ಬಂಧನ ಭೀತಿಯಲ್ಲಿ ಕದ್ದಿದ್ದ ಸರದ ತುಂಡನ್ನು ನುಂಗಿದ ಕಳ್ಳ
ಸಾರ್ವಜನಿಕರ ಕೈಯಲ್ಲಿ ತಗಲಾಕಿಕೊಂಡಿದ್ದ ಆರೋಪಿ ಕದ್ದ ಸರದ ಅರ್ಧ ತುಂಡನ್ನು ನುಂಗುತ್ತಾನೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಾನು ಸರ ನುಂಗಿರುವ ಬಗ್ಗೆ ಬಾಯಿ ಬಿಡುತ್ತಾನೆ.
ಬೆಂಗಳೂರು: ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲಿ ಕಳ್ಳನೊಬ್ಬ ತಾನು ಕದ್ದಿದ್ದ ಚಿನ್ನದ ಸರದ ತುಂಡನ್ನು ನುಂಗಿದ್ದಾನೆ. ಈ ಘಟನೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ (KR Market) ನಡೆದಿದೆ. ಎಂ.ಟಿ.ಸ್ಟ್ರೀಟ್ ಬಳಿ ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಈ ವೇಳೆ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ಆರೋಪಿ ನುಂಗಿದ್ದಾನೆ. ವಿಜಿ ಎಂಬುವವನು ಸರವನ್ನು ನುಂಗಿದ ಆರೋಪಿ. ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಸರದ ತುಂಡು ನುಂಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.
ಸರಗಳ್ಳರು ಸಾರ್ವಜನಿಕರ ಕೈಯಲ್ಲಿ ತಗಲಾಕಿಕೊಂಡಿದ್ದರು. ಅದರಲ್ಲಿ ಓರ್ವ ಆರೋಪಿ ಕದ್ದ ಸರದ ಅರ್ಧ ತುಂಡನ್ನು ನುಂಗುತ್ತಾನೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಾನು ಸರ ನುಂಗಿರುವ ಬಗ್ಗೆ ಬಾಯಿ ಬಿಡುತ್ತಾನೆ. ಆಸ್ಪತ್ರೆಗೆ ದಾಖಲಿಸಿ ಆರೋಪಿ ವಿಜಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆತನ ಹೊಟ್ಟೆಯಲ್ಲಿ ಚಿನ್ನದ ತುಂಡುಗಳಿರುವುದು ಪತ್ತೆಯಾಗಿದೆ.
ಸರವನ್ನು ನುಂಗಿದ್ದ ಸಾಕುನಾಯಿ ಈ ಹಿಂದೆ ಕೊಪ್ಪಳದಲ್ಲಿ ನಾಯಿಯೊಂದು ಬಂಗಾರದ ಸರವನ್ನು ನುಂಗಿದ ವಿಚಿತ್ರ ಘಟನೆಯೊಂದು ನಡೆದಿತ್ತು. ರಾತ್ರಿ ಮಲಗುವ ಮುನ್ನ ಬಿಚ್ಚಿಟ್ಟ ಸುಮಾರು 80 ಸಾವಿರ ಬೆಲೆಬಾಳುವ ಬಂಗಾರದ ಚೈನ್ನ ಸಾಕು ನಾಯಿ ನುಂಗಿಹಾಕಿತ್ತು. ರಾತ್ರಿ ಮಲಗುವಾಗ ಕಾರಟಗಿ ನಿವಾಸಿ ದಿಲೀಪ್ ಅವರು ಬಂಗಾರದ ಚೈನ್ನ ತೆಗೆದು ಮಲಗಿದ್ದರು. ಆದರೆ ರಾತ್ರಿ ಅವರ ಸಾಕುನಾಯಿ ಆ ಬಂಗಾರದ ಚೈನ್ನ್ನು ನುಂಗಿಬಿಟ್ಟಿತ್ತು. ಮಾರನೇ ದಿನ ಬಂಗಾರದ ಚೈನ್ ನಾಪತ್ತೆಯಾದದ್ದು ಬೆಳಕಿಗೆ ಬಂದ ತಕ್ಷಣವೇ ದಿಲೀಪ್ ಅವರಿಗೆ ಅನುಮಾನ ಬಂದಿತ್ತು. ಆದರೆ ಚೈನ್ ಕಳುವಾಗಿರಲು ಸಾಧ್ಯವಿರಲಿಲ್ಲ. ರಾತ್ರಿ ಹತ್ತಿರವೇ ಇದ್ದ ನಾಯಿ ನುಂಗಿರುವ ಅನುಮಾನ ಬಂದು ಪಶು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದರು.
ಇದನ್ನೂ ಓದಿ
ಮೂರು ಪತ್ನಿಯರನ್ನ ಬಿಟ್ಟು ಇನ್ನೊಂದು ಮಹಿಳೆ ಜತೆ ಪರಾರಿ; ದೇವರ ಹೆಸರಲ್ಲಿ ಮೋಸ
ಗರ್ಭಿಣಿಯಂತೆ ನಟಿಸಲು ಹೊಟ್ಟೆಗೆ ಕಲ್ಲಂಗಡಿ ಹಣ್ಣು ಕಟ್ಟಿಕೊಂಡು ಮಲಗಿದ ವ್ಯಕ್ತಿಯ ಪಜೀತಿ ನೋಡಿ!
(thief swallowed a piece of Gold chain in fear at bengaluru)
Published On - 3:01 pm, Mon, 23 August 21