AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anekal News: ಗೋವಾ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಇಬ್ಬರು ನಾಪತ್ತೆ; ದೂರು ದಾಖಲು

ಗೋವಾ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ. ಹೌದು ಆನೇಕಲ್ ತಾಲೂಕಿನ ಚಿಕ್ಕ ದಾಸನಹಳ್ಳಿಯ ನಿವಾಸಿಗಳಾದ 33 ವರ್ಷದ ಸಂತೋಷ್, ‌37 ವರ್ಷದ ಮುನಿ ಕುಮಾರ್ ನಾಪತ್ತೆಯಾದವರು.

Anekal News: ಗೋವಾ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಇಬ್ಬರು ನಾಪತ್ತೆ; ದೂರು ದಾಖಲು
ನಾಪತ್ತೆಯಾದವರು
ಕಿರಣ್ ಹನುಮಂತ್​ ಮಾದಾರ್
|

Updated on: May 24, 2023 | 2:52 PM

Share

ಬೆಂಗಳೂರು ನಗರ: ಗೋವಾ (Goa) ಪ್ರವಾಸಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ. ಹೌದು ಆನೇಕಲ್(Anekal)ತಾಲೂಕಿನ ಚಿಕ್ಕ ದಾಸನಹಳ್ಳಿಯ ನಿವಾಸಿಗಳಾದ 33 ವರ್ಷದ ಸಂತೋಷ್, ‌37 ವರ್ಷದ ಮುನಿ ಕುಮಾರ್ ಎಂಬುವವರು, ಜೊತೆಗೆ ಇನ್ನಿಬ್ಬರು ಸ್ನೇಹಿತರು ಇದೇ ತಿಂಗಳ 20ಕ್ಕೆ ಗೋವಾ ಪ್ರವಾಸಕ್ಕೆ ಹೋಗಿದ್ದರು. 22‌ನೇ ತಾರೀಖು ರಾತ್ರಿ ನಾಲ್ಕು ಸ್ನೇಹಿತರು ಗೋವಾ ರೀಚ್ ಆಗಿದ್ದರು. ಆ ನಾಲ್ಕು ಜನರ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ತಿಂಡಿ ತರಲು ರೆಸಾರ್ಟ್​ನಿಂದ ಹೊರ ಹೋಗಿದ್ದಾರೆ. ತಡವಾದ ಕಾರಣ10 ಗಂಟೆ 10‌ ನಿಮಿಷಕ್ಕೆ ಗೆಳೆಯ ಅಮೃತ್ ಕರೆ‌ ಮಾಡಿದ್ದ. ಮೊದಲು ಕರೆ‌ ಮಾಡಿದಾಗ ಸಂತೋಷ್ ಮೊಬೈಲ್ ರಿಂಗ್ ಆಗಿ ಕಟ್ ಆಗಿದ್ದು, ನಂತರ‌ ಕರೆ‌ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿತ್ತಂತೆ.

ಇನ್ನು ಕಾರಲ್ಲಿ‌ ಹೋಗಿದ್ದ ನಾಲ್ಕು ಸ್ನೇಹಿತರು, ಇಬ್ಬರ ಆಗಮನಕ್ಕೆ ಸಂಜೆಯವರೆಗೂ ಶಿವಾನಂದ್ ಹಾಗೂ ಅಮೃತ್ ಕಾದಿದ್ದಾರೆ. ಆದ್ರೆ, ರಾತ್ರಿಯಾದ್ರೂ ರೆಸ್ಪಾನ್ಸ್ ಸಿಗದ ಹಿನ್ನೆಲೆ ಗೋವಾದ ಕಾಲಂಗ್ಯೂಟ್ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಇಬ್ಬರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಸೇಡಂ ತಾಲೂಕಿನ ಕೊಡಂಗಲ್​ ಬಳಿ ಬೈಕ್​​ಗೆ ಲಾರಿ ಡಿಕ್ಕಿ; ಓರ್ವ ಸಾವು

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊಡಂಗಲ್​ ಬಳಿ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಸವಾರ ಕಾಶಿನಾಥ್ ರಾಠೋಡ್(30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುರುಕುಂಟಾ ಗ್ರಾಮದ ಇಂದಿರಾ ನಗರದ ನಿವಾಸಿಯಾದ ಕಾಶಿನಾಥ್ ಸೇಡಂ ಕಡೆಯಿಂದ ಕೊಡಂಗಲ್ ಕಡೆಗೆ ಬೈಕ್ ಮೇಲೆ ಹೋಗುವಾಗ ಏಕಾ ಏಕಿ ಬಂದ ಲಾರಿಯೊಂದು ಬೈಕ್ ಸವಾರನ ತಲೆ ಮೇಲೆ ಹಾಯ್ದು ಹೋಗಿದೆ. ಇದರಿಂದ ಸ್ಥಳದಲ್ಲಿಯೇ ಬೈಕ್ ಸವಾರ ಅಸುನೀಗಿದ್ದಾನೆ. ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಿರಾ ಟು ಹಾಸನ ನಾಪತ್ತೆಯಾಗಿದ್ದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್: ಇದು ಅಪ್ರಾಪ್ತ ಮಕ್ಕಳ ಪ್ರೇಮ್ ಕಹಾನಿ!

ಈಜಲು ಹೋಗಿ ಧಾರುಣ ಸಾವು ಕಂಡ ದನಗಾಹಿ

ನೆಲಮಂಗಲ: ಈಜಲು ಹೋಗಿದ್ದ ದನಗಾಹಿ ಧಾರುಣ ಸಾವು ಕಂಡ ಘಟನೆ ತಾಲೂಕಿನ ಶ್ರೀನಿವಾಸಪುರದಲ್ಲಿ ನಡೆದಿದೆ. ತಿರುಮಲಯ್ಯ (55) ಮೃತ ದುರ್ದೈವಿ. ದನಗಳಿಗೆ ಮೈ ತೊಳೆಯಲು ನೀರಿಗೆ ಇಳಿದಿದ್ದ ತಿರುಮಲಯ್ಯ. ದನಗಳಿಗೆ ಮೈ ತೊಳೆದ ಬಳಿಕ ತಾನು ನೀರಲ್ಲಿ ಈಜಾಡಲು ಹೋಗಿ‌ ಇದೀಗ ಧಾರುಣ ಅಂತ್ಯ ಕಂಡಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದಿದ್ದು, ಮೃತ ದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತು ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ