
ಬೆಂಗಳೂರು, (ಆಗಸ್ಟ್ 13): ನಗರದ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿ (New Parking Rules)ಜಾರಿಗೆ ತರಲು ಮುಂದಾಗಿದೆ. ಪುಗ್ಸಟ್ಟೆ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್ ಹಾಕಲು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಇಂದು (ಆಗಸ್ಟ್ 13) ಕರಡು ಅಧಿಸೂಚನೆ ಹೊರಡಿಸಿದ್ದು, ಹೊಸ ನೀತಿಯಡಿ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಾಹನಗಳಿಗೆ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಅದು ಈ ಕೆಳಗಿನಂತಿದೆ.
ಹೊಸ ನಿಯಮಾವಳಿಗಳ ಪ್ರಕಾರ ನಗರದ ರಸ್ತೆಗಳನ್ನು A, B, ಹಾಗೂ C ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ‘ಆನ್-ಸ್ಟ್ರೀಟ್’ (ರಸ್ತೆ ಬದಿ), ‘ಆಫ್-ಸ್ಟ್ರೀಟ್’ (ನಿಗದಿತ ಪಾರ್ಕಿಂಗ್ ತಾಣ) ಮತ್ತು ‘ಮಾಸಿಕ ಪಾಸ್’ ಎಂಬ ಮೂರು ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ.
ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತಡೆಯಲು ಕೆಲವು ಸೂಕ್ಷ್ಮ ವಲಯಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ/ನಿಷೇಧಿಸಲಾಗಿದೆ:
ರಾತ್ರಿ ಪಾರ್ಕಿಂಗ್: ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೆಲವು ಆಯ್ದ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.
ಸೈಕಲ್ ಹಾಗೂ ಆಟೋಗಳಿಗೆ ವಿನಾಯಿತಿ: ಸೈಕಲ್ ನಿಲುಗಡೆಗೆ ಹಾಗೂ ನಿಗದಿತ ಆಟೋ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಬಾಡಿಗೆದಾರರಿಗೆ ಪಾರ್ಕಿಂಗ್ ಜಾಗ ಒದಗಿಸುವುದು ಮನೆ ಮಾಲೀಕರ ಕರ್ತವ್ಯ. ರಸ್ತೆ ಬದಿ ಅಥವಾ ಮನೆ ಮುಂದೆ ವಾಹನ ನಿಲ್ಲಿಸಿದರೆ ಅದರ ಶುಲ್ಕ ಅಥವಾ ದಂಡದ ಜವಾಬ್ದಾರಿಯನ್ನು ಮಾಲೀಕರೇ ಹೊರಬೇಕಾಗುತ್ತದೆ.
ನಗರದಲ್ಲಿ ಪಾರ್ಕಿಂಗ್ ಅಭಾವ ನೀಗಿಸಲು ಸರ್ಕಾರಿ ಸಂಸ್ಥೆಗಳ ಖಾಲಿ ಜಾಗಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸಾಲದಾಗಿ, ಸಾರ್ವಜನಿಕರು ಅಥವಾ ಖಾಸಗಿ ವ್ಯಕ್ತಿಗಳು ತಮ್ಮ ಖಾಲಿ ನಿವೇಶನಗಳನ್ನು (Vacant Sites) ಸಾರ್ವಜನಿಕ ಪಾರ್ಕಿಂಗ್ ಉದ್ದೇಶಕ್ಕೆ ನೀಡಿದರೆ, ಅಂತಹ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ (Property Tax) ವಿಶೇಷ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
Published On - 4:17 pm, Thu, 13 August 26