ಹ್ಯಾಂಡ್​​ ಬ್ರೇಕ್ ಹಾಕದೇ ಇಳಿದ ಚಾಲಕ, ಕಾರು ಕಂದಕಕ್ಕೆ ಬಿದ್ದು ಬೆಂಗಳೂರಿನ ಮೂವರು ದುರ್ಮರಣ

ಮನುಷ್ಯ ಈಗ ಚೆನ್ನಾಗಿ ಇದ್ದವನು ಇನ್ನು ಸ್ವಲ್ಪ ಹೊತ್ತಿಗೆ ಇರಲ್ಲ. ಹೀಗಾಗಿ ಮನಷ್ಯನಿಗೆ ಸಾವು ಹೇಗೆ ಯಾವ ರೂಪದಲ್ಲಿ ಬರುತ್ತೆ ಎನ್ನುವುದು ಗೊತ್ತಾಗಲ್ಲ. ಅದರಂತೆ ಗುಜರಾತ್​ನಲ್ಲಿ ಕೆಟ್ಟು ನಿಂತ ಗಾಡಿಯನ್ನು ನೋಡಲು ಚಾಲಕ ಕಾರು ಇಳಿದು ಹೋಗಿದ್ದಾನೆ. ಆದ್ರೆ, ಇತ್ತ ಕಾರಿನಲ್ಲಿದ್ದ ಬೆಂಗಳೂರು ಮೂಲದ ಮೂವರು ದುರಂತ ಸಾವನ್ನಪ್ಪಿದ್ದಾರೆ.

ಹ್ಯಾಂಡ್​​ ಬ್ರೇಕ್ ಹಾಕದೇ ಇಳಿದ ಚಾಲಕ, ಕಾರು ಕಂದಕಕ್ಕೆ ಬಿದ್ದು ಬೆಂಗಳೂರಿನ ಮೂವರು ದುರ್ಮರಣ
Follow us
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ

Updated on: Jul 16, 2024 | 8:28 PM

ಬೆಂಗಳೂರು, (ಜುಲೈ 16): ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಜಮ್ಮು-ಕಾಶ್ಮೀರದಲ್ಲಿ ದುರ್ಮರಣ ಹೊಂದಿದ್ದಾರೆ. ತಂದ್ರ ದಾಸ್(67), ಮೊನಾಲಿಸಾ ದಾಸ್(41) ಸೇರಿದಂತೆ ಮೂವರ  ಮೃತಪಟ್ಟಿದ್ದಾರೆ. ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದು, ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಕಾರು ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ದುರಂತ ಅಂದ್ರೆ ಚಾಲಕ ಹ್ಯಾಂಡ್​ ಬ್ರೇಕ್ ಹಾಕದೇ ಇಳಿದು ಹೋಗಿದ್ದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ.

ಮೃತಪಟ್ಟ ಕುಟುಂಬ ಜಮ್ಮು-ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಅಮರನಾಥ ಸಮೀಪದ ಝೋಜಿಲ್ ಪಾಸ್ ಬಳಿ ಬೇರೊಂದು ಕಾರು ರಸ್ತೆಯಲ್ಲಿ ಕೆಟ್ಟು ನಿಂತಿದೆ. ಅದನ್ನು ನೋಡಲು ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದ ಚಾಲಕ ಕಾರು ನಿಲ್ಲಿಸಿದ್ದಾನೆ. ಅಲ್ಲದೇ ಏನಾಗಿದೆ ಎಂದು ಕಾರು ಇಳಿದು ಹೋಗಿದ್ದಾರೆ. ಆದ್ರೆ, ಇಳಿದು ಹೋಗುವ ಮುನ್ನ ಕಾರಿನ ಹ್ಯಾಂಡ್​ ಬ್ರೇಕ್ ಹಾಕುವುದನ್ನು ಮರೆತಿದ್ದಾನೆ. ಇದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ರಸ್ತೆ ಪಕ್ಕದಲ್ಲಿದ್ದ ಪ್ರಪಾತಕ್ಕೆ ಬಿದ್ದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ನಿ ಡ್ರೆಸ್, ಮೇಕಪ್ ಬಗ್ಗೆ ಗಲಾಟೆ: ಆತ್ಮಹತ್ಯೆಗೆ ಶರಣಾದ ಪತಿ 

ಪರಿಣಾಮ ಘಟನೆಯಲ್ಲಿ ಬೆಂಗಳೂರಿನ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್​ನ ಕುಟುಂಬ ದುರಂತ ಸಾವು ಕಂಡಿದ್ದಾರೆ. ಇನ್ನು CRPF, ಜಮ್ಮು-ಕಾಶ್ಮೀರ ಪೊಲೀಸರು, ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ 9 ವರ್ಷ ಬಾಲಕಿ ಅದ್ರಿತಾ ದಾಸ್​ ಬದುಕುಳಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೋಡಿ ಒಂದು ಸಣ್ಣ ತಪ್ಪಿನಿಂದಾಗಿ ಮೂವರ ಪ್ರಾಣ ಹೋಗಿದೆ. ಹೀಗಾಗ ವಾಹನ ಚಾಲಕರು ಯಾವುದೇ ಕಾರಣಕ್ಕೂ ಒಂದು ಸಣ್ಣ ವಿಚಾರಕ್ಕೂ ಮೈಮರೆಯಬಾರದು.  ಮೈಯಲ್ಲ ಕಣ್ಣಾಗಿಟ್ಟುಕೊಂಡು ವಾಹನ ಚಲಿಸಬೇಕು ಎನ್ನುವುದು ಇದಕ್ಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್