AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು

ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಜಾನುವಾರುಗಳಿಗೆ ಮೂಗಿನ ಗುರುತು (ಮಜಲ್ ಬಯೋಮೆಟ್ರಿಕ್ಸ್) ಆಧಾರಿತ ಆಧಾರ್ ಮಾದರಿಯ ವಿಶಿಷ್ಟ ಡಿಜಿಟಲ್ ಗುರುತನ್ನು ಜಾರಿಗೆ ತರುತ್ತಿದೆ. ಬಾರ್ಕೋಡ್ ಆಧಾರಿತ ಈ ವ್ಯವಸ್ಥೆ ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಕಾರ್ಯನಿರ್ವಹಿಸಲಿದೆ. ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿಗೆ ಇದು ಪರ್ಯಾಯವಾಗಲಿದೆ.

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು
ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೂ ಬಂತು ಆಧಾರ್​​ ಮಾದರಿ ವ್ಯವಸ್ಥೆImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:May 22, 2026 | 9:54 AM

Share

ಬೆಂಗಳೂರು, ಮೇ 22: ಜಾನುವಾರುಗಳ ಲಸಿಕೆ ದಾಖಲೆ, ಆರೋಗ್ಯ ಸ್ಥಿತಿ, ವಿಮೆ ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಬಾರ್ಕೋಡ್ ಆಧಾರಿತ ಈ ವ್ಯವಸ್ಥೆ ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಕಾರ್ಯನಿರ್ವಹಿಸಲಿದೆ.

ಮುಖ್ಯಾಂಶಗಳು

  • ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಹೊಸ ವ್ಯವಸ್ಥೆ
  • ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿಗೆ ಕ್ರಮ
  • ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಇದು ಕಾರ್ಯನಿರ್ವಹಣೆ

ಭಾರತದಲ್ಲೇ ಮೊದಲ ಪ್ರಯೋಗ

ಈ ಯೋಜನೆ ಭಾರತದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು, ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿಗೆ ಪರ್ಯಾಯವಾಗಲಿದೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಜಾನುವಾರುಗಳ ಫೋಟೋಗಳನ್ನು ಇದೇ ವ್ಯವಸ್ಥೆಯ ಮೂಲಕ ಅಪ್‌ಲೋಡ್ ಮಾಡುವ ಅವಕಾಶವೂ ಇರಲಿದೆ. ಇದರಿಂದ ಡಿಜಿಟಲ್ ಆರೋಗ್ಯ ಪರಿಶೀಲನೆ ಹಾಗೂ ಸರ್ಕಾರದ ಸೇವೆಗಳನ್ನು ವೇಗವಾಗಿ ಪಡೆಯಲು ನೆರವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾಕಿ; ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಈ ಕುರಿತು ಮಾಹಿತಿ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮಾನವರ ಬೆರಳಚ್ಚಿನಂತೆಯೇ ಜಾನುವಾರುಗಳ ಮೂಗಿನ ರೇಖೆಗಳು ವಿಶಿಷ್ಟವಾಗಿರುತ್ತವೆ. ಅವುಗಳ ಆಧಾರದ ಮೇಲೆ ನಿಖರ ಗುರುತಿನ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಪಶುಸಂಗೋಪನೆ ಸಂಬಂಧಿತ ಯೋಜನೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಈ ಯೋಜನೆಯಿಂದ ರೈತರಿಗೆ ಲಸಿಕೆ ದಿನಾಂಕಗಳ ಕುರಿತು SMS ಅಲರ್ಟ್‌ಗಳು ಬರಲಿವೆ. ಹೊಸದಾಗಿ ಜನಿಸಿದ ಕರುಗಳಿಗೂ ಡಿಜಿಟಲ್ ದಾಖಲೆ ಮಾಡಬಹುದಾಗಿದೆ. ಮುಂದೆ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕ ಆರೋಗ್ಯ ತಪಾಸಣೆಯನ್ನೂ ನಡೆಸಬಹುದಾಗಿದೆ. AI ಆಧಾರಿತ ಈ ವ್ಯವಸ್ಥೆ ಪಶುಸಂಗೋಪನೆ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಜಾನುವಾರುಗಳ ಟ್ರ್ಯಾಕಿಂಗ್ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:54 am, Fri, 22 May 26

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More