AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ; ಸಾಲ ಮಾಡಿ ಕಟ್ಟಿದ್ದ ಸೂರು ವಯನಾಡು ಭೂಕುಸಿತಕ್ಕೆ ಸರ್ವನಾಶ, ಮಗಳು ಅಳಿಯನ ಸಾವಿನ ಸುದ್ದಿ ಕೇಳಿ ಗಳಗಳನೆ ಅತ್ತ ತಂದೆ

ದೇವರನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಗಡಿನಾಡು ಚಾಮರಾಜನಗರದ ನಾಲ್ಕು ಮಂದಿ ಉಸಿರು ಚೆಲ್ಲಿದ್ದಾರೆ. ಹೊಟ್ಟೆ ಪಾಡಿಗಾಗಿ ಚಹಾ ಎಸ್ಟೇಟ್​​ನಲ್ಲಿ ಬದುಕು ಕಟ್ಟಿಕೊಂಡಿದ್ದ ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇತ್ತ ಚಾಮರಾಜನಗರದಲ್ಲಿ ಮಗಳು, ಅಳಿಯನ ಸಾವಿನ ಸುದ್ದಿ ಕೇಳಿ ತಂದೆ ಗಳಗಳನೆ ಅತ್ತಿದ್ದಾರೆ.

ಚಾಮರಾಜನಗರ; ಸಾಲ ಮಾಡಿ ಕಟ್ಟಿದ್ದ ಸೂರು ವಯನಾಡು ಭೂಕುಸಿತಕ್ಕೆ ಸರ್ವನಾಶ, ಮಗಳು ಅಳಿಯನ ಸಾವಿನ ಸುದ್ದಿ ಕೇಳಿ ಗಳಗಳನೆ ಅತ್ತ ತಂದೆ
ಟಿವಿ9 ಜತೆ ಅಳಲುತೋಡಿಕೊಂಡ ನಂಜುಂಡ ಶೆಟ್ಟಿ
ಸೂರಜ್ ಪ್ರಸಾದ್ ಎಸ್.ಎನ್
| Updated By: Ganapathi Sharma|

Updated on:Aug 01, 2024 | 9:24 AM

Share

ಚಾಮರಾಜನಗರ, ಆಗಸ್ಟ್ 1: ಮನೆ ಮುಂದೆ ಸೇರಿರುವ ಗ್ರಾಮಸ್ಥರು, ಗಳ ಗಳನೆ ಅಳುತ್ತಾ ಕಣ್ಣೀರು ಹಾಕುತ್ತಿರುವ ವಯೋ ವೃದ್ಧ, ಆತಂಕದಲ್ಲೇ ನಿಂತಿರುವ ಮನೆಯ ಹೆಂಗಸರು, ಇವರ ರೋದನೆ ನೋಡುತ್ತ ಮಮ್ಮಲ ಮರಗುತ್ತಿರುವ ಗ್ರಾಮಸ್ಥರು. ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದಲ್ಲಿ. ದೇವರನಾಡು ಕೇರಳದ ವಯನಾಡು ಜಿಲ್ಲೆಯ ಚೂರಲಮಲದ ಚಹಾ ಎಸ್ಟೇಟ್​​ನಲ್ಲಿ ಕೂಲಿ ಮಾಡುತ್ತಾ ಇದ್ದ ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಗುಡ್ಡ ಕುಸಿತದಲ್ಲಿ ಸಾವಿಗೀಡಾಗಿದ್ದಾರೆ. ಮಗಳು ಹಾಗೂ ಅಳಿಯನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಂದೆ ನಂಜುಂಡ ಶೆಟ್ಟಿ ಗಳ ಗಳನೆ ಅಳುತ್ತಾ ‘ಟಿವಿ9’ ಬಳಿ ನೋವು ತೋಡಿಕೊಂಡಿದ್ದಾರೆ.

30 ವರ್ಷಗಳಿಂದ ಚುರವಮಲದಲ್ಲಿ ರತ್ನಮ್ಮ ಹಾಗೂ ರಾಜೇಂದ್ರ ಟಿ ಎಸ್ಟೇಟ್​​ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಜೊತೆಗೆ ತಂದೆ ನಂಜುಂಡ ಶೆಟ್ಟಿ ಹಾಗೂ ತಾಯಿ ಶಿವಮ್ಮ ಕೂಡ ಇದ್ದರೂ ವಯಸ್ಸಾದ ಕಾರಣ ಇವರು ತಾಮರಾಜನಗರದ ಇರಸಲವಾಡಿ ಗ್ರಾಮಕ್ಕೆ ಮರಳಿದ್ದರು. ಆದರೆ ಚೂರಲಮಲದಲ್ಲೇ ಬದುಕು ಕಟ್ಟಿ ಕೊಂಡಿದ್ದ ರತ್ನಮ್ಮ ದಂಪತಿ ಕಳೆದ 6 ತಿಂಗಳ ಹಿಂದೆಯಷ್ಟೇ ಸಾಲ ಸೂಲ ಮಾಡಿ ಒಂದು ಸೂರನ್ನ ಕಟ್ಟಿ ಕೊಂಡಿದ್ದರು. ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿ ಸಂಬಂದಿಗಳನ್ನ ಕರೆಸಿ ಊಟ ಹಾಕಿದ್ದರು. ಆದರೆ ಈಗ ಸಂಭವಿಸಿದ ಗುಡ್ಡ ಕುಸಿತದಲ್ಲಿ ರತ್ನಮ್ಮ ದಂಪತಿ ಅಸುನೀಗಿದ್ದಾರೆ.

Wayanad Landslide, Chamarajanagar family tragic end in horrible Hill collapse, Kannada news

ವಯನಾಡಿನ ಚೂರಮಲದಲ್ಲಿ ರಕ್ಷಣಾ ಕಾರ್ಯಾಚರಣೆ

ತಂದೆ ನಂಜುಂಡ ಶೆಟ್ಟಿ ಮಗಳು ಹಾಗೂ ಅಳಿಯನ ಮೃಚದೇಹವನ್ನು ಚಾಮರಾಜನಗರಕ್ಕೆ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಮಗಳು ಅಳಿಯನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದಷ್ಟು ಬೇಗ ಮೃತ ದೇಹಗಳನ್ನು ಇರಸಲವಾಡಿ ಗ್ರಾಮಕ್ಕೆ ಜಿಲ್ಲಾಡಳಿತ ತಂದು ಕೊಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಗುಡ್ಡ ಕುಸಿತ: ಹೊಸ ಮನೆ ಕೊಂಡ ಸಂತಸದಲ್ಲೇ ಜಲಸಮಾಧಿಯಾದ ಕರ್ನಾಟಕದ ದಂಪತಿ

ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾರ್ಯಾಚರಣೆಯೂ ಮುಂದುವರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 am, Thu, 1 August 24