AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಿನ ಪಕ್ಕ ಅಕ್ರಮ ರೆಸಾರ್ಟ್​! ಆದರೆ ಅದು ಮರ ಸಂಶೋಧನೆ ಕೇಂದ್ರ ಅನ್ನುತ್ತಿದ್ದಾರೆ ಚಾಮರಾಜನಗರ ಅರಣ್ಯಾಧಿಕಾರಿ

ಇತ್ತೀಚಿಗೆ ಅರಣ್ಯ ಒತ್ತುವರಿ ಮತ್ತು ಅರಣ್ಯಗಳ ಬಳಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ‌ಇಲ್ಲಿ ಇನ್ನೂ ಒಂದು ಅಕ್ರಮ ಹೆಜ್ಜೆ ಮುಂದಿಟ್ಟ ಮನುಷ್ಯ, ಹುಲಿ ರಕ್ಷಿತಾರಣ್ಯದ ಸೂಕ್ಷ್ಮ ವಲಯದಲ್ಲಿಯೇ ಖಾಸಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾನೆ.

ಕಾಡಿನ ಪಕ್ಕ ಅಕ್ರಮ ರೆಸಾರ್ಟ್​! ಆದರೆ ಅದು ಮರ ಸಂಶೋಧನೆ ಕೇಂದ್ರ ಅನ್ನುತ್ತಿದ್ದಾರೆ ಚಾಮರಾಜನಗರ ಅರಣ್ಯಾಧಿಕಾರಿ
ಕಾಡಿನ ಪಕ್ಕ ಅಕ್ರಮ ರೆಸಾರ್ಟ್​! ಆದರೆ ಅದು ಮರ ಸಂಶೋಧನೆ ಕೇಂದ್ರ ಅನ್ನುತ್ತಿದ್ದಾರೆ ಚಾಮರಾಜನಗರ ಅರಣ್ಯಾಧಿಕಾರಿ
TV9 Web
| Updated By: ಸಾಧು ಶ್ರೀನಾಥ್​|

Updated on: Dec 02, 2022 | 1:09 PM

Share

ಇತ್ತೀಚಿಗೆ ಅರಣ್ಯ ಒತ್ತುವರಿ ಮತ್ತು ಅರಣ್ಯಗಳ ಬಳಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ‌ಇಲ್ಲಿ ಇನ್ನೂ ಒಂದು ಅಕ್ರಮ ಹೆಜ್ಜೆ ಮುಂದಿಟ್ಟ ಮನುಷ್ಯ, ಹುಲಿ (Tiger) ರಕ್ಷಿತಾರಣ್ಯದ ಸೂಕ್ಷ್ಮ ವಲಯದಲ್ಲಿಯೇ ಖಾಸಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾನೆ. ಲೇ ಔಟ್ ನಿರ್ಮಾಣವಾಗುತ್ತಿದ್ದರೂ (Illegal layout) ಅರಣ್ಯ ಇಲಾಖೆ ಮಾತ್ರ ಅದು ಲೇ ಔಟ್ ಅಲ್ಲ ಅಂತಾ ವಾದಿಸುತ್ತಿದೆ. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ…

ಬಿಳಿಗಿರಿ ಹುಲಿ ರಕ್ಷಿತಾರಣ್ಯ ಪಕ್ಕದಲ್ಲೆ ಇರುವ ಭೂಮಿ… ಖಾಸಗಿ ಒಡೆತನ ಭೂಮಿಯಾದರೂ ಸೂಕ್ಷ ಪರಿಸರ ವಲಯಕ್ಕೆ ಸೇರುವ ಜಾಗ ಇದಾಗಿದೆ. ಇಂತಹ ಸ್ಥಳದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನ ನಡೆಸಬಾರದು ಅನ್ನೋ ಕಾನೂನಿದೆ. ಆದ್ರೆ ಇಲ್ಲಿನ ಸ್ಥಳೀಯರೊಬ್ಬರು ಅದೇ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹೌದು, ಚಾಮರಾಜನಗರ (Chamarajanagar) ತಾಲೂಕಿನ ಬಿಳಿಗಿರಿ ಹುಲಿರಕ್ಷಿತಾರಣ್ಯದ (BRT Tiger Reserve forest) ಪುಣಜನೂರು ವಲಯ ಇದು.

ಪುಣಜನೂರು ಗ್ರಾಮದ ಬಳಿ ರಕ್ಷಿತಾರಣ್ಯದ ಪಕ್ಕದಲ್ಲೆ ಇರುವ ಈ ಭೂಮಿ ಮೊದಲು ಅರಣ್ಯ ಇಲಾಖೆಗೆ ಸೇರಿದ್ದ ಜಾಗವಾಗಿತ್ತು. ಕೆಲವು ವರ್ಷಗಳ ಹಿಂದೆ ಇದನ್ನ ಭೂರಹಿತರಿಗೆ ನೀಡಲಾಗಿತ್ತು. ಆದ್ರೆ ಇದನ್ನ ಹಲವರು ಕೆಲ ವರ್ಷಗಳ ನಂತರ ಬಂಡವಾಳಶಾಹಿಗಳಿಗೆ ಮಾರಾಟ ಮಾಡಿದ್ರು. ಮಾರಾಟವಾಗಿದ್ರು ಸಹ ಇಲ್ಲಿ ಬೇಸಾಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

Illegal layout at BRT Tiger Reserve forest in chamarajanagar

ಆದ್ರೆ ಕೆಲವು ಪ್ರಭಾವಿಗಳು ಇದೀಗಾ ಈ ಜಾಗವನ್ನ ಅಭಿವೃದ್ಧಿ ಪಡಿಸಿ ಲೇಔಟ್ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆ ಸ್ಥಳದಲ್ಲೆ ಅವರು ಲೇಔಟ್ ಸೈಟ್ ನಕ್ಷೆಯನ್ನ ಅಳವಡಿಸಿ ಜಾಹಿರಾತು ಫಲಕವನ್ನು ಅಳವಡಿಸಿದ್ದಾರೆ. ಇದರಿಂದ ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳಬೇಕು ಅಂತ ಸ್ಥಳಿಯ ಹೋರಾಟಗಾರರಾದ ಪುಣಜನೂರು ದೊರೆಸ್ವಾಮಿ ದೂರು ನೀಡಿದ್ದಾರೆ.

ಇನ್ನು ಈ‌ ಜಾಗದ ವಿವಾದ ಹೊಸದೇನಲ್ಲ. ಈ‌ ಹಿಂದೆ ಕೂಡ ಈ ಸ್ಥಳದಲ್ಲಿ ರೆಸಾರ್ಟ್ ನಿರ್ಮಾಣ‌ ಮಾಡಲು ಮುಂದಾಗಿದ್ರು. ಆದ್ರೆ ಈ ಬಗ್ಗೆ ಹೋರಾಟ ನಡೆಸಿ ನಿಲ್ಲಿಸಿದ್ರು. ಇದೀಗಾ ಲೇಔಟ್ ನಿರ್ಮಾಣ ಮಾಡಲು ಮತ್ತೊಬ್ಬರು ಮುಂದಾಗಿದ್ದಾರೆ. ಆದ್ರೆ ಈ ಬಗ್ಗೆ ಡಿಸಿಎಫ್ ಬಿಆರ್ ಟಿ ದೀಪಾ ಕಂಟ್ರಾಕ್ಟರ್ ಅವರನ್ನ ಕೇಳಿದ್ರೆ, ಅಧಿಕಾರಿಗಳು ಮಾತ್ರ ಅಲ್ಲಿ ಲೇಔಟ್ ನಿರ್ಮಾಣವಾಗುತ್ತಿಲ್ಲ. ‌ಅಲ್ಲಿ ಮರ ನೆಟ್ಟು ಸಂಶೋಧನೆ ನಡೆಸುವ ಉದ್ದೇಶ ಇದೆ. ಇದಕ್ಕೆ ತಮಿಳುನಾಡಿನ ಫಾರೆಸ್ಟರಿ ಕಾಲೇಜಿನ ಸಹಯೋಗ ಇದೆ ಅನ್ನೊ ಉತ್ತರ ಕೊಡುತ್ತಿದ್ದಾರೆ.

ಅಲ್ಲಿ ಸಂಶೋಧನೆ ಉದ್ದೇಶವಾಗಿದ್ರೆ ಲೇ ಔಟ್​ ಮಾದರಿಯಲ್ಲಿ ಸೈಟ್ ವಿಂಗಡನೆ ಮಾಡಿದ್ದಾದರೂ ಏಕೆ? ಜೊತೆಗೆ ಸೈಟ್ ಮಾಹಿತಿ ಒಳಗೊಂಡ ನಕ್ಷೆಯನ್ನ ಅಳವಡಿಸಿದ್ದೇಕೆ ಅನ್ನೋ ಪ್ರಶ್ನೆ ಮೂಡಿದೆ. ಒಟ್ಟಾರೆ, ಇಲಾಖೆಯವರಿಗೆ ಡೆವಲಪರ್ ಸುಳ್ಳು ದಾಖಲೆ ನೀಡಿದ್ದಾರಾ ಅಥವಾ ಇಲಾಖೆಯವರೆ ಅಕ್ರಮದಲ್ಲಿ ಶಾಮೀಲಾಗಿದ್ದಾರಾ ಎಂಬುದು ಹೆಚ್ಚಿನ ತನಿಖೆ ಮಾಡಿದ್ರೆ ಗೊತ್ತಾಗಲಿದೆ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ)