AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕಾರಿಣಿ ಸಭೆಯಲ್ಲಿ 3 ನಿರ್ಣಯ ಕೈಗೊಂಡ ಬಿಜೆಪಿ: ಕೇಂದ್ರ ಸಚಿವ ಗಡ್ಕರಿ ಹೇಳಿದ್ದಿಷ್ಟು

ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ 3 ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೂರು ನಿರ್ಣಯಗಳ ಬಗ್ಗೆ ವಿವರಿಸಿದರು. ಇನ್ನು ಸಭೆಯಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಕೂಡ ಭಾಗವಹಿಸಿದ್ದರು.

ಕಾರ್ಯಕಾರಿಣಿ ಸಭೆಯಲ್ಲಿ 3 ನಿರ್ಣಯ ಕೈಗೊಂಡ ಬಿಜೆಪಿ: ಕೇಂದ್ರ ಸಚಿವ ಗಡ್ಕರಿ ಹೇಳಿದ್ದಿಷ್ಟು
ಕಾರ್ಯಕಾರಿಣಿ ಸಭೆಯಲ್ಲಿ 3 ನಿರ್ಣಯ ಕೈಗೊಂಡ ಬಿಜೆಪಿ: ಕೇಂದ್ರ ಸಚಿವ ಗಡ್ಕರಿ ಹೇಳಿದ್ದಿಷ್ಟು
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 04, 2024 | 8:10 PM

Share

ಬೆಂಗಳೂರು, ಜುಲೈ 04: ನಗರದ ಅರಮನೆ ಮೈದಾನದಲ್ಲಿ ಇಂದು ರಾಜ್ಯ ಬಿಜೆಪಿ (BJP) ಕಾರ್ಯಕಾರಿ ವಿಶೇಷ ಸಭೆ ಮಾಡಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಸಭೆಯಲ್ಲಿ 3 ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಭೆ ಬಳಿಕ ಸಂಸದ ಕಾಗೇರಿ, ಚಲವಾದಿ ನಾರಾಯಣ ಸ್ವಾಮಿ, ಬೈರತಿ ಬಸವರಾಜು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕಾರ್ಯಕಾರಿಣಿ ಸಭೆಯಲ್ಲಿ 3 ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾಗೇರಿ ತಿಳಿಸಿದರು.

3 ನಿರ್ಣಯಗಳು ಹೀಗಿವೆ

ಹ್ಯಾಟ್ರಿಕ್​ ಗೆಲುವು ಮತ್ತು ಹ್ಯಾಟ್ರಿಲ್ ಪ್ರಧಾನಿ ಆಗಿದ್ದಕ್ಕೆ ಮೋದಿಯವರಿಗೆ ರಾಜ್ಯ ಬಿಜೆಪಿಯಿಂದ ಅಭಿನಂದನೆ ಸಲ್ಲಿಸಿ ಮೊದಲ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಹಗರಣಗಳ ಸರ್ಕಾರ, ಅಭಿವೃದ್ಧಿ ಶೂನ್ಯ ಸರ್ಕಾರ, ಈ ಸರ್ಕಾರ ತೊಲಗಿಸೋಣ ಅಂತ ಎರಡನೇ ನಿರ್ಣಯ ಕೈಗೊಳ್ಳಲಾಗಿದೆ. ಹಿಂದೂ, ಹಿಂದುತ್ವ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿಯವರ ಅಪ್ರಬುದ್ಧ ನಡೆ ಖಂಡಿಸಿ ಮೂರನೇ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕಾಂಗ್ರೆಸ್​ ವಿರುದ್ಧ ನಿತಿನ್ ಗಡ್ಕರಿ ವಾಗ್ದಾಳಿ 

ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆ ಆಗಿಲ್ಲ. ಕಾಂಗ್ರೆಸ್​ನವರ ಬಡತನ ನಿರ್ಮೂಲನೆ ಆಗಿದೆ ಅಷ್ಟೇ. ಯುವಕರು ಇತಿಹಾಸ ಓದಬೇಕು, ಇತಿಹಾಸ ಮರೆಯಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಕ್ತವತ್ಸಲ ವರದಿಯನ್ನು ತಿರಸ್ಕರಿಸಲು ತೀರ್ಮಾನಿಸಿದ ಸಿದ್ದರಾಮಯ್ಯ ಸರ್ಕಾರ, ಏನಿದು ಭಕ್ತವತ್ಸಲ ?

ಪ್ರಜಾಪ್ರಭುತ್ವ ವ್ಯವಸ್ಥೆ ಹತ್ಯೆಮಾಡಿದ್ದು ಯಾರೆಂದು ಹೇಳಬೇಕು. ಭಾರತೀಯ ಜನತಾ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿಲ್ಲ. 75 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್​ ಪಕ್ಷ ಇಂದಿಗೂ ಗರೀಬಿ ಹಠಾವೋ ಘೋಷಣೆ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಟ್ವೀಟ್​ 

ನೆಹರು ಪ್ರದಾನಿ ಆದಾಗ ಕಮ್ಯುನಿಸ್ಟ್ ವಿಚಾರದಲ್ಲಿ ನಡೆಯಿತ್ತಿದ್ದರು. ಚೈನಾದ ಕಮ್ಯುನಿಸ್ಟ್ ಪಾರ್ಟಿ ನನಗೆ ಆಹ್ವಾನ ನೀಡಿತ್ತು. ಅಲ್ಲಿನ ಪ್ರೆಸಿಡೆಂಟ್​ಗೆ ಹೇಳಿದೆ, ಕೆಂಪು ಬಾವುಟ ಬಿಟ್ಟು ಎಲ್ಲ ಬದಲಾಗಿದೆ ಎಂದು. ಮಾರ್ಕ್ಸ್ ಲೆನಿನ್ ಎಲ್ಲರನ್ನೂ ಮರೆತಿದ್ದೀರಿ ಎಂದಿದ್ದೆ. ಕ್ರಮೇಣ ಕಮ್ಯುನಿಸ್ಟ್ ಪಾರ್ಟಿಯನ್ನು ಜನ ದೂರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಜನಪರ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ರಾಮನಗರ, ಕನಕಪುರವನ್ನೂ ಒಳಗೊಂಡ ಗ್ರೇಟರ್ ಬೆಂಗಳೂರು ಸ್ಥಾಪನೆಗೆ ಸರ್ಕಾರ ಪ್ಲ್ಯಾನ್

ವಿಶ್ವದಲ್ಲಿ ಭಾರತ ಹೆಸರು ಮಾಡುತ್ತಿದೆ. ಕಾಂಗ್ರೆಸ್ ಮಾಡಲಾಗದ ಸಾಧನೆಯನ್ನ 10 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದೆ. ಮೋದಿ ಸರ್ಕಾರ ತೆಗೆದುಕೊಂಡ ನಿರ್ಣಯದ ಪರಿಣಾಮ ಎಲ್ಲ ಕ್ಷೇತ್ರದಲ್ಲೂ ಕಾಣುತ್ತಿದೆ. ಆದಾಯ ದ್ವಿಗುಣವಾಗಿದೆ, ಉದ್ಯೋಗ ಸೃಷ್ಟಿಯಾಗಿದೆ. ಆಟೋಮೋಟಿವ್ ಉದ್ಯಮ ಹೆಚ್ಚಿನ ಆದಾಯ ನೀಡುತ್ತಿದೆ. 7ನೇ ಸ್ಥಾನದಲ್ಲಿ ಆಟೋಮೋಟಿವ್ ಉದ್ಯಮವಿತ್ತು. ಈಗ ನಾವು ಜಪಾನ್ ಮೀರಿಸಿ 3ನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ 5 ವರ್ಷದಲ್ಲಿ ಮೊದಲ ಸ್ಥಾನಕ್ಕೆ ಬರುತ್ತೇವೆ ಎಂದಿದ್ದಾರೆ.

ಮರ್ಸಿಡಿಸ್ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಇಲ್ಲಿ ಆಗಲಿದೆ. ಹೈಡ್ರೋಜನ್, ಎಥೆನಾಲ್​ನಲ್ಲಿ ಓಡುವ ಗಾಡಿ ಇದೆ. ಈಗ ಇಡಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಓಡಲಿದೆ. ಡೀಸೆಲ್ ಬಸ್​ಗಿಂತ 30% ಕಡಿಮೆ ಟಿಕೆಟ್ ದರದ ಎಲೆಕ್ಟ್ರಿಕ್ ಬಸ್ ಸಿದ್ದವಾಗುತ್ತಿದೆ. ಭಾರತದ ಸಾಫ್ಟ್ ವೇರ್ ಹುಡುಗರಲ್ಲಿ ಮೆಥಮೆಟಿಕ್ ಜೀನ್ ಇದೆಯಾ ಎಂದು ಜಪಾನ್ ಪ್ರಧಾನಿ ಕೇಳುತ್ತಿದ್ದರು. ಅಷ್ಟು ಪ್ರಭಾವಿಯಾಗಿದೆ ನಮ್ಮ ಭಾರತ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.