Farm Ponds: ರೈತರ ಪಾಲಿನ ಆಪತ್ಭಾಂಧವ ಕೃಷಿ ಹೊಂಡಗಳು ಪಾತಾಳ ಕಚ್ಚಿರುವ ಅಂತರ್ಜಲವನ್ನು ಮೇಲೆತ್ತುತ್ತಿದೆ! ರೈತನ ಮೊಗದಲ್ಲಿ ಸಂತಸ ಉಕ್ಕುತ್ತಿದೆ!

 Humnabad Bidar: ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಾಮದಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ರೈತರು ಅತಿ ಹೆಚ್ಚು ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಗ್ರಾಮದ ಬಹುತೇಕ ರೈತರು ಅದರ ಲಾಭವನ್ನ ಪಡೆಯುತ್ತಿದ್ದಾರೆ. ಕೃಷಿ ಹೊಂಡಗಳು ರೈತರ ಪಾಲಿನ ಆಪತ್ಭಾಂಧವನಂತಾಗಿದೆ.

Farm Ponds: ರೈತರ ಪಾಲಿನ ಆಪತ್ಭಾಂಧವ ಕೃಷಿ ಹೊಂಡಗಳು ಪಾತಾಳ ಕಚ್ಚಿರುವ ಅಂತರ್ಜಲವನ್ನು ಮೇಲೆತ್ತುತ್ತಿದೆ! ರೈತನ ಮೊಗದಲ್ಲಿ ಸಂತಸ ಉಕ್ಕುತ್ತಿದೆ!
ರೈತರ ಪಾಲಿನ ಆಪತ್ಭಾಂಧವ ಕೃಷಿ ಹೊಂಡಗಳು ಪಾತಾಳ ಕಚ್ಚಿರುವ ಅಂತರ್ಜಲವನ್ನು ಮೇಲೆತ್ತುತ್ತಿದೆ!
Follow us
ಸಾಧು ಶ್ರೀನಾಥ್​
|

Updated on: Mar 07, 2023 | 5:13 PM

ಆ ಜಿಲ್ಲೆಯಲ್ಲಿ ಮಳೆ ಕಡಿಮೆಯೇ. ಬೇಸಿಗೆ ಆರಂಭವಾದರೆ ಸಾಕು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ಸಾವಿರ ಅಡಿಯಷ್ಟು ಬೋರ್ ವೆಲ್ ಕೊರೆಸಿದರೂ ಅಲ್ಲಿ ನೀರು ಬರೋದು ಅಪರೂಪವೇ. ಈಗ ಐದಾರು ವರ್ಷದಿಂದ ಜಿಲ್ಲೆಯಲ್ಲಿ ಅಂತರ್ ಜಲ (Under ground Water) ಕ್ರಮೇಣ ವೃದ್ಧಿಸುತ್ತಿದೆ 1,000 ಅಡಿಯಷ್ಟು ಬೋರ್ ವೆಲ್ ಕೊರೆಸುವ ಕಡೆ, 500 ಅಡಿಗೆಲ್ಲಾ ನೀರು ಬರುತ್ತಿದೆ! ಅದಕ್ಕೆ ಪ್ರಮುಖವಾದ ಕಾರಣ ಕೃಷಿ ಹೊಂಡಗಳು (Agriculture ponds). ಅಂತರ್ ಜಲ ಹೆಚ್ಚಿಸಿದ ಕೃಷಿ ಹೊಂಡಗಳು… ಮಳೆ ಕೈಕೊಟ್ಟಾಗ ರೈತನ ಕೈ ಹಿಡಿಯುತ್ತೆ ಕೃಷಿ ಹೊಂಡ… ಜಿಲ್ಲೆಯಲ್ಲಿವೆ 9 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳು… ಹೌದು ಗಡಿ ಜಿಲ್ಲೆ ಬೀದರ್ (Bidar) ಅಂದರೆ ನಮಗೆ ನೆನಪಾಗೋದು ಬರದನಾಡು ಬಿಸಿಲ ನಗರಿ ಅಂತಲೇ. ಈ ಜಿಲ್ಲೆಯಲ್ಲಿ ಮಳೆ ಅಷ್ಟೇನೂ ಆಗೋದಿಲ್ಲ, ನದಿಗಳು ಕೂಡಾ ಈ ಜಿಲ್ಲೆಯಲ್ಲಿ ಇಲ್ಲ ಹೀಗಾಗಿ ಪ್ರತಿ ಬೇಸಿಗೆಯಲ್ಲಿಯೂ ಕೂಡಾ ಇಲ್ಲಿನ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಾರೆ.

ಕಿಲೋಮೀಟರ್ ಗಟ್ಟಲೇ ಅಲೆದಾಡಿ ಕುಡಿಯುವ ನೀರು ತರುವ ಸ್ಥಿತಿ ಇಲ್ಲಿನ ಜನರದ್ದು. ಹತ್ತಾರು ವರ್ಷದಿಂದ ಈ ಜಿಲ್ಲೆಯ ಜನರು, ರೈತರು ಇದೆ ರೀತಿಯ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಆದರೆ ಕಳೆದ ಐದಾರು ವರ್ಷದಿಂದ ಜಿಲ್ಲೆಯಲ್ಲಿ ಸ್ಪಲ್ಪಮಟ್ಟಿಗೆ ಉತ್ತಮವಾಗಿ ಮಳೆಯಾಗುತ್ತಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಳ್ಳುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ರೈತರು ತಮ್ಮ ಹೊಲದಲ್ಲಿ ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಸ್ವಲ್ಪ ಮಳೆಯಾದರೆ ಸಾಕು ಕೃಷಿ ಹೊಂಡಗಳಲ್ಲಿ ಭರಪೂರ ನೀರು ಸಂಗ್ರಹವಾಗುತ್ತಿದೆ.

ಇದರ ಪರಿಣಾಮವಾಗಿ ಅಂತರ್ ಜಲ ಕೂಡಾ ಇಲ್ಲಿ ವೃದ್ಧಿಯಾಗುತ್ತಿದ್ದು, ಈ ಹಿಂದೆಯಲ್ಲ ಸಾವಿರಾರು ಅಡಿ ಆಳವೇ ಬೋರ್ ವೆಲ್ ಕೊರೆಸಿದರೂ ನೀರು ಬರೋದು ಗ್ಯಾರಂಟಿ ಇರುತ್ತಿರಲಿಲ್ಲ. ಆದರೀಗ 500 ಅಡಿಯಷ್ಟು ಬೋರ್ ವೆಲ್ ಕೊರೆಸಿದರೆ ನೀರು ಬರೋದು ಪಕ್ಕಾ ಆಗಿದೆ! ಅದಕ್ಕೆ ಕಾರಣ ಇವೇ ಕೃಷಿ ಹೊಂಡಗಳು. ಇನ್ನು ಹೊಂಡದಿಂದ ಹತ್ತಾರು ಪ್ರಯೋಜನಗಳಿವೆ. ರೈತರು ತಮ್ಮ ಹೊಲದಲ್ಲಿ ಯಾವುದೇ ಬೆಳೆಯನ್ನ ಬೆಳೆದರೆ ಆ ಬೆಳೆಗೆ ನೀರಿನ ಸಮಸ್ಯೆಯಾದಾಗ ಇದೆ ಕೃಷಿ ಹೊಂಡದಲ್ಲಿನ ನೀರನ್ನ ಬಳಸಿಕೊಂಡು ಒಣಗಿ ಹೋಗುವ ಬೆಳೆಯನ್ನ ಕಾಪಾಡಬಹುದು. ಜೊತೆಗೆ ಕೃಷಿ ಹೊಂಡದಲ್ಲಿನ ನೀರು ಭೂಮಿಯಲ್ಲಿ ಇಂಗಿ ಅಂತರ್ ಜಲ ವೃದ್ಧಿಗೂ ಕೂಡಾ ಕಾರಣವಾಗುತ್ತದೆಂದು ಇಲ್ಲಿನ ರೈತರು ಸಂಭ್ರಮ-ಸಂತೋಷದಿಂದ ಹೇಳುತ್ತಾರೆ.

ಇನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಾಮದಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ರೈತರು ಅತಿ ಹೆಚ್ಚು ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಗ್ರಾಮದ ಬಹುತೇಕ ರೈತರು ತಾವು ನಿರ್ಮಾಣ ಮಾಡಿಕೊಂಡು ಕೃಷಿ ಹೊಂಡದಿಂದ ಲಾಭವನ್ನ ಪಡೆಯುತ್ತಿದ್ದಾರೆ. ಇನ್ನು ಈ ಗ್ರಾಮದಲ್ಲಿ ಯಾವುದೆ ಬೋರ್ ವೆಲ್ ಕೊರೆಯಿಸಿದರು, ಒಂದರಿಂದ ಎರಡು ಇಂಚು ನೀರು ಬಂದರೆ ಅದೆ ಹೆಚ್ಚು, ಹೀಗಾಗಿ ಕೃಷಿ ಹೊಂಡದಲ್ಲಿ ನೀರು ಸಂಗ್ರಹ ಮಾಡಿಕೊಂಡು ಅದೆ ನೀರನ್ನ ಹೊವುಗಳಿಗೆ ಹಾಯಿಸುವುದರಿಂದ ರೈತನ್ನ ನೀರಿನ ಕೊರತೆ ಕಾಡುತ್ತಿಲ್ಲ.

ಹೀಗಾಗಿ ಕಡಿಮೆ ನೀರಿನಲ್ಲಿಯೇ ವರ್ಷಕ್ಕೆ ಎರಡ್ಮೂರು ಬೆಳೆಯನ್ನ ಬೆಳೆಸುತ್ತಿದ್ದಾರೆ. ನೀರಾವರಿ ಮಾಡಿಕೊಂಡು ಈ ಗ್ರಾಮದ ರೈತರು ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದಾರೆ. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೂಪಗೊಂಡಿರುವ ಕೃಷಿ ಹೊಂಡಗಳು ಬರದಿಂದ ಹೈರಾಣಾಗುವ ಜಿಲ್ಲೆಯ ರೈತರ ಕೈಹಿಡಿಯುತ್ತಿದೆ, ರೈತರಿಗೆ ಆಸರೆ ಆಗುತ್ತಿವೆ. ಈ ಯೋಜನೆಯಿಂದ ಒಣ ಮತ್ತು ಮಳೆಯಾಶ್ರಿತ ಪ್ರದೇಶದ ರೈತರಿಗೆ ಅನುಕೂಲವಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇದು ವರದಾನ. ಇದರಿಂದ ಆದಾಯವೂ ವೃದ್ಧಿಯಾಗುತ್ತದೆ.

ಇದನ್ನೂ ಓದಿ:

ಕಲಬುರಗಿ: “ಸಣ್ಣ ರೈತರಿಗೆ ಕೃಷಿ ಉಪಕರಣಗಳ ಬಳಕೆ” ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

ಜಮೀನಿನಿಂದ ಹಳ್ಳಕ್ಕೆ ಹರಿದು ಹೋಗುವ ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿ, ಬೆಳೆಗಳು ಒಣಗುವ ಹಂತದಲ್ಲಿ ನೀರುಣಿಸಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಇನ್ನು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡ ರೈತರಿಗೆ ಪೆಟ್ರೋಲ್ ಚಾಲಿತ ನೀರು ಎತ್ತುವ ಯಂತ್ರ, ಅದಕ್ಕೆ ಬೇಕಾದ ಪೈಪ್ ಗಳನ್ನೂ ಕೂಡಾ ಶೇಕಡಾ 90 ರ ಸಬ್ಸಿಡಿಯಲ್ಲಿ ರೈತರಿಗೆ ಕೊಡಲಾಗುತ್ತದೆ.

ನಾಲ್ಕೈದು ರೈತರು ಒಟ್ಟಾಗಿ ಬಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾದರೆ ನಾಲ್ಕು ಜನ ರೈತರಿಗೆ ಉಚಿತವಾಗಿ ನೀರು ಎತ್ತುವ ಯಂತ್ರವನ್ನ ಕೊಡಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಹೊಂಡಗಳನ್ನ ಇಲ್ಲಿ ರೈತರ ಹೊಲಗಳಲ್ಲಿ ನಿರ್ಮಾಣ ಮಾಡಿ ಕೊಡಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಜೊತೆಗೆ ಅಂತರ್ ಜಲ ವೃದ್ಧಿಗೂ ಇವು ಸಹಕಾರಿಯಾಗುತ್ತವೆ.

ಕೃಷಿ ಹೊಂಡಗಳು ರೈತರ ಪಾಲಿನ ಆಪತ್ಭಾಂಧವನಂತಾಗಿದೆ. ನೀರಿಲ್ಲದೆ ಬೆಳೆ ಒಣಗುವ ಹಂತಕ್ಕೆ ಬಂದಾಗ ಕೃಷಿ ಹೊಂಡಗಳು ರೈತರ ಕೈ ಹಿಡಿಯುತ್ತವೆ. ಜೊತೆಗೆ ಇದರಿಂದ ನೀರಿನ ಅಂತರ್ ಜಲ ಮಟ್ಟವೂ ಕೂಡಾ ಜಾಸ್ತಿಯಾಗಿ ನೀರಿಲ್ಲದೆ ಬತ್ತಿ ಹೋಗಿರುವ ಅದೆಷ್ಟೋ ಬೋರ್ ವೆಲ್ ಗಳಲ್ಲಿ ಮತ್ತೆ ನೀರು ಬರುವಂತೆ ಮಾಡಿದೆ. ಇದು ಸಹಜವಾಗಿಯೇ ರೈತರ ಮೊಗದಲ್ಲಿ ನಗು ಮೂಡಿಸಿದೆ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ