ಚಾಮರಾಜನಗರದಲ್ಲಿ ಈ ಬಾರಿ ಅದ್ದೂರಿ ದಸರಾ ಮಹೋತ್ಸವ: ಏನೇನು ವಿಶೇಷತೆ? ಇಲ್ಲಿದೆ ಮಾಹಿತಿ

ಚಾಮರಾಜನಗರದಲ್ಲಿ ಕಳೆದ ವರ್ಷ ಬರಗಾಲ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದಸರಾ ಮಹೋತ್ಸವವನ್ನು ಸರಳವಾಗಿ ಆಯೋಜಿಸಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಹಾಗಿದ್ದರೆ ಈ ಬಾರಿ ಚಲುವ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮ ಯಾವ ರೀತಿ ಇರುತ್ತೆ? ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುತ್ತೆ? ಇಲ್ಲಿದೆ ಓದಿ.

ಚಾಮರಾಜನಗರದಲ್ಲಿ ಈ ಬಾರಿ ಅದ್ದೂರಿ ದಸರಾ ಮಹೋತ್ಸವ: ಏನೇನು ವಿಶೇಷತೆ? ಇಲ್ಲಿದೆ ಮಾಹಿತಿ
ಚಾಮರಾಜನಗರ ದಸರಾ ಸಭೆ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ವಿವೇಕ ಬಿರಾದಾರ

Updated on: Sep 24, 2024 | 12:24 PM

ಚಾಮರಾಜನಗರ, ಸೆಪ್ಟೆಂಬರ್​ 24: ನವರಾತ್ರಿ ವೈಭವಕ್ಕೆ ಕೇವಲ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದೆ. ಕಳೆದ ವರ್ಷ ಬರಗಾಲದ ನಿಮಿತ್ತ ಸಪ್ಪೆಯಾಗಿದ್ದ ನಾಡಹಬ್ಬ ದಸರಾ (Dasara) ಈ ಭಾರಿ ಅದ್ದೂರಿಯಾಗಿ ನಡೆಯಲಿದೆ. ಅಕ್ಟೋಬರ್​ 7, 8 ಮತ್ತು 9 ಮೂರು ದಿನಗಳ ಕಾಲ ಚಾಮರಾಜನಗರ ದಸರಾ ಮಹೋತ್ಸವ ನಡೆಯಲಿದೆ. ಜಾನಪದ ಕಲೆಗಳ ತವರೂರಾದ ಚಾಮರಾಜನಗರದಲ್ಲಿ (Chamarajanagar) ಈ ಬಾರಿ ಬರೋಬ್ಬರಿ ಎರಡು ಕೋಟಿ ವೆಚ್ಛದಲ್ಲಿ ದಸರಾ ಹಬ್ಭವನ್ನು ಆಚರಿಸಲು ಚಾಮರಾಜನಗರ ಜಿಲ್ಲಾಡಳಿತ ಮುಂದಾಗಿದೆ. ಈ ಬಾರಿ ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೂ ಬರೋಬ್ಬರಿ 15 ಲಕ್ಷ ವೆಚ್ಚದಲ್ಲಿ ಕಲರ್ ಫುಲ್ ಲೈಟಿಂಗ್ ಮಾಡಲಾಗಿದೆ. ಈ ಬಾರಿ ಗಜಪಡೆಯನ್ನು ಕರೆತಂದು ಮೈಸೂರು ದಸರಾ ಜಂಬೂ ಸವಾರಿ ಮಾದರಿಯಲ್ಲೇ ಈ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಜಿಲ್ಲಾಡಳಿತ ತಯಾರಿ ನಡೆಸಿದೆ.

ಚಾಮರಾಜನಗರ ಜಾನಪದ ಕಲೆಗಳ ತವರೂರು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು 60 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿಲಿವೆ. ಈ ಬಾರಿ ಯುವ ದಸರಾಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು 1980 ರಲ್ಲಿ ಕೊನೆಗೊಂಡ ಜನನ ಮಂಟಪದ ಚಾಮರಾಜೇಶ್ವರ ದರ್ಬಾರ್ ಕಾರ್ಯಕ್ರಮ ಈ ಬಾರಿ ಮತ್ತೆ ಚಾಮರಾಜೇಶ್ವರ ದರ್ಬಾರ್ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಜೊತೆಗೆ ರೈತ ದಸರಾ, ಮಹಿಳಾ ದಸರಾ ಕಾರ್ಯಕ್ರಮಗಳು ಸಹ ಕಣ್ಮನ ಸೆಳೆಯಲಿದೆ.

ಇದನ್ನೂ ಓದಿ: ಮೈಸೂರು ದಸರಾ ಗೋಲ್ಡ್​ ಕಾರ್ಡ್ ವ್ಯವಸ್ಥೆ: ದರ ಎಷ್ಟು, ಖರೀದಿ ಹೇಗೆ? ಇದರ ಲಾಭವೇನು?

ಈ ಬಾರಿಯ ದಸರಾಕ್ಕೆ ವರನಟ ಡಾ.ರಾಜ್ ಕುಮಾರ್ ಅವರ ಪುತ್ರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ನಿರ್ಧರಿಸಲಾಗಿದೆ. ಶಿವರಾಜ್ ಕುಮಾರ್ ಅವರನ್ನು ಚಲುವ ಚಾಮರಾಜನಗರ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡುವ ಸಾದ್ಯತೆ ಕೂಡ ಇದೆ. ಒಟ್ಟಾರೆ ಈ ಬಾರಿ ಚಲುವ ಚಾಮರಾಜನಗರ ದಸರಾ ಮಹೋತ್ಸವ 2024 ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದು ಚಾಮರಾಜನಗರ ಜನತೆಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ