Air India: ಬೆಂಗಳೂರಿಂದ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನದ ಊಟದಲ್ಲಿ ಬ್ಲೇಡ್​ ಪತ್ತೆ: ದಂಗಾದ ಪ್ರಯಾಣಿಕ

ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಲೋಹದ ತುಂಡು ಒಂದು ಕಾಣಿಸಿದ್ದು, ಅದು ಬ್ಲೇಡ್‌ನಂತೆ ಕಾಣುತ್ತಿತ್ತು. ಕೆಲವು ಸೆಕೆಂಡ್​ ಅದನ್ನು ಜಗಿದ ನಂತರವೇ ನನಗೆ ಅದರ ಅನುಭವವಾಯಿತು. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪ್ರಯಾಣಿಕ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿದ ಏರ್ ಇಂಡಿಯಾ ಊಟದಲ್ಲಿ ಬ್ಲೇಡ್​ ಪತ್ತೆ ಆಗಿರುವುದನ್ನು ದೃಢಪಡಿಸಿದೆ.

Air India: ಬೆಂಗಳೂರಿಂದ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನದ ಊಟದಲ್ಲಿ ಬ್ಲೇಡ್​ ಪತ್ತೆ: ದಂಗಾದ ಪ್ರಯಾಣಿಕ
ಬೆಂಗಳೂರಿಂದ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನದ ಊಟದಲ್ಲಿ ಬ್ಲೇಡ್​ ಪತ್ತೆ: ದಂಗಾದ ಪ್ರಯಾಣಿಕ
Edited By:

Updated on: Jun 17, 2024 | 4:57 PM

ದೆಹಲಿ, ಜೂನ್​ 17: ಏರ್​​ ಇಂಡಿಯಾ ವಿಮಾನದಲ್ಲಿ (Air India) ನೀಡಲಾಗುವ ಊಟದಲ್ಲಿ ಬ್ಲೇಡ್ (blade)​ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಊಟದಲ್ಲಿ ಪತ್ತೆಯಾದ ಬ್ಲೇಡ್​ ಕಂಡು ಪ್ರಯಾಣಿಕರು ಶಾಕ್​ ಆಗಿದ್ದಾರೆ. ಜೂನ್​​ 9ರಂದು ಬೆಂಗಳೂರಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ಸದ್ಯ ಏರ್‌ಇಂಡಿಯಾ ವಿಮಾನ ಸಂಸ್ಥೆಗೆ ಪ್ರಯಾಣಿಕ ದೂರು ನೀಡಿದ್ದು, ಏರ್‌ ಇಂಡಿಯಾ ವಿಮಾನ‌ಯಾನ ಸಂಸ್ಥೆಯಿಂದ ತನಿಖೆ ನಡೆದಿದೆ.

ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಲೋಹದ ತುಂಡು ಒಂದು ಕಾಣಿಸಿದ್ದು, ಅದು ಬ್ಲೇಡ್‌ನಂತೆ ಕಾಣುತ್ತಿತ್ತು. ಕೆಲವು ಸೆಕೆಂಡ್​ ಅದನ್ನು ಜಗಿದ ನಂತರವೇ ನನಗೆ ಅದರ ಅನುಭವವಾಯಿತು. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಒಂದು ವೇಳೆ ಮಗುವಿಗೆ ತಿನ್ನಿಸುವ ಆಹಾರದಲ್ಲಿ ಈ ರೀತಯಾಗಿ ಲೋಹದ ತುಂಡು ಅಥವಾ ಬ್ಲೇಡ್ ಇದ್ದರೆ ಏನು ಮಾಡುವುದು ಎಂದು ಪ್ರಯಾಣಿಕರು ಫೋಟೋ ಸಹಿತ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಘಟನೆ ಬಗ್ಗೆ ತನಿಖೆ ನಡೆಸಿದ ಏರ್ ಇಂಡಿಯಾ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರಿಗೆ ನೀಡಲಾದ ಊಟದಲ್ಲಿ ಬ್ಲೇಡ್​ ಪತ್ತೆ ಆಗಿರುವುದನ್ನು ದೃಢಪಡಿಸಿದೆ.

ಇದನ್ನೂ ಓದಿ: ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು

ತನಿಖೆ ಮಾಡಲಾಗಿದ್ದು, ಇದು ನಮ್ಮ ಅಡುಗೆದಾರರ ಸೌಲಭ್ಯಗಳಲ್ಲಿ ಬಳಸಲಾದ ತರಕಾರಿ ಸಂಸ್ಕರಣಾ ಯಂತ್ರದಿಂದ ಬಂದಿದೆ ಎಂದು ತಿಳಿದುಬಂದಿದೆ. ನಾವು ಯಾವುದೇ ಗಟ್ಟಿಯಾದ ತರಕಾರಿಯನ್ನು ಕತ್ತರಿಸಿದ ನಂತರ ಎಲ್ಲವನ್ನು ಪರೀಕ್ಷಿಸಲಾಗುವುದು ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us