
Breaking News Today Live in Kannada: ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಶಾಂತಿನಗರ ಕ್ಷೇತ್ರದ ದೊಮ್ಮಲೂರಿನಲ್ಲಿ ದೊಡ್ಡ ದುರ್ಘಟನೆಯೊಂದು ಸಂಭವಿಸಿದೆ. ಮಳೆಯ ರಭಸಕ್ಕೆ ಸೇನೆಯ (ಆರ್ಮಿ) ಕಾಂಪೌಂಡ್ ಗೋಡೆ ಕುಸಿದು ಬಿದ್ದು, ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಇನ್ನು ಮಂಡ್ಯದ ನಾಗಮಂಗಲ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಭೂ ಅಕ್ರಮದ ಬೆನ್ನಲ್ಲೇ, ಕಚೇರಿ ಆವರಣದ ಕಸದ ಬುಟ್ಟಿಯಲ್ಲಿ ರಾಶಿ ರಾಶಿ ಭೂ ದಾಖಲೆಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭಾರಿ ಆತಂಕ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠವು ನಡೆಸಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇಂದು ಬೆಂಗಳೂರಿಗೆ ಆಗಮಿಸಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ಕಲಬುರಗಿಯಲ್ಲಿ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಡಿಕೆಶಿ, ನಾಳೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾಗಿದೆ. ಇಡೀ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದ್ರೆ. ಈ ಭಾಗಕ್ಕೆ ಸೆಪ್ಟೆಂಬರ್ 17ಕ್ಕೆ ಸ್ವಾತಂತ್ರ್ಯ ಬಂದಿತ್ತು. ಹೀಗಾಗಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಈ ಭಾಗ ಅಭಿವೃದ್ಧಿಯಾಗ್ತಿದೆ ಅನ್ನೋದಕ್ಕೆ ಈ ಕೆರೆಯೇ ಸಾಕ್ಷಿ. ಎಂ.ಜಿ.ರೋಡ್ ರೀತಿ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸಿದ್ದಾರೆ. ಕೆರೆಯ ಸೌಂದರ್ಯ ನೋಡಿದ್ರೆ ಈ ರೀತಿ ಬೆಂಗಳೂರಿನಲ್ಲೂ ಇಲ್ಲ. ಕಲಬುರಗಿ ಜಿಲ್ಲೆಯು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ನಮ್ಮ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ಉಮರ್ ಖಾಲಿದ್ ಸಾಕ್ಷ್ಯ ಚಿತ್ರ ಪ್ರದರ್ಶನ ರದ್ದುಪಡಿಸುವಂತೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್‌ಗೆ ಎಬಿವಿಪಿ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಭೇಟಿ ಮಾಡಿದ ಎಬಿವಿಪಿ ನಿಯೋಗ, ಕಾರ್ಯಕ್ರಮದ ಆಯೋಜಕರು, ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ NLSUI ವಿವಿ ಆಡಳಿತ ಮಂಡಳಿ ಕುರಿತು ತನಿಖೆ ನಡೆಸುವಂತೆಯೂ ಮನವಿ ಮಾಡಿದೆ.
ಹಿರಿಯ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಟಿವಿ9 ಜೊತೆ ಹಿರಿಯ ನಟ ಅನಂತ್ ನಾಗ್ ಸಂತಸ ಹಂಚಿಕೊಂಡಿದ್ದಾರೆ. ರಂಗಭೂಮಿಯಿಂದ ಬಂದ ಎಲ್ಲಾ ಗುರುಗಳಿಗೆ ನನ್ನ ಧನ್ಯವಾದಗಳು. ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದು ನನಗೆ ವಿಶೇಷವಾಗಿದೆ. ಇದು ಔಟ್ ಆಫ್ ದಿ ವೇ ಅನ್ನಿಸಲ್ಲ. 5 ವರ್ಷಗಳಿಂದ ಸುಮಾರು 50 ನಾಟಕಗಳಲ್ಲಿ ಭಾಗವಹಿಸಿದ್ದೇನೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮಾತ್ರವಲ್ಲ ಟಿಕೆಟ್ ಮಾರಾಟಕ್ಕೂ ನಾನು ಹಾಗೂ ನನ್ನ ಸ್ನೇಹಿತರು ಹೋಗ್ತಿದ್ವಿ. ಅಣ್ಣಾವ್ರನ್ನ ಹಡಗು ಅಂತಾ ಪರಿಗಣಿಸಿ ಅವರ ದಾರಿಯಲ್ಲಿ ನಡೀತಿದ್ದೆ. ತಮ್ಮ ಸುತ್ತ ಸಾಹಿತಿಗಳ ಟೀಂ ಮಾಡಿಕೊಂಡು ಜರ್ನಿ ಮಾಡಿದರು. ಜನರಿಗೆ ಏನು ಕೊಡಬೇಕು ಅಂತಾ ಅವರಲ್ಲಿ ಒಂದು ಪ್ರಜ್ಞೆ ಇತ್ತು. ಶಂಕರ್ ನಾಗ್ ಅವರ ನೆನಪು ಭಾವುಕರನ್ನಾಗಿಸುತ್ತೆ. ನನ್ನ ಜರ್ನಿ ಕುರಿತು ಮಾತಾಡಿದ್ರೆ ಬಹಳ ಸಮಯ ಬೇಕಾಗುತ್ತೆ ಎಂದರು.
ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ. ತುಮಕೂರು ತಾಲೂಕಿನ ಶೆಟ್ಟಿಹಳ್ಳಿ ಬಳಿಯ ಉತ್ತರಕಟ್ಟೆ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ತುಮಕೂರು ತಾಲೂಕಿನ ಪಾಲಸಂದ್ರಪಾಳ್ಯ ಗ್ರಾಮದ ದರ್ಶನ್(21) ಹಾಗೂ ಗುಬ್ಬಿ ತಾಲೂಕಿನ ಕಡಬ ಮೂಲದ ಯುವಕ ರಜಿನಿಕಾಂತ್(20) ಮೃತರು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸೇರಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಚಲಿಸುತ್ತಿದ್ದ ಬಸ್ ಅಡ್ಡಗಟ್ಟಿ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹಳೆಯ ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಸಾಗರದ ಎಮಿರೇಟ್ಸ್ ಬಸ್ ಮ್ಯಾನೇಜರ್ ಮಹಮದ್ ಶಹದ್ (30) ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಆರೋಪಿ ಬೀಸಿದ ಕುಡುಗೋಲಿನಿಂದ ಮ್ಯಾನೇಜರ್ ಎಡಗೈಗೆ ಗಾಯವಾಗಿದ್ದು, ಗಾಯಾಳು ಶಹದ್ ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಆರೋಪಿ ಚಿನ್ನಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ ಬಿಎಲ್ಒ ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಕೈಬಿಟ್ಟಿರುವ ಮತದಾರರಿಗೆ ನೋಟಿಸ್ ನೀಡುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ ಅಸ್ವಸ್ಥಗೊಂಡಿದ್ದಾರೆ. ಬಿಪಿ ಲೋ ಆಗಿ ಕುಸಿದುಬಿದ್ದ ರಾಮಕ್ಕಗೆ ಹೃದಯ ಸಮಸ್ಯೆಯಾಗಿದ್ದು, ಕೂಡಲೇ ಹೊಳವನಹಳ್ಳಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕನ್ನಡ ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ, ಸುದೀರ್ಘ ಹಾಗೂ ಶ್ರೇಷ್ಠ ಸಿನಿ ಪಯಣಕ್ಕೆ ಗೌರವ ಸಿಕ್ಕಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡು ಅಭಿನಂದನೆ ತಿಳಿಸಿದ್ದಾರೆ.ಇನ್ನು ಸೆಪ್ಟೆಂಬರ್ 22ರಂದು ಗುಜರಾತ್ನಲ್ಲಿ ನಡೆಯುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. (ಮತ್ತಷ್ಟು ಓದಿ)

ದರ್ಶನ್ ಆ್ಯಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಬೆಂಗಳೂರಿನ 59 ನೇ ಸಿಸಿಹೆಚ್ ಕೋರ್ಟ್, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಎಸ್‌ಪಿಪಿಗೆ ಸೂಚಿಸಿದೆ.
ದರ್ಶನ್ ಆ್ಯಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆಗೆ ಕೋರ್ಟ್ ನಿರಾಕರಿಸಿದೆ. ಮಾಫಿ ಸಾಕ್ಷಿಗೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಪ್ರದೋಷ್ ಗೆ ಕೋರ್ಟ್ ಪ್ರಶ್ನೆಸಿದ್ದು, ಇದಕ್ಕೆ ಪ್ರದೋಷ್ ಸಹ ಒಪ್ಪಿಗೆ ಇದೆ ಎಂದು ಕೋರ್ಟ್ ಗೆ ಪ್ರತಿಕ್ರಯಿಸಿದ್ದಾರೆ. ಹೀಗಾಗಿ ಪ್ರದೋಷ್ ಮಾಫಿ ಸಾಕ್ಷಿಗೆ ಕೋರ್ಟ್ ಮತ್ತೆ ಒಪ್ಪಿದ್ದು, ದರ್ಶನ್ ವಕೀಲರ ಅರ್ಜಿ ವಜಾಗೊಳಿಸಿ 9ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಹೊರಡಿಸಿದ್ದಾರೆ. (ಮತ್ತಷ್ಟು ಓದಿ)
ಮದ್ದೂರಿನ ಜಾಮೀಯಾ ಮಸೀದಿ ಮುಂಭಾಗ ಗಣೇಶನ ಮೆರವಣಿಗೆ ಶಾಂತಿಯುತವಾಗಿ ಸಾಗಿದೆ. ಸಣ್ಣ ಪುಟ್ಟ ಗೊಂದಲಗಳು ಹೊರತುಪಡಿಸಿ ಎಲ್ಲ ಗಣೇಶನ ಮೂರ್ತಿಗಳು ಶಾಂತಿಯುತವಾಗಿ ಸಾಗಿಸಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಇದೇ ಜಾಮೀಯಾ ಮಸೀದಿ ಮುಂಭಾಗ ಕಲ್ಲುತೂರಾಟವಾಗಿತ್ತು. ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಮಸೀದಿ ಮುಂಭಾಗ ಬಿಗಿ ಭದ್ರತೆ ಮಾಡಿಕೊಳ್ಳಲಾಗಿತ್ತು.
6000 ಕ್ಯೂಸೆಕ್ ನೀರು ಹರಿಸುವ ಆದೇಶ ಮಾರ್ಪಾಡಿಸುವಂತೆ ಕರ್ನಾಟಕ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, 6,000 ಕ್ಯೂಸೆಕ್ ಬದಲು 3,000 ಕ್ಯೂಸೆಕ್‌ಗೆ ಇಳಿಸುವಂತೆ ಕರ್ನಾಟಕ ಮನವಿ ಮಾಡಿದೆ. ಸೆ.15ರ ವೇಳೆಗೆ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 55.389 ಟಿಎಂಸಿ ಲೈವ್ ಸ್ಟೋರೇಜ್ ಮಾತ್ರ ಇದೆ. ಇದು ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯದ 52.97% ಮಾತ್ರ. ಜೂನ್ 1ರಿಂದ ಸೆ.15ರವರೆಗೆ ನಾಲ್ಕು ಜಲಾಶಯಗಳಿಗೆ ಬಂದಿರುವ ಒಟ್ಟು ಒಳಹರಿವು ಸುಮಾರು 111 ಟಿಎಂಸಿ. ಇದೇ ಅವಧಿಯ 30 ವರ್ಷಗಳ ಸರಾಸರಿ ಒಳಹರಿವು 228.108 ಟಿಎಂಸಿ ಆಗಿದ್ದು, 51%ಕ್ಕೂ ಅಧಿಕ ಕೊರತೆ ಇದೆ. ಆ.27ರಂದು ನಾಲ್ಕು ಜಲಾಶಯಗಳ ಒಳಹರಿವು 26,930 ಕ್ಯೂಸೆಕ್ ಇದ್ದದ್ದು, ಸೆ.8ರಂದು 3,887 ಕ್ಯೂಸೆಕ್‌ಗೆ ಕುಸಿದಿದೆ. ಸುಮಾರು 15 ದಿನಗಳಲ್ಲಿ 85.57% ಇಳಿಕೆ ಕಂಡುಬಂದಿದ್ದು, ಸೆ.15ರ ವೇಳೆಗೆ ಒಳಹರಿವು ಸುಮಾರು 3,000 ಕ್ಯೂಸೆಕ್‌ಗೆ ಇಳಿದಿದೆ. ಒಳ ಹರಿವು ಕುಸಿತ ಹಿನ್ನಲೆ ಹೆಚ್ಚುವರಿಯಾಗಿ ಹೊರ ಹರಿವು ಹರಿಸಲು ಸಾಧ್ಯವಿಲ್ಲ ಎಂದು ಮೇಲ್ಮನವಿಯಲ್ಲಿ ಮಾಹಿತಿ ನೀಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (ಸೆ.16) ಬೆಂಗಳೂರಿನಲ್ಲಿ ನೂತನ ಜಿಲ್ಲಾಧ್ಯಕ್ಷರ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕೈಗೆ ಬಲಪಡಿಸುವಂತೆ ಫರ್ಮಾನ್ ಹೊರಡಿಸಿದ್ದಾರೆ. ಅಧ್ಯಕ್ಷರ ಆಣತಿ, ಸೂಚನೆ, ತಂತ್ರಗಾರಿಕೆ ಅನುಸಾರ ಜಿಲ್ಲೆಯ ಕಾಂಗ್ರೆಸ್ ಬಲಪಡಿಸಿ. 2028ರ ರ ಚುನಾವಣೆಗೆ ಸಿದ್ದತೆ ಆರಂಭಿಸಿ. ಪಕ್ಷ ಬಲಪಡಿಸಲು ಕೆಲಸ ಮಾಡದಿದ್ದರೆ ಮುಲಾಜಿಲ್ಲದೇ ಬದಲಾಯಿಸುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದರೆ ಎಲ್ಲದಕ್ಕೂ ರೆಡಿಯಾಗಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಕೆಲ ಗೊಂದಲಗಳ ಸಂಬಂಧ ನಾಯಕರೊಂದಿಗೆ ಮಾತುಕತೆ ನಡೆಸಲು ಎಐಸಿಸಿಯಿಂದ ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಿದ್ದು, ಐವರು ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಖಾಸಗಿ ಹೊಟೇಲ್ ನಲ್ಲಿಂದು ಸುರ್ಜೆವಾಲಾ, ವೇಣುಗೋಪಾಲ, ಡಿಕೆ ಶಿವಕುಮಾರ್, ಬಿಜೆ ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ಮೈಸೂರಿನ ಹೊಸ ಮನೆ ಬಗ್ಗೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ತಾಯಿಯ ಆಸೆಯಂತೆ ಮೈಸೂರಿನಲ್ಲಿ ಕಟ್ಟಿಸಿದ್ದೇವೆ. ನನ್ನ ತಾಯಿಗೆ ಮೈಸೂರಿನಲ್ಲಿ ಸೆಟಲ್ ಆಗಬೇಕೆಂಬ ಆಸೆ. ಅವರ ಇಚ್ಚೇ ಅಂತೆಯೇ ಮನೆ ಕಟ್ಟಿಸಿದ್ದೇವೆ. ಮನೆಯ ಸಂಪೂರ್ಣ ಪ್ಲ್ಯಾನ್ ನನ್ನ ತಾಯಿಯದ್ದು. ಹಿಂದೆ ಎರಡು ಮನೆ ಕಟ್ಟಿಸಿದ್ದೆವು. ಅಲ್ಲಿ ನಾವು ಒಂದು ದಿನವೂ ಇರಲಿಲ್ಲ. ಎರಡು ಮನೆಯನ್ನು ಮಾರುವ ಪರಿಸ್ಥಿತಿ ಬಂದು ಮಾರಿದೆವು. ಈಗ ಈ ಮನೆ ಕಟ್ಟಿಸಿದ್ದೇವೆ. ನನ್ನ ತಾಯಿ ತಂದೆ ನಾನು ಎಲ್ಲರೂ ಅಲ್ಲೇ ಉಳಿಯುತ್ತೇವೆ. ಇನ್ಮುಂದೆ ನನ್ನ ತಂದೆ ವಾರಕ್ಕೊಮೆಯಾದರು ಮೈಸೂರಿಗೆ ಬರಲು ಹೇಳಿದ್ದೇವೆ. ಇನ್ನೂ ಪ್ರತಿ ವಾರ ನಮ್ಮ ತಂದೆ ಮೈಸೂರಿಗೆ ಬಂದು ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ರಾಜ್ಯದಲ್ಲಿ 1.7 ಕೋಟಿ ಮತಗಳು ಡಿಲೀಟ್ ಆಗಿವೆ. ಚುನಾವಣಾ ಆಯೋಗದ ಉದ್ದೇಶವನ್ನು ನಾವು ಗಮನಿಸಬೇಕು. ಎಸ್‌ಐಆರ್‌ನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಪ್ರಕ್ರಿಯೆ ಇರಬೇಕು. ಎಸ್‌ಐಆರ್ ಬಗ್ಗೆ ಸಾಕಷ್ಟು ಆರೋಪಗಳಿವೆ. ಈ ದೇಶದಲ್ಲಿ ಮತಗಳ್ಳತನ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ . ಜಾಗೃತಿ ಮೂಡಿಸುವಂತೆ ಸಚಿವರು, ಶಾಸಕರಿಗೆ ಹೇಳಿದ್ದೇವೆ. ಉತ್ತರಾಖಂಡ್‌ನಲ್ಲಿ ಎಸ್‌ಐಆರ್ ಬಗ್ಗೆ ಏನಾಗ್ತಿದೆ. ಸಾಕಷ್ಟು ದೂರು, ಪತ್ರ ಬರೆದಿದ್ದೇವೆ, ಈವರೆಗೂ ಉತ್ತರ ಕೊಟ್ಟಿಲ್ಲ ಎಂದು ಎಸ್‌ಐಆರ್ ಬಗ್ಗೆ ಕಿಡಿಕಾರಿದ್ದಾರೆ.
ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿರುವ ‘ಇಂಡಿಯನ್ ಕಾರ್ ಗ್ಯಾರೇಜ್’ನಲ್ಲಿ (Indian Car Garage) ತಡರಾತ್ರಿ ಬಾಗಿಲು ಮುರಿದು ಒಳನುಗ್ಗಿದ ಮುಸುಕುಧಾರಿ ಕಳ್ಳರ ಗ್ಯಾಂಗ್, ಕಸ್ಟಮರ್‌ಗಳ ಕಾರು ರಿಪೇರಿಗಾಗಿ ಇರಿಸಿದ್ದ 3.01 ಲಕ್ಷ ರೂಪಾಯಿ ನಗದು ಹಾಗೂ ಬ್ಯಾಟರಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದೆ.
ಅಂತಾರಾಷ್ಟ್ರೀಯ ಸಮುದ್ರ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನೌಕಾಪಡೆಯ ಯುದ್ಧನೌಕೆಯೊಂದು ಭಾರತೀಯ ನೌಕೆಗೆ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ‘ಆಕ್ಷೇಪಾರ್ಹ ಹಾಗೂ ಜವಾಬ್ದಾರಿರಹಿತ’ ನಡೆಗೆ ಪ್ರತಿಯಾಗಿ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ನ ಚಾರ್ಜ್ ಡಿ ಅಫೇರ್ಸ್ ಸಾಹದ್ ಅಹ್ಮದ್ ವರ್ರೈಚ್ ಅವರಿಗೆ ಕೇಂದ್ರ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿಗೊಳಿಸಿ ಕಠಿಣ ಪ್ರತಿಭಟನೆ ನೋಂದಾಯಿಸಿದೆ.
ಭಾರತೀಯ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ ಇಸ್ರೇಲ್ ದೇಶದ ಪ್ರಜೆಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಡೆಸುತ್ತಿರುವ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯ ಕುರಿತು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಮತ್ತು ಜೆಡಿಎಸ್‌ನವರು ವಿಘ್ನನಿವಾರಕ ಗಣಪತಿಯನ್ನು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳಬಾರದು” ಎಂದು ಕಿಡಿಕಾರಿದ್ದಾರೆ.
ಗಣೇಶ ಹಬ್ಬದ ವಿಸರ್ಜನಾ ಮೆರವಣಿಗೆಯ ವೇಳೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ನಿಗದಿತ ಮಿತಿಗಿಂತ ಅಧಿಕ ಶಬ್ದದಲ್ಲಿ (High Decibel Sound) ಡಿಜೆ (DJ) ಬಳಸಿದ ಆರು ಡಿಜೆ ಮಾಲೀಕರು ಹಾಗೂ ಆಪರೇಟರ್‌ಗಳ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಹಾಗೂ ಭೇಟಿಯ ಬೆನ್ನಲ್ಲೇ ಮಹಾರಾಷ್ಟ್ರದ ಮೀರ ಭಯಂದರ್‌ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಭೂ ವಿವಾದವೊಂದು ಸುಖಾಂತ್ಯ ಕಂಡಿದೆ. ಮೋದಿ ಅವರ ಶಾಲಾ ದಿನಗಳ ಸಹಪಾಠಿ ಅಸ್ಗರ್ ಅಲಿ ವೋರಾ (81) ಅವರ 2,810 ಚದರ ಮೀಟರ್ ವಿವಾದಿತ ಭೂಮಿಯನ್ನು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ವಾಪಸ್ ನೀಡಲು ಒಪ್ಪಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಪ್ರಾತಿನಿಧ್ಯ ನೀಡದಿರುವ ಕುರಿತು ಎದ್ದಿರುವ ಆಕ್ಷೇಪಕ್ಕೆ ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೆಪಿಸಿಸಿ ಕಚೇರಿಯಲ್ಲಿ ಸ್ವತಃ ಸ್ವಯಂ ಅಪರಾಧ ಒಪ್ಪಿಕೊಂಡಿದ್ದಾರೆ. “ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲದಿರುವುದಕ್ಕೆ ದೆಹಲಿ ಹೈಕಮಾಂಡ್ ಕಾರಣವಲ್ಲ, ನನ್ನದೇ ತಪ್ಪು” ಎಂದು ಬಹಿರಂಗವಾಗಿ ಹೇಳಿದ್ದಾರೆ.
ರಾಜಧಾನಿಯಲ್ಲಿ ಸುರಿದ ಧಾರಾಕಾರ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ (Electronic City Flyover) ಜಲಾವೃತಗೊಂಡು ಭಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ (Fire and Emergency Services) ತಂಡ ದೌಡಾಯಿಸಿದ್ದು, ರಸ್ತೆಯಲ್ಲಿದ್ದ ನೀರನ್ನು ಯಶಸ್ವಿಯಾಗಿ ತೆರವುಗೊಳಿಸಿದೆ.
ನಾಗಮಂಗಲ ಘಟನೆಯ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಇಂದು ನಡೆಯಲಿರುವ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಪಟ್ಟಣದ ಪ್ರಮುಖ ರಸ್ತೆ, ಸರ್ಕಲ್ ಹಾಗೂ ಗಲ್ಲಿ-ಗಲ್ಲಿಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್ ಹಾಗೂ ಬೃಹತ್ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಮದ್ದೂರು ನಗರ ಸಂಪೂರ್ಣವಾಗಿ ಕೇಸರಿಮಯವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಕೆರೆಯಂತೆ ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಫ್ಲೈಓವರ್ ಮೇಲೆಯೇ ನೀರು ಸರಾಗವಾಗಿ ಹರಿದು ಹೋಗದೆ ಜಲಾವೃತಗೊಂಡಿರುವುದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸ್ ಠಾಣೆಯು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಬಿಳಿಚೋಡು ಠಾಣೆಯ ಇನ್ಸ್‌ಪೆಕ್ಟರ್ ನೂರ್ ಅಹ್ಮದ್ ಅವರು ತಮ್ಮ ಠಾಣೆಯಲ್ಲಿ ಸ್ವತಃ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ. ಠಾಣೆಯ ಸರ್ವ ಧರ್ಮದ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರನ್ನು ಒಂದೆಡೆ ಸೇರಿಸಿದ ಇನ್ಸ್‌ಪೆಕ್ಟರ್ ನೂರ್ ಅಹ್ಮದ್, ಭಕ್ತಿಭಾವದಿಂದ ಪೂಜೆ ಪುನಸ್ಕಾರ ನೆರವೇರಿಸಿದ್ದಾರೆ. ಬಳಿಕ ಎಲ್ಲರೊಂದಿಗೆ ಸೇರಿ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡುವ ಮೂಲಕ ಸೌಹಾರ್ದತೆಯ ಬೆಳಕನ್ನು ಚೆಲ್ಲಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇಂದು ಬೆಂಗಳೂರಿಗೆ ಆಗಮಿಸಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠವು ನಡೆಸಿತು. ವಿಚಾರಣಾ ನ್ಯಾಯಾಲಯದ (59ನೇ CCH ಕೋರ್ಟ್) ಮುಂದೆ ವಿಚಾರಣೆ ವೇಳೆ ಖುದ್ದು ಹಾಜರಾಗಲು ಅನುಮತಿ ನೀಡುವಂತೆ ದರ್ಶನ್ ಕೋರಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಇದನ್ನು ನಿರಾಕರಿಸಿದ್ದರಿಂದ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಂಡ್ಯದ ನಾಗಮಂಗಲ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಭೂ ಅಕ್ರಮದ ಬೆನ್ನಲ್ಲೇ, ಕಚೇರಿ ಆವರಣದ ಕಸದ ಬುಟ್ಟಿಯಲ್ಲಿ ರಾಶಿ ರಾಶಿ ಭೂ ದಾಖಲೆಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭಾರಿ ಆತಂಕ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಕೆಲ ತಿಂಗಳ ಹಿಂದೆ ನಾಗಮಂಗಲ ತಾಲೂಕು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಸಾವಿರಾರು ಎಕರೆ ಸರ್ಕಾರಿ ಭೂಮಿ ಹಾಗೂ ಬಗರ್ ಹುಕುಂ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಬಯಲಾಗಿತ್ತು. ಈ ಅಕ್ರಮದ ತನಿಖೆಗೆ ಇ.ಡಿ ಕೂಡ ಎಂಟ್ರಿ ಕೊಟ್ಟಿತ್ತು. ಇದೀಗ ಕಚೇರಿಯ ಆಭಿಲೇಖ ವಿಭಾಗದಲ್ಲಿ ಭದ್ರವಾಗಿ ಇರಬೇಕಿದ್ದ ಮೂಲ ದಾಖಲೆಗಳು ಕಸದ ಬುಟ್ಟಿ ಸೇರಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಅಕ್ರಮವನ್ನು ಮುಚ್ಚಿಹಾಕಲು ಅಥವಾ ಭೂ ದಂಧೆಕೋರರೊಂದಿಗೆ ಸೇರಿ ದಾಖಲೆಗಳನ್ನು ನಾಶಪಡಿಸಲು ಈ ರೀತಿ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಶಾಂತಿನಗರ ಕ್ಷೇತ್ರದ ದೊಮ್ಮಲೂರಿನಲ್ಲಿ ದೊಡ್ಡ ದುರ್ಘಟನೆಯೊಂದು ಸಂಭವಿಸಿದೆ. ಮಳೆಯ ರಭಸಕ್ಕೆ ಸೇನೆಯ (ಆರ್ಮಿ) ಕಾಂಪೌಂಡ್ ಗೋಡೆ ಕುಸಿದು ಬಿದ್ದು, ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಸ್ಥಳೀಯ ನಿವಾಸಿ ಮುನಿರಾಜು ಎಂಬುವರ ಮನೆ ಹಿಂಭಾಗದಲ್ಲಿದ್ದ ಗೋಡೆ ಇದಾಗಿದ್ದು, ಮೇಲ್ಭಾಗದಿಂದ ಹರಿದುಬಂದ ಮಳೆ ನೀರಿನ ಒತ್ತಡಕ್ಕೆ ಕಾಂಪೌಂಡ್ ಕುಸಿದಿದೆ. ಈ ವೇಳೆ ಮುನಿರಾಜು ಅವರ ಕಾಲುಗಳಿಗೂ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿದ್ದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ, ಮೃತಪಟ್ಟ ಹಸು ಹಾಗೂ ಕರುಗಳ ಮೃತದೇಹಗಳನ್ನು ಹೊರತೆಗೆಯಲಾಗಿದೆ.
Published On - 9:43 am, Wed, 16 September 26