AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್​​ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ 60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್​​ ನಿರ್ಮಿಸಲಾಗಿದೆ. ಅಂದು ಕೂಡ ಸಿಎಂ ಆಗಿದ್ದ ಸಿದ್ದರಾಮಯ್ಯ ಈ ಬ್ರಿಡ್ಜ್ ಕಂ ಬ್ಯಾರೇಜ್​​ ಅನ್ನು ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ಮಾಡಿ 12 ವರ್ಷಗಳು ಉರುಳಿದರು ಬ್ಯಾರೇಜ್​​ನಲ್ಲಿ ನೀರು ನಿಲ್ಲುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್​​ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು
ಬ್ರಿಡ್ಜ್ ಕಂ ಬ್ಯಾರೇಜ್
ಸುರೇಶ ನಾಯಕ
| Edited By: |

Updated on: Dec 08, 2025 | 6:59 PM

Share

ಬೀದರ್, ಡಿಸೆಂಬರ್​ 08: ರೈತರ ಜಮೀನು ಹಸಿರಾಗಿಸುವ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ (bridge cum barrage) ನಿರ್ಮಿಸಲಾಗಿದೆ. ಉದ್ಘಾಟನೆಯಾಗಿ 12 ವರ್ಷ ಉರಳಿದರೂ ಬ್ಯಾರೇಜ್​​ನಲ್ಲಿ ನೀರು ನಿಲ್ಲುತ್ತಿಲ್ಲ. ಇದು ಬೃಹತ್ ನೀರಾವರಿಯ ಕನಸು ಕಂಡಿದ್ದ ರೈತರಿಗೆ (farmers) ಬಿಗ್​​ ಶಾಕ್ ನೀಡಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಫಲವಾದಂತಾಗಿದೆ.

60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್​​ ನಿರ್ಮಾಣ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಗೆ ನೀರಾವರಿ ಕಲ್ಪಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಳಿ 60.94 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್​​ ನಿರ್ಮಿಸಲಾಗಿದೆ. ಈ ಬ್ಯಾರೇಜ್ ನಿರ್ಮಾಣವಾಗಿ, ಲೋಕಾರ್ಪಣೆಗೊಂಡು 12 ವರ್ಷಗಳು ಉರುಳಿದರೂ ಈ ಬ್ಯಾರೇಜ್ ನೀರಿನಿಂದ ರೈತರು ಒಂದೇ ಒಂದು ಎಕರೆಯಷ್ಟು ನೀರಾವರಿ ಮಾಡಿಕೊಂಡಿಲ್ಲ. ಇದು ಸಹಜವಾಗಿಯೇ ಚಂದಾಪುರ, ಬಾಬಳಿ, ಮಣಿಗೆಂಪುರ, ಗೋರನಾಳದ ರೈತರ ನೀರಾವರಿ ಕನಸು ನುಚ್ಚು ನೂರಾದಂತಾಗಿದೆ.

ಇದನ್ನೂ ಓದಿ: ಭೀಮಾ ನದಿ ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ: ತೀವ್ರ ಸಂಕಷ್ಟದಲ್ಲಿ ಕಲಬುರಗಿಯ 117 ಗ್ರಾಮಗಳ ಜನ

ಬ್ಯಾರೇಜ್ ನಿರ್ಮಾಣವಾಗುತ್ತಿದಂತೆ ನೀರು ನಿಲ್ಲುತ್ತದೆ ಎಂದು ನೂರಾರು ರೈತರು ತಮ್ಮ ಹೊಲಗಳಲ್ಲಿ ಸಾಲ ಮಾಡಿ ಪೈಪ್​ಲೈನ್ ಹಾಕಿಸಿಕೊಂಡು ಕುಳಿತಿದ್ದಾರೆ. ಆದರೆ ಬ್ಯಾರೇಜ್​​ನಲ್ಲಿ ಮಾತ್ರ ನೀರು ನಿಲ್ಲುತ್ತಿಲ್ಲ. ಇದು ಸಹಜವಾಗಿಯೇ ಸರ್ಕಾರದ ವಿರುದ್ಧ ರೈತರು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಇಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವುದಕ್ಕೆ ಶುರು ಮಾಡಿದಾಗ ಇಲ್ಲಿನ ರೈತರು ಖುಷಿಯಾಗಿದ್ದು, ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಬಹು ಅಂದುಕೊಂಡಿದ್ದರು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ, ಉದ್ಘಾಟನೆಯಾಗಿ 12 ವರ್ಷ ಕಳೆದರೂ ಈ ಡ್ಯಾಂನಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಮಳೆಯಾಶ್ರಿತ ಬೆಳೆಯನ್ನ ಬೆಳೆದು ರೈತರು ಬದುಕು ಕಟ್ಟಿಕೊಳ್ಳಬೇಕಾಗಿದ್ದು, ಈ ಬ್ಯಾರೇಜ್​ನಿಂದ ಏನು ಪ್ರಯೋಜನವಾಗಿಲ್ಲ ಎಂದು ರೈತ ಮಣ್ಮತಪ್ಪ ಹೇಳುತ್ತಾರೆ.

ಚಂದಾಪುರ ಗ್ರಾಮದ ಬಳಿ ಮಾಂಜ್ರಾ ನದಿಯೂ ಹರಿದು ಹೋಗುತ್ತದೆ. ಈ ನದಿಯೂ ಮಳೆಗಾಲದಲ್ಲಿ ಮೈದುಂಬಿಕೊಂಡು ಹರಿದು ಪಕ್ಕದ ರಾಜ್ಯ ತೆಲಂಗಾಣಕ್ಕೆ ನೀರು ಹರಿದು ಹೋಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಇಲ್ಲಿ ನೀರು ಸಂಗ್ರಹಿಸಿ ಬೆಸಿಗೆಯಲ್ಲಿ ಇಲ್ಲಿನ ನೀರನ್ನ ಸುತ್ತಮುತ್ತಲಿನ ಹತ್ತಾರು ಗ್ರಾಮಕ್ಕೆ ಕುಡಿಯಲು ಹಾಗೂ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶವಾಗಿತ್ತು. ಆದರೆ ಈ ಬ್ಯಾರೇಜ್ ನಿರ್ಮಾಣವಾಗಿ 12 ವರ್ಷಗಳು ಉರುಳುತ್ತಾ ಬಂದರೂ ಇಲ್ಲಿ ನೀರು ಮಾತ್ರ ನಿಲ್ಲುತ್ತಿಲ್ಲ.

ಕಳಪೆ ಗುಣಮಟ್ಟದ ಗೇಟ್​ಗಳು ಅಳವಡಿಕೆ

ಮಳೆಗಾಲದಲ್ಲೂ ನೀರು ವ್ಯರ್ಥವಾಗಿ ಹರಿದು ತೆಲಂಗಾಣ ಸೇರುತ್ತಿದೆಯೇ ವಿನಹಃ ಈ ಬ್ಯಾರೇಜ್ ಇದ್ದು ಇಲ್ಲದಂತಾಗಿದೆ ಎಂದು ಇಲ್ಲಿನ ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷದಿಂದ ಈ ಬ್ಯಾರೇಜ್​​ಗೆ ಅಳವಡಿಸಲಾಗಿದ್ದ ಗೇಟ್​ಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿದ್ದು, ನೀರು ಸೋರಿಕೆಯಾಗಿ ನೀರಿನ ರಭಸಕ್ಕೆ ಗೇಟ್​ಗಳು ಕಿತ್ತುಕೊಂಡು ಹೋಗಿವೆ.

ಈ ಬ್ಯಾರೇಜ್ ನಿರ್ಮಾಣದ ಸಮಯದಲ್ಲಿ ನೂರಾರು ಎಕರೆ ಜಮೀನು ಕೂಡ ಹೋಗಿದೆ. ಆದರೆ ಈವರೆಗೂ ರೈತರಿಗೆ ಸಿಗಬೇಕಾಗ ಪರಿಹಾರ ಸಿಕ್ಕಿಲ್ಲ. ಇತ್ತ ಜಮೀನು ಇಲ್ಲ, ಮೊತ್ತೊಂದು ಕಡೆಗೆ ಜಮೀನಿಗೆ ನೀರು ಇಲ್ಲ. ಹೀಗಾಗಿ ರೈತರು ಸರಕಾರ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರೈತರಿಗೆ ಅನೂಕೂಲವಾಗಲಿ ಎಂದು ಸರಕಾರ ಕೊಟ್ಯಂತರ ರೂ. ಸುರಿದು ಬ್ಯಾರೇಜ್ ನಿರ್ಮಾಣ ಮಾಡಿದೆ. ಆದರೆ ನೀರು ನಿಲ್ಲದಿರುವುದರಿಂದ ರೈತರು ನೀರಾವರಿ ಕನಸು ಕಾಣುವುದನ್ನೇ ನಿಲ್ಲಿಸಿದ್ದಾರೆ.

ಇದನ್ನೂ ಓದಿ: North Karnataka Flood: ಎಲ್ಲೆಡೆ ದಸರಾ, ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಜನಜೀವನ ತತ್ತರ

ರೈತರ ಜಮೀನಿಗೆ ನೀರು ಕೊಡಬೇಕು, ಭೂಮಿಯಲ್ಲಿ ನೀರಿನ ಮೂಲ ಜಾಸ್ತಿಯಾಗಬೇಕು ಎನ್ನುವ ಉದ್ದೇಶದಿಂದ ನಿರ್ಮಾಣ ಮಾಡಿದ ಬ್ಯಾರೇಜ್, ಆಟಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ಬ್ಯಾರೇಜ್ ನಿರ್ಮಾಣಕ್ಕೆ 60.94 ಕೋಟಿ ರೂ ವೆಚ್ಚಮಾಡಲಾಗಿದ್ದು, ಇದರ ಪ್ರಯೋಜನೆ ಮಾತ್ರ ಯಾರಿಗೂ ಆಗಿಲ್ಲ. ಬ್ಯಾರೇಜ್ ನಿರ್ಮಾಣ ಹೆಸರಿನಲ್ಲಿ ಕೋಟ್ಯಂತರ ರೂ ಹಣ ಅಧಿಕಾರಿಗಳು ಕೊಳ್ಳೆಹೊಡೆದಿರುವುದು ಮೇಲ್ನೇಟಕ್ಕೆ ಸಾಬೀತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.