AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು, ಮೊಸರಿನ ಬೆಲೆ ಏರಿಕೆಯಾದ್ರೂ, ಹೋಟೆಲ್ ಉಪಹಾರ ದರ ಏರಿಕೆ ಇಲ್ಲ: ಹೋಟೆಲ್ ಮಾಲೀಕರ ಸಂಘ ಸ್ಪಷ್ಟನೆ

ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಹಾರ ದರ ಏರಿಕೆ ಮಾಡಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ.

ಹಾಲು, ಮೊಸರಿನ ಬೆಲೆ ಏರಿಕೆಯಾದ್ರೂ, ಹೋಟೆಲ್ ಉಪಹಾರ ದರ ಏರಿಕೆ ಇಲ್ಲ: ಹೋಟೆಲ್ ಮಾಲೀಕರ ಸಂಘ ಸ್ಪಷ್ಟನೆ
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 24, 2022 | 4:11 PM

Share

ಬೆಂಗಳೂರು: ಇತ್ತೀಚೆಗೆ ಕೆಎಂಎಫ್ (KMF) ನಂದಿನಿ ಹಾಲಿನ (Nandini Milk) ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಪ್ರತಿ ಲೀಟರ್​ ಹಾಲಿನ ಬೆಲೆ 2 ರೂ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಹೋಟೆಲ್ ದರ ಏರಿಕೆ ವಿವಾದ ಕೂಡ ಹುಟ್ಟಿಕೊಂಡಿತ್ತು. ಸದ್ಯ ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಹಾರ ದರ ಏರಿಕೆ ಮಾಡಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ. ಇಂದಿನಿಂದ ಹಾಲಿನ ದರ 2 ರೂ ಏರಿಕೆಯಾಗಿದೆ. ಆದರೂ ಈ ಕೂಡಲೇ ನಾವು ಹೋಟೆಲ್​ನಲ್ಲಿ ಆಹಾರ, ಕಾಫಿ, ಟೀ ಬೆಲೆ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂ. ಲಾಭ

ನವೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆದ ಕೆಎಂಎಫ್​ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದು,  ನಂದಿನಿ ಹಾಲಿನ ದರ ಏರಿಕೆ ನವೆಂಬರ್ 24ರಿಂದ ಜಾರಿಗೆ ಬರಲಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಹೆಚ್ಚಳ ಮಾಡಿರುವ ದರದಲ್ಲಿ ಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ.

ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ ಎಂದು ತಿಳಿಸಿದರು.

ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು. ಮೊನ್ನೇ ಅಷ್ಟೇ ಕೆಎಂಎಫ್​ ಹಾಲಿನ ದರ ಹೆಚ್ಚಿಸಿತ್ತು. ಆದರೆ ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಆದರೆ ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.

ದರಗಳ ವಿವರ ಹೀಗಿದೆ

  • ನಂದಿನಿ ಟೋನ್ಡ್ ಹಾಲು ಲೀಟರ್​ಗೆ 37ರಿಂದ 39 ರೂಪಾಯಿಗೆ ಏರಿಕೆ* ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂಪಾಯಿಗೆ ಹೆಚ್ಚಳ.
  • ಹೋಮೋಜಿನೈಸ್ಡ್ ಹಸುವಿನ ಹಾಲು 42ರಿಂದ 44 ರೂಪಾಯಿಗೆ ಹೆಚ್ಚಳ.
  • ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43ರಿಂದ 45 ರೂಪಾಯಿಗೆ ಏರಿಕೆ
  • ಹೋಮೋಜಿನೈಸ್ಡೇ ಸ್ಟ್ಯಾಂಡರ್ಡ್ ಹಾಲು 44ರಿಂದ 46 ರೂಪಾಯಿಗೆ ಏರಿಕೆ
  • ನಂದಿನಿ ಸಮೃದ್ಧಿ ಹಾಲು 48ರಿಂದ 50 ರೂಪಾಯಿಗೆ ಏರಿಕೆ
  • ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂಪಾಯಿಗೆ ಏರಿಕೆ
  • ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆ ರೂಪಾಯಿ ಏರಿಕೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.