Crime News: ಬಸವಕಲ್ಯಾಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗೆ 4 ತಿಂಗಳ ಸಾದಾ ಶಿಕ್ಷೆ, ಬಸ್ ನಿಲ್ದಾಣದಲ್ಲಿ ವೃದ್ದೆಯ ಚಿನ್ನದ ಸರ ಕಳ್ಳತನ

ಪ್ರಕರಣದ ಕುರಿತು ಪಿಎಸ್ಐ ಖಾಜಾ ಹುಸೇನ್ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು. ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಆರೋಪಿಗಳಿಗೆ 4 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Crime News: ಬಸವಕಲ್ಯಾಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗೆ 4 ತಿಂಗಳ ಸಾದಾ ಶಿಕ್ಷೆ, ಬಸ್ ನಿಲ್ದಾಣದಲ್ಲಿ ವೃದ್ದೆಯ ಚಿನ್ನದ ಸರ ಕಳ್ಳತನ
ಬಸವಕಲ್ಯಾಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗೆ 4 ತಿಂಗಳ ಸಾದಾ ಶಿಕ್ಷೆ, ಬಸ್ ನಿಲ್ದಾಣದಲ್ಲಿ ವೃದ್ದೆಯ ಚಿನ್ನದ ಸರ ಕಳ್ಳತನ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 22, 2022 | 4:39 PM

ಬೀದರ್: ಬಸವಕಲ್ಯಾಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗೆ 4 ತಿಂಗಳ ಸಾದಾ ಶಿಕ್ಷೆ ಹಾಗೂ ನಗದು ದಂಡ ವಿಧಿಸಿ ಬಸವಕಲ್ಯಾಣದ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಶಿವಾಜಿ ನಾಮದೇವರಾವ ಮೂಳೆ ಹಾಗೂ ಈತನ ಪತ್ನಿ ಸುಜಾತಾ ಶಿವಾಜಿ ಮೂಳೆ ಶಿಕ್ಷೆಗೆ ಗುರಿಯಾದ ದಂಪತಿಯಾಗಿದ್ದಾರೆ.

ಕಳೆದ 2015ರ ಏಪ್ರಿಲ್ 4ರಂದು ಸಸ್ತಾಪೂರ ಬಂಗ್ಲಾದಲ್ಲಿ ತಮ್ಮ ಕಿರಾಣಿ ಅಂಗಡಿಯಲ್ಲಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾಗ ಅಂದಿನ ಪ್ರಭಾರಿ ಪಿಎಸ್ಐ ಟಿ.ಎಸ್.ನಾಯಕ ನೇತೃತ್ವದಲ್ಲಿ ದಾಳಿ ನಡೆಸಿದ ನಗರ ಠಾಣೆ ಪೊಲೀಸರ ತಂಡ ಈ ದಂಪತಿಯನ್ನು ಬಂಧಿಸಿತ್ತು. ಅವರಿಂದ 4.53 ಲಕ್ಷ ರೂ. ಜಪ್ತಿ ಮಾಡಿಕೊಂಡಿತು.

ಪ್ರಕರಣದ ಕುರಿತು ಪಿಎಸ್ಐ ಖಾಜಾ ಹುಸೇನ್ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು. ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಂಗವ್ವ ಆಯಟ್ಟಿ ಅವರು ಆರೋಪಿಗಳಿಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 600 ರೂ. ನಗದು ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಫಿರಿಯಾದಿ ಪರ ಸರ್ಕಾರಿ ಸಹಾಯಕ ಅಭಿಯೋಕರಾದ ಜಗದೇವಿ ಚೊಂಡೆ ವಾದ ಮಂಡಿಸಿದ್ದರು.

ಬಸ್ ನಿಲ್ದಾಣದಲ್ಲಿ ವೃದ್ದೆಯ 3 ಲಕ್ಷ ಮೌಲ್ಯದ ಚಿನ್ನದ ಸರ ಕದ್ದು ಪರಾರಿ..

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಹಾಡುಹಗಲೆ ವೃದ್ದೆಯೊಬ್ಬರ ಕೊರಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ಕನಕರತ್ನ ಎಂಬ ವೃದ್ದೆ ಚಿನ್ನದ ಸರ ಕಳೆದುಕೊಂಡವರು. ಅದು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಸರವಾಗಿದೆ. ಗಂಗಾವತಿ ಇಂದ ಬಾಪಿರೆಡ್ಡಿ ಕ್ಯಾಂಪ್ ಗೆ ಹೊರಟಿದ್ದಾಗ, ಬಸ್ ನಿಲ್ದಾಣದಲ್ಲಿ ಕನಕರತ್ನ ಅವರ ಚಿನ್ನದ ಸರವನ್ನು ಕಳ್ಳರು ಎಗುರಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಪತ್ತೆ ಪ್ರಕರಣ: ಸುಳಿವು ಕೊಟ್ಟವರಿಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಹುಮಾನ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?