ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್; ರಾಜಕಾಲುವೆ ನೀರಲ್ಲಿ ಬೆಳೆಯಲಾಗುತ್ತಿದೆ ಸೊಪ್ಪು, ತರಕಾರಿ

ರಾಜಕಾಲುವೆ ನೀರಿನಿಂದ ಬೆಳೆದ ಸೊಪ್ಪು, ತರಕಾರಿಯನ್ನು ಬೆಂಗಳೂರಿನ ಸುತ್ತಮುತ್ತದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದು ಜನರ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಮಾರಾಟಗಾರರು ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡ್ತಿದ್ದಾರೆ ಎಂದು ಕೆಲ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.

ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್; ರಾಜಕಾಲುವೆ ನೀರಲ್ಲಿ ಬೆಳೆಯಲಾಗುತ್ತಿದೆ ಸೊಪ್ಪು, ತರಕಾರಿ
ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on: Aug 24, 2024 | 10:15 AM

ಬೆಂಗಳೂರು, ಆಗಸ್ಟ್​.24: ಸಿಲಿಕಾನ್ ಸಿಟಿ ಬೆಂಗಳೂರಿನ ಡಿ.ಚನ್ನಸಂದ್ರ ಸುತ್ತಮುತ್ತ ಹತ್ತಾರು ಎಕರೆಯಲ್ಲಿ ರಾಜಕಾಲುವೆ ನೀರನ್ನು ಬಳಸಿ ಸೊಪ್ಪು (Vegetables) ಬೆಳೆದು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್. ರಾಜಕಾಲುವೆ ನೀರಿನಿಂದ ಬೆಳೆದ ಸೊಪ್ಪು, ತರಕಾರಿಯನ್ನು ಬೆಂಗಳೂರಿನ (Bengaluru) ಸುತ್ತಮುತ್ತದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದು ಜನರ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.

ಗಬ್ಬೆದ್ದು ನಾರುತ್ತಿರುವ ರಾಜಕಾಲುವೆ ನೀರಿಗೆ ಅನಧಿಕೃತವಾಗಿ ನೂರಾರು ಮೋಟಾರ್ ಅಳವಡಿಕೆ ಮಾಡಿ ಹತ್ತಾರು ಎಕರೆಗಳಲ್ಲಿ ಸೊಪ್ಪು, ತರಕಾರಿ ಬೆಳೆಯಲಾಗುತ್ತಿದೆ. ಬೆಂಗಳೂರಿನ ಬಹುತೇಕ ಮಾರ್ಕೆಟ್​ಗಳಿಗೆ ಇದೇ ಸೊಪ್ಪು ಸಫ್ಲೆ ಮಾಡಲಾಗುತ್ತಿದೆ. ಅಕ್ಕಪಕ್ಕದ ಇಂಡಸ್ಟ್ರೀಗಳ ಕೆಮಿಕಲ್ ಮಿಶ್ರಿತ ನೀರು ಕೂಡ ಇದೇ ಕಾಲುವೆಗೆ ಸೇರ್ಪಡೆಯಾಗುತ್ತಿದೆ. ಹೀಗಾಗಿ ಕೊಳಚೆ ನೀರಲ್ಲಿ ಬೆಳೆದ ಈ ಸೊಪ್ಪು ತಿಂದ್ರೆ ರೋಗ ಬರೋದು ಪಕ್ಕ. ಆರೋಗ್ಯಕರವಾಗಿರಲು ಸೊಪ್ಪು ತಿನ್ನುತ್ತಾರೆ. ಆದ್ರೆ ಅದೇ ಸೊಪ್ಪು ಈಗ ವಿಷಕಾರಿಯಾಗುತ್ತಿದೆ. ಮಾರಾಟಗಾರರು ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡ್ತಿದ್ದಾರೆ ಎಂದು ಕೆಲ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ: ಯುವತಿಗೆ ಮಾದಕ ಪದಾರ್ಥ ನೀಡಿ ಅತ್ಯಾಚಾರವೆಸಗಿದ ಅಲ್ತಾಫ್​

ಈ ಹಿಂದೆ ಹುಬ್ಬಳ್ಳಿಯಲ್ಲಿ ಚರಂಡಿ ನೀರಲ್ಲಿ ಸೊಪ್ಪು ತೊಳೆದಿದ್ದ ವ್ಯಾಪಾರಿಯ ವಿಡಿಯೋ ರಾಜ್ಯದಲ್ಲೆಡೆ ಸಂಚಲನ ಮೂಡಿಸಿತ್ತು. ಇದೀಗ ಸಿಲಿಕಾನ್ ಸಿಟಿಯಲ್ಲೇ ಕೊಳಚೆ ನೀರಲ್ಲಿ ಸೊಪ್ಪಿನ ಕೃಷಿ ಮಾಡಲಾಗುತ್ತಿದೆ. ಇಡೀ ರಾಜಧಾನಿಯ ತ್ಯಾಜ್ಯ, ಹೊತ್ತು ಸಾಗೋ ರಾಜಕಾಲುವೆ ನೀರಲ್ಲಿ ಸೊಪ್ಪು ಬೆಳೆದು ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ವ್ಯಾಪಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಜನರ ಆರೋಗ್ಯ ಹಾಳುಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ