ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನ‌ ಕೊಂದಿದ್ದು ಬಿಜೆಪಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ; ಮಾಜಿ ಸಚಿವ ಶಿವರಾಜ್ ತಂಗಡಗಿ

ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನ‌ ಕೊಂದಿದ್ದು ಬಿಜೆಪಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ; ಮಾಜಿ ಸಚಿವ ಶಿವರಾಜ್ ತಂಗಡಗಿ
ಮಾಜಿ ಸಚಿವ ಶಿವರಾಜ್ ತಂಗಡಗಿ

ದೇಶದಲ್ಲಿ ಸರ್ಕಾರ ಸಿನಿಮಾ ಮಾಡೋ ಪರಸ್ಥಿತಿ ಬಂದಿದೆ. ದಿ ಕಾಶ್ಮೀರಿ ಫೈಲ್ ಸಿನಿಮಾ ಬಗ್ಗೆ ತಂಗಡಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಬಿಜೆಪಿಯವರು ಟಿಕೆಟ್ ಮಾರಾಟ ಮಾಡೋ ಕೆಲಸ ಮಾಡುತ್ತಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 25, 2022 | 11:30 AM

ಕೊಪ್ಪಳ: ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನ‌ ಕೊಂದಿದ್ದು ಬಿಜೆಪಿ (BJP) ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ (Controversial Statement) ನೀಡಿದ್ದಾರೆ. ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್​ಡಿಎಕ್ಸ್​ ಬಾಂಬ್ ಹೇಗೆ ಬಂತು, ನೀವು ಸರ್ಕಾರ ಮಾಡ್ತಿರೋ ಅಥವಾ ದನಕಾಯ್ತಿರೋ. ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಕೊಂದಿದ್ದು ನೀವೆ. ಚುನಾವಣೆ ಬಂದ ತಕ್ಷಣ ಇವರಿಗೆ ಪಾಕಿಸ್ತಾನ ಸೈನಿಕರು ನೆನಪಾಗುತ್ತಾರೆ. ದೇಶದಲ್ಲಿ ಸರ್ಕಾರ ಸಿನಿಮಾ ಮಾಡೋ ಪರಸ್ಥಿತಿ ಬಂದಿದೆ. ದಿ ಕಾಶ್ಮೀರಿ ಫೈಲ್ ಸಿನಿಮಾ ಬಗ್ಗೆ ತಂಗಡಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಬಿಜೆಪಿಯವರು ಟಿಕೆಟ್ ಮಾರಾಟ ಮಾಡೋ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಸಹಾಯ ಮಾಡಿದ್ದೇ ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ

ದಿ ಕಾಶ್ಮೀರ್ ಫೈಲ್ಸ್(The Kashmir Files)​ ಸಿನಿಮಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರಲು ಕಾಂಗ್ರೆಸ್​ ನಾಯಕರು ನಿರ್ಧಾರ ಮಾಡಿದ್ದಾರೆ ಮತ್ತು ಈ ನಿರ್ಧಾರವನ್ನು ಬಿಜೆಪಿ(BJP) ತಂತ್ರಕ್ಕೆ ಪ್ರತಿತಂತ್ರವಾಗಿ ಉಪಯೋಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿನಿಮಾ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ವಿರುದ್ಧ ಪಿತೂರಿ ಮಾಡುತ್ತಿದೆ. ಕಾಂಗ್ರೆಸ್(Congress) ಪ್ರತಿಕ್ರಿಯೆಯಿಂದ ವಿವಾದ ದೊಡ್ಡದು ಮಾಡುವ ಹುನ್ನಾರ ಇದೆ. ಕೈ ನಾಯಕರು ಪ್ರತಿಕ್ರಿಯೆ ನೀಡಿದರೆ ಬಿಜೆಪಿ ತಂತ್ರಕ್ಕೆ ಸ್ಪಂದಿಸಿದಂತಾಗುತ್ತದೆ. ಕೈ ನಾಯಕರ ಮಾತುಗಳನ್ನು ಮುಂದಿಟ್ಟುಕೊಂಡು ತಿರುಚಿ ವಿವಾದ ಸೃಷ್ಟಿಸುವ ಆತಂಕ ಇದೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ

ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ತಂಡ ಭೇಟಿ ಆಗಿತ್ತು. ಈಗ ಗೃಹ ಸಚಿವ ಅಮಿತ್​ ಶಾ ಅವರನ್ನು ಕೂಡ ಭೇಟಿ ಮಾಡಲಾಗಿದೆ. ಈ ವೇಳೆ ಚಿತ್ರತಂಡದವರ ಜೊತೆ ಅನೇಕ ವಿಚಾರಗಳನ್ನು ಅಮಿತ್​ ಶಾ ಚರ್ಚೆ ಮಾಡಿದರು ಎನ್ನಲಾಗಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಕಥೆಯನ್ನು ತೋರಿಸಿದ್ದಾರೆ. ಅವರಿಗೆ ಅನೇಕರಿಂದ ಮೆಚ್ಚುಗೆ ಕೇಳಿಬಂದಿದೆ. ರಾಜಕೀಯ ಕ್ಷೇತ್ರದ ಹಲವು ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ಗೆ ಕಠಿಣ ಪ್ರಶ್ನೆ

Follow us on

Related Stories

Most Read Stories

Click on your DTH Provider to Add TV9 Kannada