Chamarajanagara News: ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ 2.93 ಲಕ್ಷ ರೂಪಾಯಿ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೇರೆದ ಭಕ್ತ

ಬೆಂಗಳೂರಿನ ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತ. ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಣವನ್ನು ಹಿಂದಿರುಗಿಸಲಾಗಿದೆ.

Chamarajanagara News: ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ 2.93 ಲಕ್ಷ ರೂಪಾಯಿ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೇರೆದ ಭಕ್ತ
ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ ಹಣ ಹಿಂದಿರುಗಿಸಿದ ಭಕ್ತ.
Edited By:

Updated on: Jul 31, 2022 | 9:39 AM

ಚಾಮರಾಜನಗರ: ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆ 2.93 ಲಕ್ಷ ರೂಪಾಯಿ ಭಕ್ತನ ಪಾಲಾಗಿತ್ತು. ಸದ್ಯ ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ ಹಣವನ್ನು ಭಕ್ತ ಹಿಂದಿರುಗಿಸಿದ್ದಾರೆ. ಬೆಂಗಳೂರಿನ ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತ. ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಣವನ್ನು ಹಿಂದಿರುಗಿಸಲಾಗಿದೆ. ಭಕ್ತ ನರಸಿಂಹ ಮೂರ್ತಿ, ಅಭಿಷೇಕ ಪ್ರಸಾದದ ಟಿಕೆಟ್ ಪಡೆದಿದ್ದು, ಪ್ರಸಾದದ ಚೀಲಗಳನ್ನು ನೀಡುವಾಗ ಹಣವಿದ್ದ ಚೀಲವೊಂದನ್ನು ಸಹ ಆಕಸ್ಮಿಕವಾಗಿ ನೌಕರ ನಾಗಭೂಷಣ ಎತ್ತಿಕೊಟ್ಟಿದ್ದರು. ಸಿಸಿ ಟಿವಿಯಲ್ಲೂ ಈ  ದೃಶ್ಯ ಸೆರೆಯಾಗಿತ್ತು. ಮಲೆಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಭಕ್ತ ನರಸಿಂಹಮೂರ್ತಿ ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಗಾಬರಿಗೊಂಡಿದ್ದೆ. ತಕ್ಷಣ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆ ಎಂದು ಭಕ್ತ ನರಸಿಂಹಮೂರ್ತಿ ಹೇಳಿಕೆ ನೀಡಿದರು.

Temple Money Return: ಹೃದಯ ಹಿಂಡುತ್ತೆ ಮಳೆ ಮಧ್ಯೆ ಮಗು ಮಲಗಿಸಲು ತಾಯಿ ಪಟ್ಟಂತಾ ಯಾತನೆ | Tv9 Kannada

Published On - 8:59 am, Sun, 31 July 22

Loading...
Unable to load recommendations.
Follow Us