ಎಗ್ಗಿಲ್ಲದೇ ನಡೀತಿದೆ ಹಸುಗಳ ಸಾಗಾಟ, ದಂಧೆ ಕಂಡೂ ಕಣ್ಮುಚ್ಚಿ ಕುಳಿತಿದೆಯಾ ಖಾಕಿ?
ಚಾಮರಾಜನಗರ: ಅಲ್ಲಿ ಹೊರರಾಜ್ಯಗಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗ್ತಿದೆ.. ಕ್ಯಾಂಟರ್ಗಳಲ್ಲಿ ತುಂಬಿಕೊಂಡು ಗೋ ಸಾಗಾಟದ ದಂಧೆ ಜೋರಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಪೊಲೀಸ್ರು ಸೈಲೆಂಟ್ ಆಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರವಾಗಿ ಕಸಾಯಿಖಾನೆಗಳಿಗೆ ಹಸುಗಳ ಸಾಗಾಟ! ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕೇರಳ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿದೆ. ಇಲ್ಲಿಂದ ಕೇರಳ ಹಾಗೂ ತಮಿಳುನಾಡು ಕಸಾಯಿಖಾನೆಗಳಿಗೆ ಹಸುಗಳನ್ನು ಸಾಗಿಸುವ ದಂಧೆ ಜೋರಾಗಿದೆ. ಚಾಮರಾಜನಗರ ಜಿಲ್ಲೆಯ ವಿವಿಧೆಡೆ ನಡೆಯೋ ಸಂತೆಗಳಲ್ಲಿ ದನಕರುಗಳನ್ನು ಖರೀದಿಸಿ, ಅಣ್ಣೂರು ಕೇರಿ ಬಳಿ ಸ್ಟಾಕ್ ಮಾಡ್ಲಾಗುತ್ತೆ. ಬಳಿಕ ಕ್ಯಾಂಟರ್ಗಳಲ್ಲಿ […]
ಚಾಮರಾಜನಗರ: ಅಲ್ಲಿ ಹೊರರಾಜ್ಯಗಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗ್ತಿದೆ.. ಕ್ಯಾಂಟರ್ಗಳಲ್ಲಿ ತುಂಬಿಕೊಂಡು ಗೋ ಸಾಗಾಟದ ದಂಧೆ ಜೋರಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಪೊಲೀಸ್ರು ಸೈಲೆಂಟ್ ಆಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಿರಂತರವಾಗಿ ಕಸಾಯಿಖಾನೆಗಳಿಗೆ ಹಸುಗಳ ಸಾಗಾಟ! ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕೇರಳ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿದೆ. ಇಲ್ಲಿಂದ ಕೇರಳ ಹಾಗೂ ತಮಿಳುನಾಡು ಕಸಾಯಿಖಾನೆಗಳಿಗೆ ಹಸುಗಳನ್ನು ಸಾಗಿಸುವ ದಂಧೆ ಜೋರಾಗಿದೆ. ಚಾಮರಾಜನಗರ ಜಿಲ್ಲೆಯ ವಿವಿಧೆಡೆ ನಡೆಯೋ ಸಂತೆಗಳಲ್ಲಿ ದನಕರುಗಳನ್ನು ಖರೀದಿಸಿ, ಅಣ್ಣೂರು ಕೇರಿ ಬಳಿ ಸ್ಟಾಕ್ ಮಾಡ್ಲಾಗುತ್ತೆ. ಬಳಿಕ ಕ್ಯಾಂಟರ್ಗಳಲ್ಲಿ ತುಂಬಿ ನೆರೆ ರಾಜ್ಯಗಳ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದೆ.
ಕ್ಯಾಂಟರ್ಗಳು ಮೇಲ್ನೋಟಕ್ಕೆ ಗೂಡ್ಸ್ ವೆಹಿಕಲ್ಸ್ಗಳಂತಿದ್ದು, ನೋಂದಣಿ ಸಂಖ್ಯೆಯನ್ನು ಮರೆ ಮಾಚಲಾಗಿರುತ್ತೆ. ಕೆಲವು ವಾಹನಗಳಿಗಂತೂ ನೋಂದಣಿ ಫಲಕವೇ ಇರುವುದಿಲ್ಲ. ಪ್ರತಿನಿತ್ಯ ನೂರಾರು ಗೋವುಗಳು ಕಸಾಯಿಖಾನೆಗೆ ಸಾಗಿಸಲಾಗಿತ್ತಿದ್ರೂ, ಸ್ಥಳೀಯ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಮೌನವಹಿಸಿದ್ದಾರೆ. ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಿತ್ಯ ಹಸುಗಳನ್ನು ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತೆ.. ಇದಕ್ಕೆ ಸ್ಥಳೀಯ ಶಾಸಕ ನಿರಂಜನ್ ಕುಮಾರ್ ಹಾಗೂ ಪೊಲೀಸ್ರ ಬೆಂಬಲ ಇದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಎಸ್ಪಿ ಅವ್ರನ್ನು ಕೇಳಿದ್ರೆ, ಇಷ್ಟೆಲ್ಲಾ ನಡೀತಿರೋದು ನಮ್ಮ ಗಮನಕ್ಕೆ ಬಂದಿಲ್ಲ.
ಇನ್ನು ಮುಂದೆ ಗೋವುಗಳ ಅಕ್ರಮ ಸಾಗಾಣಿಕೆ ತಡೆಗಟ್ಟಲು ಎಲ್ಲಾ ಚೆಕ್ ಪೋಸ್ಟ್ಗಳಲ್ಲೂ ತಪಾಸಣೆ ನಡೆಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಒಟ್ನಲ್ಲಿ, ನಿತ್ಯ ಹಲವಾರು ಗೋವುಗಳು ಕಟುಕರ ಪಾಲಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿಗಳ ಮೂಲಕವೇ ದನಕರುಗಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ.
Published On - 2:53 pm, Sat, 1 February 20