ಬದುಕಿಗೆ ದುಬಾರಿ ಬರೆ: ಶುಗರ್, ಬಿಪಿ, ಕೆಮ್ಮ, ಜ್ವರ ಸೇರಿದಂತೆ ಐನೂರಕ್ಕೂ ಹೆಚ್ಚು ಔಷಧಿಗಳ ದರ ಏರಿಕೆ

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಬೆನ್ನಲ್ಲೇ ಒಂದೊಂದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಖಾಸಗಿ ಬಸ್ ದರ ಏರಿಕೆ ಆಯ್ತು ಈಗ, ಈಗ ಔಷಧಗಳ ಬೆಲೆ ಏರಿಕೆ ಶುರುವಾಗಿದೆ. ಹೌದು... ಕ್ರೂಡ್ ಆಯಿಲ್, ಪೆಟ್ರೋಲ್, ಡಿಸೆಲ್, ಎಲ್ ಪಿಜಿ ಗ್ಯಾಸ್ ಅಭಾವದ ನೇರಾ ಎಫೆಕ್ಟ್ ಔಷಧ ವಲಯಕ್ಕೂ ತಟ್ಟಿದ್ದು, ಬಿಪಿ ಶುಗರ್, ದಿನಬಳಕೆಯ ಔಷಧ ಬೆಲೆಯು ಈಗ ಏರಿಕೆಯಾಗಿದೆ.

ಬದುಕಿಗೆ ದುಬಾರಿ ಬರೆ: ಶುಗರ್, ಬಿಪಿ, ಕೆಮ್ಮ, ಜ್ವರ ಸೇರಿದಂತೆ ಐನೂರಕ್ಕೂ ಹೆಚ್ಚು ಔಷಧಿಗಳ ದರ ಏರಿಕೆ
Medicine
Edited By:

Updated on: May 17, 2026 | 9:51 PM

ಬೆಂಗಳೂರು, (ಮೇ 17): ಮಧ್ಯಪ್ರಾಚ್ಯ ಯುದ್ಧದ ಕಿಚ್ಚು ಮತ್ತು ಪೆಟೋಲ್, ಡೀಸೆಲ್ ದರ ಏರಿಕೆ (petrol and diesel price Hik) ಈಗ ನಿಮ್ಮ ಮನೆಯ ಔಷಧದ (machines) ಡಬ್ಬಿಗೂ ತಟ್ಟಿದ್ದು, ಅಗತ್ಯ ಮಾತ್ರೆಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹೌದು.. ಔಷಧಗಳ ಮಾತ್ರೆಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಲೈ ಚೈನ್ ಮೇಲೆ ಬಿದ್ದ ಕಾರಣ ಔಷಧಗಳ ದರ ಸರಾಸರಿ 15 ರಷ್ಟು ಔಷಧ ದರಗಳು ಹೆಚ್ಚಳವಾಗಿದೆ. ಬಿಪಿ, ಸಕ್ಕರೆ ಕಾಯಿಲೆಯಿಂದ ಹಿಡಿದು ಸಾಮಾನ್ಯ ಜ್ವರದ ಮಾತ್ರೆಗಳ ಬೆಲೆ ಹೆಚ್ಚಳ ಬಡವರ ಬದುಕನ್ನು ಇನ್ನಷ್ಟು ಹೈರಾಣಾಗಿಸಿದೆ.

ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್‌ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಬ್ಯಾಚ್ ಮಾದರಿಯಲ್ಲಿ ಒಂದೊಂದೇ ಮಾತ್ರೆಗಳ ಬೆಲೆ ಏರಿಕೆಯತ್ತ ಸಾಗಿದೆ.
Fuel, Gold And Medicine Price Hike: ಐನೂರಕ್ಕೂ ಹೆಚ್ಚು ಔಷಧಗಳ ದರ ಹೆಚ್ಚಳ ಬದುಕಿಗೆ ದುಬಾರಿ ಬರೆ
ಯುದ್ಧದ ಎಫೆಕ್ಟ್ ಕಾರಣದಿಂದ ಔಷಧಗಳ ಬೆಲೆ 15 % ರಷ್ಟು ಏರಿಕೆ ಕಾಣುತ್ತಿದೆ. ಕೇವಲ ಔಷಧಗಳ ಬೆಲೆ ಮಾತ್ರವಲ್ಲ ಕಾಸ್ಮೆಟಿಕ್ , ಬೇಬಿ ಪ್ರಾಡಕ್ಟ್ ಗಳ ಬೆಲೆಯೂ ಏರಿಕೆ ಕಾಣುತ್ತಿದೆ. ಹಳೆಯ ಬೆಲೆಯ ಔಷಧ ಹಾಗೂ ಕಾಸ್ಮೆಟಿಕ್ ಸ್ಟಾಕ್ ಖಾಲಿಯಾಗಿ ಹೊಸ ಬ್ಯಾಚ್ ಮಾತ್ರೆಗಳ ಜೊತೆ ಹೊಸ ಏರಿಕೆಯ ದರ ಬರ್ತಿದೆ. ಯುದ್ಧ ಮುಗಿಯುವವರೆಗೂ ಬೆಲೆ ಏರಿಕೆ ಇದ್ದೆ ಇರುತ್ತೆ ಅಂತಿದ್ದಾರೆ ಫಾರ್ಮಾ ಮೆಡಿಕಲ್ ಮಾಲೀಕರು.

ಒಟ್ನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ನಡುವೆ ಈಗ ಜನ ಸಾಮನ್ಯರಿಗೆ ಮಾತ್ರೆ ಔಷಧಗಳ ಬೆಲೆಯೂ ಏರಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಯಾಗಲಿದೆಯೋ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us