‘ಡಾ. ರಾಜ್​​ಕುಮಾರ್​​ ಸಂಬಂಧಿ ಮನೆ ಬಳಿ ಸ್ಫೋಟಗೊಂದಿದ್ದು ನಾಡಬಾಂಬ್​​ ಅಲ್ಲ’: ಪತ್ರಿಕಾ ಪ್ರಕಟಣೆ ಮೂಲಕ ಪೊಲೀಸರಿಂದ ಮಾಹಿತಿ

ಗಾಜನೂರಿನ ಡಾ. ರಾಜ್‌ಕುಮಾರ್ ಸಂಬಂಧಿ ಮನೆ ಬಳಿ ನಡೆದ ಸ್ಫೋಟ ನಾಡಬಾಂಬ್ ಅಲ್ಲ, ಪಟಾಕಿಎಂದು ತಮಿಳುನಾಡು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದು ಕಚ್ಚಾ ಬಾಂಬ್ ದಾಳಿಯೇ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟಾಕಿ ಸ್ಫೋಟವಾದರೆ ಮನೆಯ ಬಾಗಿಲು ಒಡೆದು ಹೋಗಲು ಸಾಧ್ಯವಿದೆಯಾ? ಗಾಜುಗಳೆಲ್ಲ ಪುಡಿ ಪುಡಿಯಾಗಿದೆ. ಬಾಗಿಲು ಚೂರಾಗಿದೆ, ಸೋಫಾಗೆ ಬೆಂಕಿ ತಗುಲಿದೆ. ಇದೆಲ್ಲ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಡಾ. ರಾಜ್​​ಕುಮಾರ್​​ ಸಂಬಂಧಿ ಮನೆ ಬಳಿ ಸ್ಫೋಟಗೊಂದಿದ್ದು ನಾಡಬಾಂಬ್​​ ಅಲ್ಲ: ಪತ್ರಿಕಾ ಪ್ರಕಟಣೆ ಮೂಲಕ ಪೊಲೀಸರಿಂದ ಮಾಹಿತಿ
ಡಾ. ರಾಜ್​​ಕುಮಾರ್​​ ಅವರ ಸಂಬಂಧಿ ಮನೆಯಲ್ಲಿ ಸ್ಫೋಟ
Edited By:

Updated on: Nov 10, 2026 | 11:24 AM

ಚಾಮರಾಜನಗರ, ನವೆಂಬರ್​​ 10: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್​​ಕುಮಾರ್​​ ಅವರ ಸಂಬಂಧಿ ಮನೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ಈರೋಡ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಫೋಟಗೊಂಡಿರುವುದು ನಾಡಬಾಂಬ್​​ ಅಥವಾ ಕಚ್ಚಾ ಬಾಂಬ್​​ ಅಲ್ಲ. ಪಟಾಕಿಯ ಜೋರು ಶಬ್ದಕ್ಕೆ ಮನೆಯ ಕಿಟಕಿ ಗಾಜುಗಳು ಒಡೆದಿವೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಘಟನೆ ಸಂಬಂಧ ಸ್ಥಳೀಯ ಐವರನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟ ನಡೆದ ಸಂದರ್ಭದಲ್ಲಿ ಇವರು ಹತ್ತಿರದಲ್ಲೇ ಇದ್ದರು ಎನ್ನಲಾಗಿದೆ.

‘ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗಬಾರದು’

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರಯವ ಕುಟುಂಬಸ್ಥರು, ನಮ್ಮ ಮನೆ ಮೇಲೆ ನಡೆದಿರುವುದು ಕಚ್ಚಾ ಬಾಂಬ್ ದಾಳಿಯೇ. ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗಬಾರದು. ನಾವು ಡಾ. ರಾಜಕುಮಾರ್ ಅವರ ಸಂಬಂಧಿಕರೇ ಆಗಿದ್ದು, ಸುಳ್ಳು ಅಪಪ್ರಚಾರ ಮಾಡಬೇಡಿ. ಪಟಾಕಿ ಸ್ಫೋಟವಾದರೆ ಮನೆಯ ಬಾಗಿಲು ಒಡೆದು ಹೋಗಲು ಸಾಧ್ಯವಿದೆಯಾ? ಗಾಜುಗಳೆಲ್ಲ ಪುಡಿ ಪುಡಿಯಾಗಿದೆ. ಬಾಗಿಲು ಚೂರಾಗಿದೆ, ಸೋಫಾಗೆ ಬೆಂಕಿ ತಗುಲಿದೆ. ಇದೆಲ್ಲ ಹೇಗೆ ಸಾಧ್ಯ? ಮನೆ ಮುಂದೆ ಸಿಡಿದಿರುವುದು ಪಟಾಕಿ ಅಲ್ಲ, ಸ್ಪೋಟಕ ಎಂದು ಟಿವಿ9ಗೆ ಕುಟುಂಬಸ್ಥರು ತಿಳಿಸಿದ್ದಾರೆ.

Loading...

ಇದನ್ನೂ ಓದಿ: ಡಾ. ರಾಜಕುಮಾರ್​​ ಸಂಬಂಧಿ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ?: ನಿಗೂಢ ಸ್ಫೋಟಕ್ಕೆ ಬೆಚ್ಚಿಬಿದ್ದ ಕುಟುಂಬ

ಡಾ. ರಾಜ್​​ಕುಮಾರ್​​ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿದ್ದವು. ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್​ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿತ್ತ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಈ ನಡುವೆ ಘಟನೆ ಬಗ್ಗೆ ಈರೋಡ್ ಜಿಲ್ಲಾ ಪೊಲೀಸರು ನೀಡಿರುವ ಪತ್ರಿಕಾ ಪ್ರಕಟಣೆ ಮಹತ್ವ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us