್ನ ಓರ್ವ ಬಾಲಕಿ ಕಳೆದು ಹೋಗಿದ್ದಳು. ಇದರಿಂದ ಕಂಗಾಲಾದ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಅಪಾರ್ಟ್ಮೆಂಟ್ ಟೆರಸ್ ಮೇಲೆ ಸಿಕ್ಕಿದ್ದ ಬಾಲಕಿಗೆ, ಇಷ್ಟು ಹೊತ್ತು ಎಲ್ಲಿದ್ದೆ ಎಂದು ಕೇಳಿದಾಗ, ಕಿಡ್ನ್ಯಾಪ್ ಮಾಡಲಾಗಿತ್ತು, ಬಳಿಕ ಕೈ ಕಚ್ಚಿ ಬಿಡಿಸಿಕೊಂಡಿರೋದಾಗಿ ಹೇಳಿದ್ದಳು.ಈ ವೇಳೆ ಯಾರು ಕಿಡ್ನ್ಯಾಪ್ ಮಾಡಿದ್ದರು ಎಂದು ಪೋಷಕರು ಪ್ರಶ್ನೆ ಕೇಳಿದ್ದು, ಅಪಾರ್ಟ್ಮೆಂಟ್ ಮುಂಭಾಗದಲ್ಲಿ ತೆರಳುತ್ತಿದ್ದ ಡೆಲವರಿ ಬಾಯ್ನ್ನು ತೋರಿಸಿದ್ದಳು. ನಂತರ ಬ್ಲಿಂಕ್ಇಟ್ ನಲ್ಲಿ ಕೆಲಸ ಮಾಡೋ ಅಖಿಲ್ ರಂಜನ್ ದಾಸ್ಗೆ ಧರ್ಮದೇಟು ಕೊಟ್ಟು ನಂತರ ಪೊಲೀಸರಿಗೆ ಕರೆ ಮಾಡಿ ಒಪ್ಪಿಸಿದ್ದರು.
ತಪ್ಪೊಪ್ಪಿಕೊಳ್ಳದ ಡೆಲವರಿ ಬಾಯ್
ಇನ್ನು ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ವಿಚಾರಣೆಯಲ್ಲಿ ತಪ್ಪೊಪ್ಪಿಕೊಳ್ಳದ ಕಾರಣ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ ಟೆರಸ್ ಮೇಲೆ ಯಾವುದೇ ಸಿಸಿಟಿವಿ ಇರಲಿಲ್ಲ. ಬಳಿಕ ಮಗು ಹೇಳಿದ ರೀತಿ ಆತನ ಕೈಯ ಮೇಲೆ ಕಚ್ಚಿದ ಗಾಯ ಆಗಿತ್ತು. ಈ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದು ಪೊಲೀಸರು, ನಂತರ ಪಕ್ಕದ ಬಿಲ್ಡಿಂಗ್ ನಿಂದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬಾಲಕಿ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್ಕಾಲ್ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ
ಸುಳ್ಳು ಹೇಳಿರೋದಾಗಿ ತಪ್ಪೊಪ್ಪಿಕೊಂಡ ಬಾಲಕಿ
ತನ್ನಷ್ಟಕ್ಕೆ ತಾನೇ ಟೆರಸ್ ಮೇಲೆ ತೆರಳಿದ್ದ ಬಾಲಕಿ, ಒಬ್ಬಳೇ ಆಟ ಆಡಿದ್ದಾಳೆ. ಇದನ್ನ ಪ್ರಶ್ನಿಸಿದಾಗ ಆತನ ಕೈಗೆ ಕಚ್ಚಿದ್ದಾಳೆ. ಈ ಕುರಿತು ಪೊಲೀಸರು ಪೋಷಕರನ್ನು ಕರೆದು ವಿಚಾರಿಸಿದಾಗ ‘ಆಟ ಆಡೋಕೆ ಬಿಡುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿರೋದಾಗಿ ಒಪ್ಪಿಕೊಂಡಿದ್ದಾಳೆ. ಆಟ ಆಡೋಕೆ ಹೋಗಿದ್ದೇನೆ ಅಂದರೆ ಬೈಯುತ್ತಾರೆ, ಅದಕ್ಕೊಸ್ಕರ ಕಿಡ್ನ್ಯಾಪ್ ಕಥೆ ಕಟ್ಟಿದ್ದಳಂತೆ. ಸಿಸಿಟಿವಿಯಿಂದಾಗಿ ನಿಜಾಂಶ ಬಯಲಿಗೆ ಬಂದಿದೆ. ಹಲ್ಲೆ ಮಾಡಿವದರ ವಿರುದ್ದ ಕೇಸ್ ದಾಖಲಿಸಿರೋ ಡೆಲವರಿ ಬಾಯ್ ಅಖಿಲ್ ರಂಜನ್ ದಾಸ್. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ