Bus Priority Lane: ಆದ್ಯತಾ ಪಥದಲ್ಲಿ ಚಲಿಸದೆ ಟ್ರಾಫಿಕ್ ಸಮಸ್ಯೆಗೆ ಪುಷ್ಟಿ ನೀಡುತ್ತಿರುವ BMTC ಬಸ್ ಸಮಸ್ಯೆಗೆ ಪರಿಹಾರವೇನು?
ನಗರದ BMTC ಬಸ್ ಒಂದು ಬಸ್ಗಳ ಆದ್ಯತಾ ಪಥ (Bus Priority Lane-BPL) ಮೀರಿ ಸಾಮಾನ್ಯ (Non-BPL) ಹಾದಿಯಲ್ಲಿ ಚಲಿಸಿರುವ ವಿಚಾರವನ್ನು ಬೆಂಗಳೂರಿನ ನಾಗರಿಕರೊಬ್ಬರು ಗಮನಿಸಿ, BMTCಗೆ ಟ್ವೀಟ್ ಮೂಲಕ ತಿಳಿಸಿರುವ ಘಟನೆ ನಡೆದಿದೆ.
ಬೆಂಗಳೂರು: ನಗರದ BMTC ಬಸ್ ಒಂದು ಬಸ್ಗಳ ಆದ್ಯತಾ ಪಥ (Bus Priority Lane-BPL) ಮೀರಿ ಸಾಮಾನ್ಯ (Non-BPL) ಹಾದಿಯಲ್ಲಿ ಚಲಿಸಿರುವ ವಿಚಾರವನ್ನು ಬೆಂಗಳೂರಿನ ನಾಗರಿಕರೊಬ್ಬರು ಗಮನಿಸಿ, BMTCಗೆ ಟ್ವೀಟ್ ಮೂಲಕ ತಿಳಿಸಿರುವ ಘಟನೆ ನಿನ್ನೆ (ಫೆ.18) ನಡೆದಿದೆ. ಸಾರ್ವಜನಿಕರ ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (BMTC) ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ನಿನ್ನೆ, ಶ್ರೀಕಾಂತ್ ಎಂ. ಎಂಬವರು ಯಾವುದೇ ಬಸ್ ಸಂಚಾರವಿರದೆ ಖಾಲಿಯಾಗಿದ್ದ ಬಸ್ ಆದ್ಯತಾ ಪಥವನ್ನು ಗಮನಿಸಿದ್ದಾರೆ. ಜತೆಗೆ, ಬಿಎಂಟಿಸಿ ಬಸ್ ಒಂದು ಸಾಮಾನ್ಯ (Non-BPL) ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡಿದ್ದಾರೆ. ಮಾರತ್ಹ ಳ್ಳಿ ಸೇತುವೆಯ ಬಳಿ, ಸಂಜೆ 4.45ರ ಸುಮಾರಿಗೆ ಈ ಘಟನೆಗೆ ಶ್ರೀಕಾಂತ್ ಸಾಕ್ಷಿಯಾಗಿದ್ದಾರೆ. ಇದರಿಂದ ಬಸ್ ಆದ್ಯತಾ ಪಥವು ಖಾಲಿಯಾಗಿದ್ದು, Non-BPL ಮಾರ್ಗವು ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ.
ಬಿಎಂಟಿಸಿ ಸಂಸ್ಥೆ ಮಾತ್ರ ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಸಾಕಾ ಅಥವಾ ಟ್ರಾಫಿಕ್ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಮುಂದಾಗುತ್ತಾರಾ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಬಸ್ ಆದ್ಯತಾ ಪಥದಲ್ಲಿ ಇತರ ವಾಹನಗಳು ಸಂಚರಿಸಿದರೆ ದಂಡ ವಿಧಿಸಿದಂತೆ, Non-BPL ಮಾರ್ಗದಲ್ಲಿ ಬಸ್ ಸಂಚರಿಸಿದರೆ ದಂಡ ಇಲ್ಲವೇ? ಎಂದೂ ಕೇಳುತ್ತಿದ್ದಾರೆ.
ಕೊವಿಡ್, ಲಾಕ್ಡೌನ್ ಹಾಗೂ ವರ್ಕ್ ಫ್ರಮ್ ಹೋಮ್ ಕಾರಣದಿಂದ ಪ್ರಯಾಣಿಕರ ಸಂಖ್ಯೆಯ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಹೀಗಾಗಿ ಬಸ್ಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಬಸ್ ಆದ್ಯತಾ ಪಥದಲ್ಲಿ ಸಂಚರಿಸುವ ಬಸ್ಗಳ ಸಂಖ್ಯೆ ಕಡಿಮೆಯಾಗಿತ್ತು. ಹಾಗೆಂದು ಬಸ್ಗಳು ತಮಗೆ ಮೀಸಲಿರುವ ಆದ್ಯತಾ ಪಥಗಳ ಬದಲಾಗಿ, ಇತರ ಸಾಮಾನ್ಯ ಮಾರ್ಗದಲ್ಲಿ ಸಂಚರಿಸುವುದು ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಬಿಎಂಟಿಸಿ ಮಾಡಿದ್ದ ಟ್ವೀಟ್ಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದ ಶ್ರೀಕಾಂತ್ ಎಂ., ಬಸ್ಗಳು ಆದ್ಯತಾ ಪಥ ಮೀರಿ ಸಂಚರಿಸುತ್ತಿರುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಇದಕ್ಕೆ ಬಿಎಂಟಿಸಿ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದೆ.
Dear @BMTC_BENGALURU What is your opinion about this pic.twitter.com/DVGoaTuV6i
— Sreekanth Madam • ಶ್ರೀಕಾಂತ್ ಮ್ಯಾಡಂ (@Sreekanth_J_M) February 18, 2021
18-Feb-2021 @ 16:45Marathahalli bridge
— Sreekanth Madam • ಶ್ರೀಕಾಂತ್ ಮ್ಯಾಡಂ (@Sreekanth_J_M) February 18, 2021
ಇದನ್ನೂ ಓದಿ: 365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ
Published On - 8:44 pm, Fri, 19 February 21