Tv9 Kannada News Live: ಬೀದರ್ ಬ್ರಿಮ್ಸ್‌ನಲ್ಲಿ ಡಾಕ್ಟರ್ ಮೇಲೆಯೇ ಅಟ್ಯಾಕ್! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಂಎಲ್‌ಸಿ ವಿವಾದಕ್ಕೆ ವೈದ್ಯನ ಮೇಲೆ ಭೀಕರ ಹಲ್ಲೆ ನಡೆದಿದೆ. ಇತ್ತ ಮಧ್ಯ ಅಮೆರಿಕದ ಹೊಂಡುರಾಸ್‌ನಲ್ಲಿ ನಡೆದ ಭೀಕರ ಗ್ಯಾಂಗ್ ವಾರ್ ಶೂಟೌಟ್‌ಗೆ 6 ಪೊಲೀಸರು ಸೇರಿ 25 ಮಂದಿ ಬಲಿಯಾಗಿದ್ದಾರೆ. ಮತ್ತೊಂದೆಡೆ, ಬಾಲಿವುಡ್‌ನ ‘ಕಾಕ್‌ಟೇಲ್ 2’ ಚಿತ್ರದ ಪ್ರಚಾರದ ವೇಳೆ ನಟಿಯರಾದ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಡುವೆ ವೇದಿಕೆ ಮೇಲೆಯೇ ಕ್ರೆಡಿಟ್ ಕಿರಿಕ್ ಶುರುವಾಗಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳ ಪೂರ್ಣ ವಿವರ ಇಲ್ಲಿದೆ.

Tv9 Kannada News Live: ಬೀದರ್ ಬ್ರಿಮ್ಸ್‌ನಲ್ಲಿ ಡಾಕ್ಟರ್ ಮೇಲೆಯೇ ಅಟ್ಯಾಕ್! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು
ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

Updated on: May 22, 2026 | 10:55 AM

ಬೆಂಗಳೂರು, ಮೇ 22: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಭೀಕರ ಹಲ್ಲೆ ನಡೆದಿದೆ. ಇತ್ತ ಅಮೆರಿಕದ ಹೊಂಡುರಾಸ್‌ನಲ್ಲಿ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಗೆ 6 ಪೊಲೀಸರು ಸೇರಿ 25 ಮಂದಿ ಬಲಿಯಾಗಿದ್ದಾರೆ. ಮತ್ತೊಂದೆಡೆ, ಮುಂಬೈನಲ್ಲಿ ಹಮ್ಮಿಕೊಂಡಿದ್ದ ‘ಕಾಕ್‌ಟೇಲ್ 2’ (Cocktail -2) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ನಟಿಯರಾದ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಕ್ರೆಡಿಟ್ ಕಿರಿಕ್ ಉಂಟಾಗಿದೆ.

ಬೀದರ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ಹಲ್ಲೆ

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಯುವಕರ ಗುಂಪೊಂದು ವೈದ್ಯ ತುಕಾರಾಮ್ ಅವರ ಮೇಲೆ ತಡರಾತ್ರಿ ಹಲ್ಲೆ ನಡೆಸಿದೆ. ಬೈಕ್‌ನಿಂದ ಬಿದ್ದು ಅಲ್ಪ ಗಾಯಗಳೊಂದಿಗೆ ಬಂದಿದ್ದ ಯುವಕರು, ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸದಂತೆ ಒತ್ತಾಯಿಸಿದ್ದರು. ಆದರೆ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿ ಎಂಎಲ್‌ಸಿ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡ ಯುವಕರು, ತಾವು ಎಂಎಲ್‌ಸಿ ಮಾಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರೂ ಕೇಳದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಗಾಯಾಳು ವೈದ್ಯರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು

ಮುಖ್ಯಾಂಶಗಳು

YouTube video player

ಹೊಂಡುರಾಸ್‌ನಲ್ಲಿ ಬಂದೂಕುಧಾರಿಗಳ ಅಟ್ಟಹಾಸ: 25 ಸಾವು

ಮಧ್ಯ ಅಮೆರಿಕದ ಹೊಂಡುರಾಸ್ ಕರಾವಳಿಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ 25 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆಯಲ್ಲಿ ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊದಲ್ಲಿ ಪರಿಸರ ಮತ್ತು ಭೂಮಿ ಹಕ್ಕುಗಳ ಸಂಘರ್ಷದ ಹಿನ್ನೆಲೆ ಬಂದೂಕುಧಾರಿಗಳು 19 ಕೃಷಿ ಕಾರ್ಮಿಕರನ್ನು ಭೀಕರವಾಗಿ ಕೊಂದಿದ್ದಾರೆ. ಇದರ ಬೆನ್ನಲ್ಲೇ ಗ್ವಾಟೆಮಾಲಾ ಗಡಿಯ ಸಮೀಪವಿರುವ ಓಮೋವಾದಲ್ಲಿ ಗ್ಯಾಂಗ್ ವಿರೋಧಿ ಕಾರ್ಯಾಚರಣೆಯ ಪೊಲೀಸ್ ವಾಹನದ ಮೇಲೆ ದಾಳಿ ನಡೆದಿದ್ದು, ಹಿರಿಯ ಅಧಿಕಾರಿ ಸೇರಿದಂತೆ ಆರು ಜನ ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಜಂಟಿ ಪಡೆಗಳಿಂದ ತನಿಖೆ ಆರಂಭವಾಗಿದೆ.

ಇದನ್ನೂ ಓದಿ ಅಮೆರಿಕದಲ್ಲಿ ಬಂದೂಕುಧಾರಿಗಳಿಂದ ಎರಡು ಪ್ರತ್ಯೇಕ ಗುಂಡಿನ ದಾಳಿ, ಪೊಲೀಸರು ಸೇರಿ 25 ಮಂದಿ ಸಾವು

ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ನಡುವೆ ಕಿರಿಕ್

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಚಿತ್ರದ ಪ್ರಚಾರದ ವೇಳೆ ನಟಿಯರಾದ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಬೈನಲ್ಲಿ ನಡೆದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಣ ಸಂಸ್ಥೆ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಚಾರವಾಗಿ ಜಗಳ ಆರಂಭವಾಗಿದೆ. “ನಾನು ಈ ಸಂಸ್ಥೆಯೊಂದಿಗೆ 7 ಸಿನಿಮಾ ಮಾಡಿದ್ದು, ಇದು ನನ್ನದೇ ಸಾಂಗ್ ಲಾಂಚ್” ಎಂದು ಕೃತಿ ಹೇಳಿದರೆ, “ನನ್ನ ಹಾಡು ಅಧಿಕೃತವಾಗಿ ಲಾಂಚ್ ಆಗುತ್ತಿದೆ, ನಿಮ್ಮದು ಕೇವಲ ಮನರಂಜನೆಗೆ” ಎಂದು ರಶ್ಮಿಕಾ ಕೌಂಟರ್ ನೀಡಿದ್ದು, ಈ ಕಿರಿಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:53 am, Fri, 22 May 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us