AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ ಮತ್ತೆ ನೀರು ಬಿಡಲು ಸರ್ಕಾರಕ್ಕೆ ಕಾನೂನು ತಜ್ಞರ ಸಲಹೆ

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್​​ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ತಮಿಳುನಾಡಿಗೆ ಮತ್ತೆ ನೀರು ಬಿಡಲು ಸರ್ಕಾರಕ್ಕೆ ಕಾನೂನು ತಜ್ಞರ ಸಲಹೆ
ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ|

Updated on:Sep 23, 2023 | 10:11 AM

Share

ಬೆಂಗಳೂರು ಸೆ.23: ತಮಿಳುನಾಡಿಗೆ (Tamilnadu) ಮತ್ತೆ ಕಾವೇರಿ ನೀರು (Cauvery Water Dispute) ಹರಿಸುವಂತೆ ಸುಪ್ರೀಂಕೋರ್ಟ್​​ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸೆ.22 ರಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಕಾನೂನು ತಜ್ಞರು ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್​​ ನೀರು ಬಿಡಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾನೂನು ತಜ್ಞರು ಸಭೆಯಲ್ಲಿ ಎಲ್ಲ ಕಾನೂನು ವಿವರ ನೀಡಿದ್ದಾರೆ. 5000 ಕ್ಯೂಸೆಕ್‌ ಬಿಡಲು ಹೇಳಿದ್ದಾರೆ, 7000 ಕ್ಯೂಸೆಕ್‌ ಒಳಹರಿವು ಇದೆ. ಸಾಮಾನ್ಯವಾಗಿ 2500ರಿಂದ 3000 ಕ್ಯೂಸೆಕ್‌ ನೀರು ಹರಿ ಬಿಡುತ್ತಿದ್ದೇವೆ ಎಂದರು.

ನಾವು ಇದುವರೆಗೆ ಎಲ್ಲ ರೈತರ ಹಿತವನ್ನೂ ಕಾಪಾಡಿದ್ದೇವೆ. ಕುಡಿಯುವ ನೀರಿನ ವಿಚಾರದಲ್ಲೂ ನಾವು ರಕ್ಷಣೆ ಮಾಡುತ್ತೇವೆ. ರಾಜಕಾರಣ ಮಾಡುವವರು ಮಾಡುತ್ತಲೇ ಇರಲಿ. ಮೇಕೆದಾಟು ವಿಚಾರವೂ ಕೋರ್ಟ್‌ ಪ್ರೊಸಿಡಿಂಗ್ಸ್‌ನಲ್ಲಿ ಪ್ರಸ್ತಾಪ ಆಗಿದೆ. 177 ಟಿಎಂಸಿ ನೀರು ಕೊಟ್ಟೇ ಕೊಡುತ್ತಾರೆ.  ಮೇಕೆದಾಟು ಡ್ಯಾಂ ಕಟ್ಟಲಿ ಅಂತಾ ನ್ಯಾಯಮೂರ್ತಿಗಳು ಹೇಳಿದ್ದಾರೆ. ಮೇಕೆದಾಟು ಡ್ಯಾಂಗೆ ಸಂಬಂಧಿಸಿದಂತೆ ಮುಂದಿನ ಪ್ರಸ್ತಾವನೆ ಸಲ್ಲಿಸುತ್ತೇವೆ. ಡಿಪಿಆರ್ ಹಾಗೂ ಪರಿಸರ ಕ್ಲಿಯರೆನ್ಸ್‌ಗೆ ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದರು.

ಇದನ್ನೂ ಓದಿ: 195 ತಾಲೂಕುಗಳ ಬರ ಘೋಷಣೆಗೆ ಸಚಿವ ಸಂಪುಟ ಒಪ್ಪಿಗೆ; ಸಚಿವ ಹೆಚ್‌ಕೆ ಪಾಟೀಲ್‌ ಮಾಹಿತಿ

ಸುಪ್ರೀಂಕೋರ್ಟ್ ನಿತ್ಯ 5 ಸಾವಿರ ಕ್ಯೂಸೆಕ್‌ನಂತೆ ಕಾವೇರಿ ನೀರು ಹರಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರೂ ಪ್ರಸ್ತುತ ಬಿಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ, ಇದಕ್ಕೂ ಮೊದಲು ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆದು ಮಾತುಕತೆ ನಡೆಸಬೇಕು.ನ್ಯಾಯಾಧೀರು ಪಾತ್ರವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಮಳೆ ಅಭಾವದಿಂದ ಕಾವೇರಿಯಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಹೀಗಿದ್ದರೂ ತಮಿಳುನಾಡು ಪರ ವಕೀಲರು ಸುಪ್ರೀಂಕೋರ್ಟಿನಲ್ಲಿ ನಿತ್ಯ 7,200 ಕ್ಯೂಸೆಕ್ ನೀರು ಬಿಡುವಂತೆ ಮನವಿ ಮಾಡಿದ್ದರು. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿರುವ 5,000 ಕ್ಯೂಸೆಕ್ ಕೂಡ ಬಿಡಲಾಗುವುದಿಲ್ಲ ಎಂದು ಮನವರಿಕೆ ಮಾಡಿದ್ದೆವು. ಆದರೆ ನ್ಯಾಯಾಲಯ ಇಬ್ಬರ ಮನವಿಯನ್ನೂ ತಿರಸ್ಕರಿಸಿ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶಿಸಿದೆ. ಪ್ರಸ್ತುತ ನಾವು ನೀರು ಬಿಡದಿದ್ದರೂ 3,000ದಿಂದ 3,500 ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಇದನ್ನು ಸೆ.26 ರವರೆಗೆ ಮುಂದುವರೆಸುತ್ತೇವೆ. ಬಳಿಕ ರಾಜ್ಯದ ಪರ, ರೈತರ ಹಿತಕಾಯಲು ಯಾವುದೆಲ್ಲಾ ನಡೆ ಅನುಸರಿಸಬಹುದು ಎಂಬುವುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ.

ಬಗ್ಗೆ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ನೀರು ಬಿಟ್ಟು ರೈತರ ಹಿತ ಹೇಗೆ ಕಾಯುತ್ತೀರಿ ಎಂಬ ಪ್ರಶ್ನೆಗೆ, ನಾವು ಎಲ್ಲಾ ರೀತಿಯಲ್ಲೂ ರೈತರ ಹಿತ ಕಾಯಲು ಬದ್ಧವಾಗಿದ್ದೇವೆ. ಕುಡಿಯುವ ನೀರು ಹಾಗೂ ರೈತರ ಅಗತ್ಯಗಳಿಗೆ ನೀರು ಪೂರೈಸುತ್ತೇವೆ. ಪ್ರಸ್ತುತ 7 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವು ಇದ್ದು, ನಾವು 3,500 ಕ್ಯೂಸೆಕ್ ಮಾತ್ರ ನೀರು ಬಿಡುತ್ತೇವೆ. ಈ ತಿಂಗಳು ತಮಿಳುನಾಡಿಗೆ ಬಿಡಬೇಕಾಗಿದ್ದ ಒಟ್ಟು ಪ್ರಮಾಣದಲ್ಲಿ ಶೇ. 34 ರಷ್ಟು ಮಾತ್ರ ನಾವು ಬಿಟ್ಟಿದ್ದೇವೆ. ಹೀಗಾಗಿ ನ್ಯಾಯಾಲಯದ ಆದೇಶ ಪಾಲಿಸುತ್ತಲೇ ರೈತರ ಹಿತ ಕಾಯುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 am, Sat, 23 September 23