ಅಣ್ಣನೊಂದಿಗೆ ಕೆರೆ ಬಳಿ ಆಟವಾಡಲು ಹೋದ ಬಾಲಕ ವಾಪಸ್ ಬರಲೇ ಇಲ್ಲ..
ಆಟವಾಡಲು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದ ಸಣ್ಣ ಕೆರೆಯಲ್ಲಿ ನಡೆದಿದೆ. 6 ವರ್ಷದ ಬಾಲಕ ಹನುಮಂತ ಬಾದಾಮಿ ಸಣ್ಣ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಹಾವೇರಿ: ಆಟವಾಡಲು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದ ಸಣ್ಣ ಕೆರೆಯಲ್ಲಿ ನಡೆದಿದೆ. 6 ವರ್ಷದ ಬಾಲಕ ಹನುಮಂತ ಬಾದಾಮಿ ಸಣ್ಣ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಹನುಮಂತ ತನ್ನ ಅಣ್ಣನ ಜೊತೆ ಕೆರೆ ಬಳಿ ಆಟವಾಡಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಾಲಕನ ಮೃತದೇಹವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹೊಳೆನರಸೀಪುರ ಪೆದ್ದನಹಳ್ಳಿ ಬಳಿ ರೈಲ್ವೆ ಹಳಿಗೆ ತಲೆಕೊಟ್ಟು ಯುವಕನ ಆತ್ಮಹತ್ಯೆ