AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯ, ಗೌರಿ-ಗಣೇಶ ಹಬ್ಬ ರಜೆ: ಖಾಸಗಿ ಬಸ್​ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ

ವಾರಾಂತ್ಯ ಮತ್ತು ಗೌರಿ-ಗಣೇಶ ಹಬ್ಬದ ರಜಾ ನಿಮಿತ್ತ ಊರಿಗೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ಮಾಲೀಕರು ಶಾಕ್​ ನೀಡಿದ್ದಾರೆ. ಪ್ರಯಾಣದ ದರ ದ್ವಿಗುಣಗೊಂಡಿದೆ. ವಾರಾಂತ್ಯದ ರಜೆ ಮತ್ತು ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ ಮಾಲೀಕರು ದರ ಏರಿಕೆ ಮಾಡಿದ್ದಾರೆ. ಬೆಂಗಳೂರಿನಿಂದ ವಿವಿಧ ಊರುಗಳಿಗೆ ಪ್ರಯಾಣದ ದರ ಎಷ್ಟು ಏರಿಕೆಯಾಗಿದೆ ಇಲ್ಲಿದೆ ವಿವರ.

ವಾರಾಂತ್ಯ, ಗೌರಿ-ಗಣೇಶ ಹಬ್ಬ ರಜೆ: ಖಾಸಗಿ ಬಸ್​ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on:Aug 22, 2025 | 3:57 PM

Share

ಬೆಂಗಳೂರು, ಆಗಸ್ಟ್​ 22: ವಾರಾಂತ್ಯದ ರಜೆ ಮತ್ತು ಗೌರಿ- ಗಣೇಶ ಹಬ್ಬ (Gauri-Ganesha Festival) ಅಂತ ಬೆಂಗಳೂರಿನಿಂದ (Bengaluru) ಅನೇಕ ಜನರು ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದಾರೆ. ಇದನ್ನೇ, ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್​ ಮಾಲೀಕರು ಪ್ರಯಾಣದ ದರವನ್ನು ದುಪಟ್ಟು ಮಾಡಿದ್ದಾರೆ. ನಾಳೆ ನಾಲ್ಕನೇ ಶನಿವಾರ ರಜೆ, ಭಾನುವಾರ ರಜೆ ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಹಬ್ಬ ಒಟ್ಟು ಐದು ದಿನಗಳ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಉದ್ಯೋಗಿಗಳು ಈಗಾಗಲೇ ತಮ್ಮ ಕಚೇರಿಗಳಿಗೆ ರಜೆ ಹಾಕಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಟಿಕೆಟ್​ ದರ ದುಪ್ಪಟ್ಟು ಮಾಡಿದ್ದಾರೆ.

ಸಾಮಾನ್ಯ ದಿನದ ದರ ಮತ್ತು ಹಬ್ಬದ ದರ

ಬೆಂಗಳೂರು-ಧರ್ಮಸ್ಥಳ

  • ಪ್ರಸ್ತುತ ದರ: 600-1100 ರೂ.
  • ರಜಾ ದಿನದ ದರ: 1499-2600 ರೂ.

ಬೆಂಗಳೂರು-ಮೈಸೂರು

  • ಪ್ರಸ್ತುತ ದರ: 199-2000 ರೂ.
  • ರಜಾ ದಿನದ ದರ: 300-5000 ರೂ.

ಬೆಂಗಳೂರು-ಕೊಡಗು

  • ಪ್ರಸ್ತುತ ದರ: 494-849 ರೂ.
  • ರಜಾ ದಿನದ ದರ: 680-5000 ರೂ.

ಬೆಂಗಳೂರು-ಚಿಕ್ಕಮಗಳೂರು

  • ಪ್ರಸ್ತುತ ದರ: 575-800 ರೂ.
  • ರಜಾ ದಿನದ ದರ: 950-1600 ರೂ.

ಬೆಂಗಳೂರು-ಮಂಗಳೂರು

  • ಪ್ರಸ್ತುತ ದರ: 349-2750 ರೂ.
  • ರಜಾ ದಿನದ ದರ: 1019-3000 ರೂ.

ಬೆಂಗಳೂರು-ಧಾರವಾಡ

  • ಪ್ರಸ್ತುತ ದರ: 684-3600 ರೂ.
  • ರಜಾ ದಿನ ದರ: 1000-5000 ರೂ.

ಬೆಂಗಳೂರು-ಹುಬ್ಬಳ್ಳಿ

  • ಪ್ರಸ್ತುತ ದರ: 609-1800 ರೂ.
  • ರಜಾ ದಿನ ದರ: 1200-9999 ರೂ.

ಬೆಂಗಳೂರು- ಕಾರವಾರ

  • ಪ್ರಸ್ತುತ ದರ: 740-1600 ರೂ.
  • ರಜಾ ದಿನ ದರ: 1500-3499 ರೂ.

ಬೆಂಗಳೂರು-ಕಲಬುರಗಿ

  • ಪ್ರಸ್ತುತ ದರ: 570-1300 ರೂ.
  • ರಜಾ ದಿನ ದರ: 950-2200 ರೂ.

ಬೆಂಗಳೂರು-ಶಿವಮೊಗ್ಗ

  • ಪ್ರಸ್ತುತ ದರ: 375-1199 ರೂ.
  • ರಜಾ ದಿನದ ದರ: 799-2100 ರೂ.

ಇದನ್ನೂ ಓದಿ: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್

ಖಾಸಗಿ ಬಸ್​ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಊರುಗಳಿಗೆ ತೆರಳುವ ದಾವಂತದಲ್ಲಿರುವವರು ಟಿಕೆಟ್​ ದರ ಕೇಳಿ ದಂಗಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Fri, 22 August 25

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ