ಎಲ್​ಡ್ರೊಕ್ ಇಂಡಿಯಾ ಕೆ-12 ಶೃಂಗಸಭೆಯಲ್ಲಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಶಾಲೆಯ ಎರಡು ಶಾಲೆಗಳಿಗೆ ಎರಡು ಪ್ರಶಸ್ತಿಗಳು

ಎಲ್​ಡ್ರೊಕ್ ಇಂಡಿಯಾ ಕೆ-12 ಶೃಂಗಸಭೆಯಲ್ಲಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಶಾಲೆಯ ಎರಡು ಶಾಲೆಗಳಿಗೆ ಎರಡು ಪ್ರಶಸ್ತಿಗಳು
ಜಾಲಹಳ್ಳಿ ಶಾಖೆಯ ಪ್ರಾಚಾರ್ಯೆಯಾದ ಶ್ರೀಮತಿ ಮಥುರಾ ಪ್ರಶಸ್ತಿ ಸ್ವೀಕರಿಸಿದರು

ಎಲ್​ಡ್ರೊಕ್ ಇಂಡಿಯಾ ಕೆ-12 ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿ ಸ್ವೀಕರಿಸುವಾಗ, ಪ್ರಾಂಶುಪಾಲರಾದ ಡಾ.ರಜನಿ ಭಕ್ಷಿ ಮಾತನಾಡಿ, ಎಲ್​ಡ್ರೊಕ್​ನಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯಾಗುತ್ತಿದೆ.

TV9kannada Web Team

| Edited By: sandhya thejappa

Mar 07, 2022 | 4:55 PM

ಬೆಂಗಳೂರು: ಎಲ್​ಡ್ರೊಕ್ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಕೆ-12 2022 ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸಂಸ್ಥೆಯ ಎರಡು ಶಾಖೆಗಳು ಪ್ರಶಸ್ತಿಗೆ ಭಾಜವಾಗಿದೆ. ಎಲ್​ಡ್ರೊಕ್ ಇಂಡಿಯಾ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೊಸ ರೂಪ ಕೊಡುತ್ತಿರುವ ಶಿಕ್ಷಣ ತಜ್ಞರು, ಚಿಂತಕರಿಗೆ ವೇದಿಕೆಯನ್ನು ಒದಗಿಸುತ್ತದೆ. ಆರ್ಕಿಡ್ ಸರ್ಜಾಪುರ ಶಾಖೆ ಇಂಟರ್ ನ್ಯಾಷನಲ್ ಶಾಲೆಗೆ ‘Excellence in inclusive and Experiential Learning Programs’ ಎಂಬ ಪ್ರಶಸ್ತಿ ಮತ್ತು ಜಾಲಹಳ್ಳಿ ಶಾಖೆಗೆ ‘Excellence in Academic structure’ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಲ್​ಡ್ರೊಕ್ ಇಂಡಿಯಾ ಕೆ-12 ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿ ಸ್ವೀಕರಿಸುವಾಗ, ಪ್ರಾಂಶುಪಾಲರಾದ ಡಾ.ರಜನಿ ಭಕ್ಷಿ ಮಾತನಾಡಿ, ಎಲ್​ಡ್ರೊಕ್​ನಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯಾಗುತ್ತಿದೆ. ನಮ್ಮ ಪ್ರಯತ್ನ ಹಾಗೂ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದಕ್ಕಾಗಿ ತುಂಬಾ ಸಂತೋಷವಾಗುತ್ತಿದೆ. ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಅತ್ಯುತ್ತಮ ಶೈಕ್ಷಣಿಕ ಮೂಲಸೌಕರ್ಯ ಮತ್ತು ಕಲಿಕಾ ಕಾರ್ಯಕ್ರಮಗಳನ್ನು ಒದಗಿಸಲು ಆರ್ಕಿಡ್ ಸಂಸ್ಥೆಗಳು ಯಾವಾಗಲೂ ಶ್ರಮಿಸುತ್ತವೆ ಎಂದರು.

ಡಾ. ರಜನಿ ಬಕ್ಷಿ ಆರ್ಕಿಡ್ಸ್ – ದಿ ಇಂಟರ್ ನ್ಯಾಶನಲ್ ಶಾಲೆಯ ಪ್ರತಿನಿಧಿಯಾಗಿ, ಏಳು ಖ್ಯಾತ ಶಿಕ್ಷಣ ತಜ್ಞರೊಂದಿಗೆ ವೇದಿಕೆ ಹಂಚಿಕೊಂಡರು. Use of tech and tooļ̧s Innovative Technologies and Robotics in Modern K̲12 Education ಎಂಬ ವಿಷಯದ ಕುರಿತಯ ಅಭಿಪ್ರಾಯ ಹಂಚಿಕೊಂಡರು. ಈ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಜಾಲಹಳ್ಳಿ ಶಾಖೆಯ ಪ್ರಾಚಾರ್ಯೆಯಾದ ಶ್ರೀಮತಿ ಮಥುರಾ ಕೆ. ಅವರು ಮಾತನಾಡಿ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲು ಬಲಿಷ್ಠವಾದ ಮೂಲಸೌಕರ್ಯದ ಅಗತ್ಯವಿದೆ. ನಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಸಮಗ್ರ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲು ನಾವು ಕಂಕಣ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ

ಉಕ್ರೇನ್​ ಅಧ್ಯಕ್ಷರೊಂದಿಗೆ 35 ನಿಮಿಷ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ವೊಲೊಡಿಮಿರ್​ ಝೆಲೆನ್ಸ್ಕಿ

ಪ್ರೀತಿ ತೊರೆದು ಒಂಟಿಯಾಗಿ ಬದುಕಲು ನಿರ್ಧರಿಸಿದ ದಿವ್ಯಾ; ಬಿಗ್​ ಬಾಸ್​ ಸ್ಪರ್ಧಿಯ ಬಾಳಲ್ಲಿ ಕಹಿ ಘಟನೆ  

Follow us on

Related Stories

Most Read Stories

Click on your DTH Provider to Add TV9 Kannada