Bengaluru: ದೇಶದ ಕಾನೂನು ಎಲ್ಲರಿಗೂ ಒಂದೇ, ಹೆಲ್ಮೆಟ್ ಧರಿಸಿದ ಬೆಂಗಳೂರು ಪೊಲೀಸರಿಗೆ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಇಲ್ಲವೇ?
ಟ್ವಿಟ್ಟರ್ ಬಳಕೆದಾರರೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿರುವ ಬೆಂಗಳೂರಿನ ಪೋಲೀಸರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ದೇಶದಲ್ಲಿ ಒಂದು ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು, ಅದು ಪ್ರಧಾನಿ, ರಾಷ್ಟ್ರಪತಿ, ನ್ಯಾಯಮೂರ್ತಿ ಮುಖ್ಯಮಂತ್ರಿಯೂ ಕೂಡ ನಮ್ಮ ದೇಶ ಕಾನೂನಿಗೆ ಹೊರತಾಗಿಲ್ಲ ಎಲ್ಲರೂ ಸಮಾನವಾಗಿ ಪಾಲಿಸಲೇಬೇಕು. ಇನ್ನೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಭಾರತದಲ್ಲಿ ಕಡ್ಡಾಯ ಮತ್ತು ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಮೋಟಾರು ವಾಹನಗಳ ಕಾಯಿದೆ, ಸೆಕ್ಷನ್ 129, ದ್ವಿಚಕ್ರ ವಾಹನ ಚಾಲಕರು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದು/ಸವಾರಿ ಮಾಡುವುದು ಸಂಚಾರ ಉಲ್ಲಂಘನೆ ಮತ್ತು ದೇಶದಲ್ಲಿ ಕಾನೂನುಬಾಹಿರ ಅಪರಾಧ ಎಂದು ಹೇಳುತ್ತದೆ.
ಆದರೆ ಈ ನಿಮಯವನ್ನು ಪಾಲಿಸಿ ಎಂದು ಹೇಳುವ ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ರೂಲ್ಸ್ ಬ್ರೇಕ್ ಮಾಡಿದ್ರೆ ಏನು ಮಾಡುವುದು, ಹೌದು ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿರುವ ಬೆಂಗಳೂರಿನ ಪೋಲೀಸರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮೇ 13ರಂದು ಈ ಫೋಟೋವನ್ನು ಕ್ವೀನ್ಸ್ ಸರ್ಕಲ್‌ನಲ್ಲಿ ತೆಗೆಯಲಾಗಿದೆ. ಮಹಿಳಾ ಪೊಲೀಸ್ ಒಬ್ಬರು ಹೆಲ್ಮೆಟ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿ ಬಳಕೆದಾರರು @blrcitytraffic @citymarkettrps @BlrCityPolice @BJP4Karnataka ivarige rules and regulations ilwa, ivaru special aaa ಟ್ಯಾಗ್ ಮಾಡಿ ಬರೆದಿದ್ದಾರೆ. ಇವರಿಗೆ ಫೈನ್ ಹಾಕಿ, ಇವರಿಗೆ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಇಲ್ಲವೇ? ವಿಶೇಷವೇ? ದಂಡ ಏನು? ಎಂದು ಹೇಳಿ, ಬೈಕ್ ನ KA02HV6226 ನಂಬರ್ ಕೂಡ ಈ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಬರೆದಿದ್ದಾರೆ.
@blrcitytraffic @citymarkettrps @BlrCityPolice @BJP4Karnataka ivarige rules and regulations ilwa, ivaru special aaa . Ivarige haki fine KA02HV6226. Take immediate action @CPBlr pic.twitter.com/rtaYhppm5b
— Mohammed Irshad KS (@KSQadiri9686) May 13, 2023
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ನಮಗೆ ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ತಕ್ಷಣ ನಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಂಚಾರ-ಸಂಬಂಧಿತ ಉಲ್ಲಂಘನೆಗಳನ್ನು ವರದಿ ಮಾಡಲು ನೀವು ಸಾರ್ವಜನಿಕ ಪೋರ್ಟಲ್ನ್ನು ಬಳಸಬಹುದು, ಇದು ಸಂಚಾರ ಉಲ್ಲಂಘನೆಗಳನ್ನು ಜಾರಿಗೊಳಿಸಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಟ್ವಿಟರ್ನಲ್ಲಿ ನಗರ ಸಂಚಾರ ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Sat, 20 May 23