ಬೀದರ್: ಬರಗಾಲದಲ್ಲಿಯೂ ಬತ್ತದ, ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಬಾವಿಗಳ ನಿರ್ಲಕ್ಷ್ಯ, ಜನರ ಆಕ್ರೋಶ
ಶತಮಾನಗಳಷ್ಟು ಪುರಾತನವಾದ ಭಾವಿಗಳು ಬೀದರ್ನಲ್ಲಿ ಸಾಕಷ್ಟಿವೆ. ಎಂತಹ ಭೀಕರ ಬರಗಾದಲ್ಲಿಯೂ ಆ ಬಾವಿಯಲ್ಲಿ ನೀರು ಖಾಲಿಯಾಗೋದೆ ಇಲ್ಲ. ಅಪರೂಪದಲ್ಲಿ ಅಪರೂಪದಂತಿರುವ ಇಂತಹ ಐತಿಹಾಸಿಕ ಬಾವಿಗಳ ಸುತ್ತಮುತ್ತಲೂ ಗಿಡಗಂಟೆಗಳು ಬೆಳೆದು ಹಾಳಾಗುತ್ತಿವೆ. ಈ ರೀತಿಯ ಬಾವಿಗಳ ನೀರನ್ನು ಜಿಲ್ಲಾಡಳಿತ ಬಳಕೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿದೆ.

ಬೀದರ್, ಮಾರ್ಚ್ 14: ಶತಮಾನಗಳಷ್ಟು ಹಳೆದಾದ ಪುರಾತನ ಕಾಲದ ಐತಿಹಾಸಿಕ ಬಾವಿಗಳನ್ನು ನಿರ್ಲಕ್ಷ್ಯಸಿಲಾಗುತ್ತಿದೆ ಎಂಬುದು ಜನರ ಅಳಲು. ನೋಡಲು ಸುಂದರ ಹಾಗೂ ಎಂತಹ ಭೀಕರ ಬರಗಾಲದಲ್ಲಿಯೂ ಬತ್ತದ ಬಾವಿಗಳನ್ನ ಉಳಿಸಿ ಆ ನೀರನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಕಲ್ಪಿಸಲು ಹಿಂದೇಟು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಜಿಲ್ಲೆಯಲ್ಲಿವೆ ಏಳು ನೂರು ವರ್ಷದಷ್ಟು ಪುರಾತನ ನೂರಕ್ಕೂ ಹೆಚ್ಚು ಬಾವಿಗಳಿವೆ.
ಅಪರೂಪದಲ್ಲಿ ಅಪರೂಪದಂತಿರುವ ಬಾವಿಯನ್ನು ಸ್ಬಚ್ಚಗೊಳಿಸಿ ಆ ನೀರಿನ್ನು ಅಕ್ಕಪಕ್ಕದ ಗ್ರಾಮಗಳಿಗೆ ಬಳಕೆಗೆ ಅನುಕೂಲ ಕಲ್ಪಿಸಿದರೆ ಬೇಸಿಗೆಯಲ್ಲಿ ನೀರಿನ ದಾಹ ತಪ್ಪಿಸಬಹುದು. ಹೌದು ಬೀದರ್ ಜಿಲ್ಲೆಯಲ್ಲಿ ಬಹುಮನಿ ಸುಲ್ತಾನರ ಕಾಲದ ಸುಮಾರು ಏಳು ಶತಮಾನಗಳಷ್ಟು ಹಳೆದಾದ ನೂರಾರು ಬಾವಿಗಳು ಜಿಲ್ಲೆಯಲ್ಲಿದ್ದು ಎಂಥಹ ಬೀಕರವಾದ ಬರಗಾದಲ್ಲಿಯೂ ಕೂಡಾ ಈ ಭಾವಿಗಳು ಬತ್ತಿದ ಉದಾಹರಣೆಯಿಲ್ಲ.
ಇಲ್ಲಿನ ಬಾವಿಗಳನ್ನ ಆಗಿನ ಕಾಲದಲ್ಲಿ ವೈಜ್ಜಾನಿಕವಾಗಿ ಎಲ್ಲಿ ನೀರಿನ ಸೆಲೆ ಜಾಸ್ತಿಯಿದೆಯೋ ಅಲ್ಲಯೇ ಭಾವಿಗಳನ್ನ ನಿರ್ಮಾಣ ಮಾಡಿ ಸುತ್ತಮುತ್ತಲಿ ಗ್ರಾಮಗಳಿಗೆ ಇದೇ ಬಾವಿಗಳನ್ನ ನೀರನ್ನ ಉಪಯೋಗಿಸುತ್ತಿದ್ದರು, ಆದರೆ ಕಾಲ ಕ್ರಮೇಣವಾಗಿ ಇಂದು ಈ ಬಾವಿಗಳನ್ನ ಸಾರ್ವಜನಿಕರು ಬಳಕೆ ಮಾಡದೆ ಇದ್ದುದರಿಂದ ಬಾವಿಗಳು ಹಾಳಾಗುತ್ತಿವೆ.
ಆದರೆ ಬಾವಿಯಲ್ಲಿ ನೀರು ತುಂಬಿತುಳುಕುತ್ತಿವೆ. ಆದರೆ ಈ ಬಾವಿಯ ನೀರನ್ನ ಬಳಕೆ ಮಾಡಲು ಮಾತ್ರ ಜಿಲ್ಲಾಡಳಿತ ವಿಫಲವಾಗಿದೆ. ಇನ್ನೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗುತ್ತದೆ, ಅಂತಹ ಸಮಯದಲ್ಲಿ ಇಂಥಹ ಬಾವಿಯ ನೀರನ್ನ ಗ್ರಾಮಗಳಿಗೆ ಬಳಕೆ ಮಾಡಿದರೆ ಜನರ ಹಾಗೂ ಪ್ರಾಣಿಗಳ ದಾಹ ನಿವಾರಣೆಯಾಗುತ್ತದೆ. ಆದರೆ ಅದನ್ನ ಜಿಲ್ಲಾಢಳಿತ ಮಾಡುತ್ತಿಲ್ಲಾ, ಬದಲಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಹಣವನ್ನ ವೆಚ್ಚ ಮಾಡುತ್ತಿದೆ, ವಿನಃ ಪುರಾತನ ಬಾವಿಯ ನೀರನ್ನ ಬಳಕೆ ಮಾಡುವಲ್ಲಿ ವಿಫಲವಾಗಿದ್ದಾರೆ, ಇನ್ನೂ ಇಲ್ಲಿನ ಬಾವಿಯ ಬಗ್ಗೆ ಇಲ್ಲಿನ ಜನರು ಹೇಳಿದ್ದು ಹೀಗೆ.
ಮತ್ತಷ್ಟು ಓದಿ: ಕುಂಭಮೇಳಕ್ಕೆ ಹೋಗಲಾಗುತ್ತಿಲ್ಲವೆಂದು ಹಿತ್ತಲಲ್ಲೇ 40 ಅಡಿ ಬಾವಿ ತೋಡಿ ‘ಗಂಗಾ’ ಜಲ ಸೃಷ್ಟಿಸಿಕೊಂಡ ಶಿರಸಿ ಮಹಿಳೆ!
ಬೀದರ್ ಜಿಲ್ಲೆಯಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಸಿಹಿ ನೀರಿನ ಬಾವಿಗಳಳಿವೆ. ಇಲ್ಲಿನ ಬಾವಿಗಳಲ್ಲಿ ಇಂದಿಗೂ ಸಾಕಷ್ಟು ಪ್ರಮಾಣದ ಜಲವನ್ನು ತುಂಬಿಕೊಂಡಿವೆ. ಅದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ಕೆಲ ಬಾವಿಗಳ ನೀರು ಪಾಚಿಗಟ್ಟಿಕೊಂಡು ಹಾಳಾಗಿವೆ ಎಂದು ಮೊಹ್ಮದ್ ಎಂಬುವವರು ಹೇಳಿದ್ದಾರೆ. ನಗರದಲ್ಲಿನ ಪುರಾತನ ಕಾಲದ ಅನೇಕ ಬಾವಿಗಳನ್ನು ಅಭಿವೃದ್ಧಿ ನೆಪದಲ್ಲಿ ನಗರಸಭೆ ಮುಚ್ಚಿ ಕೈತೊಳೆದುಕೊಂಡಿದೆ. ಪ್ರತಿವರ್ಷವೂ ಕೂಡಾ ಬೆಸಿಗೆಕಾಲದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ, ಹೀಗಿದ್ದರೂ ಸಹ ಪುರಾತನ ಕಾಲದ ಜಲಮೂಲಗಳನ್ನು ಸಂರಕ್ಷಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡುವ ಗೋಜಿಗೆ ಹೋಗದೆ ಇರೋದು ವಿಪರ್ಯಾಸ. ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಪ್ರತಿ ಬೇಸಿಗೆಯಲ್ಲಿಯೂ ಕೂಡಾ ಜಿಲ್ಲೆಯ ಜನರು ನೀರಿನ ಸಮಸ್ಯೆಯಿಂದ ಪ್ರತಿ ವರ್ಷವೂ ಕೂಡಾ ಜನರು ಪರದಾಡುತ್ತಾರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಪ್ರತಿವೂ ಕೂಡಾ ಕೋಟ್ಯಾಂತರ ರೂಪಾಯಿ ಹಣವನ್ನ ಖುರ್ಚಮಾಡುತ್ತಲೇ ಬರುತ್ತಿದ್ದಾರೆಯೇ ಹೊರತು ಶಾಶ್ವತ ಕುಡಿಯು ನೀರಿನ ಸಮಸ್ಯೆಗೆ ಪರಿಹಾರ ಮಾತ್ರ ಇಂದಿಗೂ ಸಿಕ್ಕಿಲ್ಲ,
ಆದರೆ ಇದೇ ಹಣವನ್ನ ಪುರಾತನ ಭಾವಿಯ ಹೋಳನ್ನ ತೆಗೆಸಿ ಇದೇ ಬಾವಿಯಿಂದ ಗ್ರಾಮಕ್ಕೆ ಪೈಪ್ ಲೈನ್ ಮಾಡಿಸಿ ಇದೇ ಈ ಬಾವಿಯ ನೀರನ್ನು ಬಳಸಿಕೊಂಡರೆ ಎಂತಹ ಬೆಸಿಗೆಯಲ್ಲಿಯೂ ಕೂಡಾ ಕೆಲವು ಗ್ರಾಮದಲ್ಲಾಗುವ ನೀರಿನ ಹಾಹಾಕಾರ ಕಡಿಮೆಯಾಗುತ್ತದೆ. ಇಂತಹ ಬಾವಿಗಳನ್ನು ಈ ವರ್ಷದಿಂದ ಹೂಳು ತೆಗೆಸಿ ಆ ನೀರನ್ನು ಬಳಕೆ ಮಾಡುತ್ತೇವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಶತ ಶತಮಾನಗಳಿಂದ ಎಂದೂ ಕೂಡಾ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಆದರೇ ಇಂತಹ ಅಪರೂಪದಲ್ಲಿ ಅಪರೂಪವಾದ ಬಾವಿಗಳ ನೀರನನ್ನ ಬಳಸಿಕೊಳ್ಳುವುದರಲ್ಲಿ ನಮ್ಮ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗದಿರುವುದು ದುರಂತವೇ ಸರಿ ಎಂದು ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ