ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಕಾಲು ಮುರಿದ ಮಹಿಳೆಯರು: ಚಿಕಿತ್ಸೆ ಫಲಿಸದೇ ಸಾವು

ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ, ಹಸು ಮೇಯಿಸುವ ವಿಚಾರಕ್ಕೆ ಮೂವರು ಮಹಿಳೆಯರಿಂದ ಓರ್ವ ವೃದ್ಧನ ಕಾಲು ಮುರಿದಿದ್ದು, ಆಪರೇಷನ್ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಪೊಲೀಸರು ಕೇವಲ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಕುಟುಂಬಸ್ಥರು ಕೊಲೆ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದಾರೆ. ಏಪ್ರಿಲ್ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಕಾಲು ಮುರಿದ ಮಹಿಳೆಯರು: ಚಿಕಿತ್ಸೆ ಫಲಿಸದೇ ಸಾವು
ಮೃತ ವೃದ್ಧ
Edited By:

Updated on: May 18, 2025 | 2:21 PM

ಚಾಮರಾಜನಗರ, ಮೇ 18: ತಮ್ಮ ಜಮೀನಿನಲ್ಲಿ ಹಸು ಮೇಯಿಸಬೇಡ ಎಂದಿದ್ದಕ್ಕೆ ಮೂವರು ನಾರಿಮಣಿಯರು (Womens) ಓರ್ವ ವೃದ್ಧನ (old man) ಕಾಲು ಮುರಿದು ಹಾಕಿದ್ದಾರೆ. ಇದೀಗ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ ಏಪ್ರಿಲ್ 22ರಂದು ನಡೆದಿದ್ದ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲಾಗಿ ಕೇವಲ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ ಎಂದು ಮೃತ ವೃದ್ಧನ ಕುಟುಂಬಸ್ಥರಿಂದ ಆರೋಪಿಸಲಾಗಿದೆ.

ಗಡಿ ನಾಡು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೊಡಿಗಾನೆ ಗ್ರಾಮದಲ್ಲಿ ಚೆನ್ನಬಸವಯ್ಯ ಎಂಬ ವಯೋ ವೃದ್ಧ ಅಂದು ಸಂಜೆ ತಮ್ಮ ಜಮೀನಿನ ಬಳಿ ತೆರಳಿದ್ದ ವೇಳೆ ಜಮೀನಿನಲ್ಲಿ ಸಂಬಂಧಿಕರು ಹಾಗೂ ಪಕ್ಕದ ಮನೆಯವರಾದ ನಾಗರತ್ನ ತನ್ನ ಹಸುವನ್ನ ಮೇಯಲು ಬಿಟ್ಟಿದ್ದರು. ಇದನ್ನ ನೋಡಿದ ವೃದ್ಧ ಚೆನ್ನಬಸವಯ್ಯ, ಜಮೀನಿನಿಂದ ಹಸುವನ್ನ ಕರೆದುಕೊಂಡು ಹೋಗಿ ಎಂದು ಬುದ್ಧಿ ಮಾತು ಹೇಳಿದ್ದಾರೆ.

ಇದನ್ನೂ ಓದಿ: ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ರಾಸುಗಳು ಸಾವು

ಇದನ್ನೂ ಓದಿ
ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಮತ್ತೆ ಚೈತನ್ಯ:ಸರ್ಕಾರದಿಂದ ರೈತರಿಗೆ ಸವಲತ್ತು
ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಕೊರತೆ: ರಾಸುಗಳ ಮರಣ ಮೃದಂಗ
ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ!
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ

ವೃದ್ಧನ ಮಾತಿನಿಂದ ಕೆರಳಿದ ನಾಗರತ್ನ, ಚೆನ್ನಬಸವಯ್ಯ ಜೊತೆ ಜಗಳ ಶುರು ಮಾಡಿದ್ದಾರೆ. ಬಳಿಕ ಸುವಾಸಿನಿ ಹಾಗೂ ರೋಹಿಣಿ ಚೆನ್ನಬಸವಯ್ಯರ ಊರುಗೋಲು ಕಿತ್ತುಕೊಂಡು ಆತನ ಕಾಲಿಗೆ ಹೊಡೆದಿದ್ದಾರೆ. ನಾರಿಮಣಿಯರ ಆಟಾಟೋಪಕ್ಕೆ ವೃದ್ಧನ ಕಾಲಿನ ಮೂಳೆಯೇ ಮುರಿದು ಹೋಗಿದೆ.

ಇನ್ನು ಕಳೆದ ಏಪ್ರಿಲ್ 22ಕ್ಕೆ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಚೆನ್ನಬಸವಯ್ಯರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 26 ರಂದು ಚೆನ್ನಬಸವಯ್ಯರಿಗೆ ಅನಸ್ಥೇಶಿಯಾ ನೀಡಿ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆದರೆ ಚಾಮರಾಜನಗರದ ಪೂರ್ವ ಠಾಣಾ ಪೊಲೀಸರು ಕೇವಲ ಗಲಾಟೆ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಸರ್ಕಾರದಿಂದ ಉತ್ತೇಜನ, ರೈತರಿಗೆ ಸಕಲ ಸವಲತ್ತು

ಚೆನ್ನಬಸವಯ್ಯ ಸಾವನ್ನಪ್ಪಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದು ಮೃತನ ಕುಟುಂಬಸ್ಥರ ವಾದವಾಗಿದೆ. ಕೇವಲ ಎಫ್​ಐಆರ್ ರಿಜಿಸ್ಟರ್ ಮಾಡ್ಕೊಂಡು ಸುಮ್ಮನೆ ಕುಳಿತಿದ್ದಾರೆ, ಕನಿಷ್ಠ ಪಕ್ಷ ಆರೋಪಿಗಳಾದ ನಾಗರತ್ನ, ರೋಹಿಣಿ ಹಾಗೂ ಸುಹಾಸಿನಿಯನ್ನ ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ದ ಕ್ರಮ ಆಗಲೇ ಬೇಕೆಂಬುದು ಮೃತನ ಕುಟುಂಬಸ್ಥರು ಆಹ್ರಗಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us