AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ರೈತರು ಬೋನಿನಲ್ಲಿ ಕೂಡಿಹಾಕಿದ್ದ ಅಧಿಕಾರಿಗಳ ಮೇಲೂ ಬಿತ್ತು ಕೇಸ್!

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅರಣ್ಯದಂಚಿನ ಗ್ರಾಮದಲ್ಲಿ ಹುಲಿ ಸೆರೆ ಹಿಡಿಯದ ಹಿನ್ನಲೆ ಅರಣ್ಯಾಧಿಕಾರಿಗಳನ್ನೇ ಬೋನಿನಲ್ಲಿ ಕೂಡಿಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿ ದೂರುಗಳು ದಾಖಲಾಗಿತ್ತಿವೆ. ಇದೀಗ ರೈತ ಮಹಿಳೆಯೊಬ್ಬರು ಜಮೀನಿಗೆ ನುಗ್ಗಿ ಹಲ್ಲೆ ಆರೋಪ ಹಿನ್ನಲೆ ಬರೋಬ್ಬರಿ 15 ಮಂದಿ ಅರಣ್ಯ ಸಿಬ್ಬಂದಿ ಮೇಲೆ ಕೇಸ್ ಬಿದ್ದಿದೆ.

ಚಾಮರಾಜನಗರ: ರೈತರು ಬೋನಿನಲ್ಲಿ ಕೂಡಿಹಾಕಿದ್ದ ಅಧಿಕಾರಿಗಳ ಮೇಲೂ ಬಿತ್ತು ಕೇಸ್!
ಅಧಿಕಾರಿಗಳಿಗೆ ದೂರು ನೀಡಿದ ರೈತರು
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Sep 15, 2025 | 8:18 AM

Share

ಚಾಮರಾಜನಗರ, ಸೆಪ್ಟೆಂಬರ್​ 15: ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಂಚಿನ ಗ್ರಾಮದಲ್ಲಿ ಹುಲಿ ಹಿಡಿಯಲು (Tiger Capture) ವಿಫಲರಾದ ಹಿನ್ನಲೆ ರೊಚ್ಚಿಗೆದಿದ್ದ ರೈತರು ಅಧಿಕಾರಿಗಳನ್ನೇ ಬೋನಿನಲ್ಲೇ ಕೂಡಿ ಹಾಕಿದ್ದರು. ಇದು ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಕರ್ತವ್ಯಕ್ಕೆ ಅಡ್ಡಿ ಎಂದು ಐವರು ರೈತರ ಮೇಲೆ ಎಫ್​ಐಆರ್​​ ದಾಖಲಾಗಿತ್ತು. ಆದರೆ ಇದೀಗ ಅಧಿಕಾರಿಗಳ ಮೇಲೂ ಕೇಸ್ (case)​ ಬಿದ್ದಿದೆ.

ಬರೋಬ್ಬರಿ 15 ಮಂದಿ ಅರಣ್ಯ ಸಿಬ್ಬಂದಿ ಮೇಲೆ ಕೇಸ್​ ದಾಖಲು

ಹುಲಿ ಸೆರೆ ಹಿಡಿಯದ ಹಿನ್ನಲೆ ಬೋನಿನಲ್ಲಿ ಅರಣ್ಯಾಧಿಕಾರಿಗಳನ್ನ ಕೂಡಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರು, ಪ್ರತಿ ದೂರುಗಳು ದಾಖಲಾಗುತ್ತಿವೆ. ಜಮೀನಿಗೆ ನುಗ್ಗಿ ಹಲ್ಲೆ ಆರೋಪ ಹಿನ್ನಲೆ ರೈತ ಮಹಿಳೆ ಕಮಲಮ್ಮ ನೀಡಿದ ದೂರಿನ ಅನ್ವಯ ಬರೋಬ್ಬರಿ 15 ಮಂದಿ ಅರಣ್ಯ ಸಿಬ್ಬಂದಿ ಮೇಲೆ BNS ACT 2023 (U/S 109 115 (2) 74 190 126 (2) 351 (2) ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಲಿ ಹಿಡಿಯಲು ವಿಫಲರಾದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನೇ ಬೋನಿನಲ್ಲಿ ಕೂಡಿಹಾಕಿದ ಜನ!

ಇದನ್ನೂ ಓದಿ
Image
ಹುಲಿಗಳ ಅಸಹಜ ಸಾವು: ಐವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ
Image
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
Image
ಚಾಮರಾಜನಗರದಲ್ಲಿ ವ್ಯಾಘ್ರ ಅಟ್ಟಹಾಸ: ತಿಂಗಳಲ್ಲಿ 2 ಜೀವ ಬಲಿ ಪಡೆದ ನರಭಕ್ಷಕ
Image
ಚಾಮರಾಜನಗರ: ಮೂತ್ರ ವಿಸರ್ಜನೆಗೆಂದು ಹೊರ ಬಂದ ವ್ಯಕ್ತಿ ಮೇಲೆ ಹುಲಿ ದಾಳಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಂಚಿನ ಗ್ರಾಮದಲ್ಲಿ, ಹುಲಿ, ಚಿರತೆ ಕಾಟ ಮಿತಿ ಮಿರಿತ್ತು. ಜಾನುವಾರುಗಳನ್ನ ಮೃಗಗಳು ಕೊಂದು ಹಾಕಿದ್ದವು. ಅರಣ್ಯ ಇಲಾಖೆ ರೈತರ ಜಮೀನಿನಲ್ಲಿ ಬೋನಿರಿಸಿದ್ದನ್ನ ಬಿಟ್ಟರೇ, ಏನೂ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದಿದ್ದ ರೈತರು, ಜಮೀನಿನಲ್ಲಿದ್ದ ಬೋನಿನಲ್ಲೇ ಅಧಿಕಾರಿಗಳನ್ನ ಅರ್ಧ ಗಂಟೆ ಕಾಲ ಕೂಡಿ ಹಾಕಿ ಬಿಸಿ ಮುಟ್ಟಿಸಿದ್ದರು.

ಇದನ್ನೂ ಓದಿ: ಚಾಮರಾಜನಗರ: ಕೂಂಬಿಂಗ್ ಕಿಂಗ್​​ ಎಷ್ಟೇ ತಡಕಾಡಿದ್ರು ಪತ್ತೆಯಾಗದ ಹುಲಿ, ಅರಣ್ಯಾಧಿಕಾರಿಗಳೊಂದಿಗೆ ವ್ಯಾಘ್ರನ ಕಣ್ಣಾ ಮುಚ್ಚಾಲೆ!

ಮೃಗಗಳ ಸೆರೆಗೆ ಆಗ್ರಹಿಸಿ ಬಳಿಕ ಬಿಡುಗಡೆ ಮಾಡಿದ್ದರು. ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದಕ್ಕೆ, ಬಂಡೀಪುರ ಸಿಎಫ್ ಕೆರಳಿದ್ದರು. ಅವರ ಸೂಚನೆಯಂತೆ ಐವರು ರೈತರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಎಂದು ಅರಣ್ಯ ಸಿಬ್ಬಂದಿ ದೂರು ಹಿನ್ನಲೆ ಎಫ್​​ಐಆರ್​​ ದಾಖಲಿಸಲಾಗಿತ್ತು. ಇದಕ್ಕೆ ರೈತರು ಮತ್ತಷ್ಟು ಕೆರಳಿದ್ದರು. ತಕ್ಷಣವೇ ಪ್ರಕರಣ ರದ್ದು ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:16 am, Mon, 15 September 25